ಭಾರತದಂತಹ ಸ್ವತಂತ್ರ ದೇಶಗಳಿಗೆ ಅಮೆರಿಕ ಡಿಕ್ಟೇಟ್ ಮಾಡುತ್ತಿದೆ: ಇರಾನ್

ಅಮೆರಿಕದ ಈ ಬಲವಂತದ ತಾರತಮ್ಯದ ಕ್ರಮಗಳು ಅಂತರರಾಷ್ಟ್ರೀಯ ಕಾನೂನು ಮತ್ತು ರಾಷ್ಟ್ರೀಯ ಸಾರ್ವಭೌಮತ್ವದ ತತ್ವಗಳನ್ನು ಉಲ್ಲಂಘಿಸುತ್ತವೆ.
Donald Trump
ಡೊನಾಲ್ಡ್ ಟ್ರಂಪ್online desk
Updated on

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ.25 ರಷ್ಟು ಸುಂಕ ವಿಧಿಸುವ ಘೋಷಣೆಯನ್ನು ಟೀಕಿಸಿದ ಭಾರತದಲ್ಲಿನ ಇರಾನ್ ರಾಯಭಾರ ಕಚೇರಿ, ಇರಾನ್ ಮತ್ತು ಭಾರತದಂತಹ ಸ್ವತಂತ್ರ ರಾಷ್ಟ್ರಗಳಿಗೆ ವಾಷಿಂಗ್ಟನ್ ಡಿಕ್ಟೇಟ್ ಮಾಡುತ್ತಿದೆ ಎಂದು ಗುರುವಾರ ಹೇಳಿದೆ.

ಅಮೆರಿಕವು "ಆರ್ಥಿಕತೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುವುದನ್ನು ಮತ್ತು ಇರಾನ್ ಹಾಗೂ ಭಾರತದಂತಹ ಸ್ವತಂತ್ರ ರಾಷ್ಟ್ರಗಳ ಮೇಲೆ ತನ್ನ ಇಚ್ಛೆಯನ್ನು ಡಿಕ್ಟೇಟ್ ಮಾಡಲು ನಿರ್ಬಂಧಗಳನ್ನು ಅಸ್ತ್ರವಾಗಿ ಬಳಸುವುದನ್ನು" ಮುಂದುವರೆಸಿದೆ. ಇದು ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿದೆ ಎಂದು ಇರಾನ್ ಹೇಳಿದೆ.

ಯುನೈಟೆಡ್ ಸ್ಟೇಟ್ಸ್ ಆರ್ಥಿಕತೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುವುದನ್ನು ಮುಂದುವರೆಸಿದೆ ಮತ್ತು ಇರಾನ್ ಮತ್ತು ಭಾರತದಂತಹ ಸ್ವತಂತ್ರ ರಾಷ್ಟ್ರಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಡ್ಡಿಪಡಿಸಲು ನಿರ್ಬಂಧಗಳನ್ನು ಅಸ್ತ್ರವಾಗಿ ಬಳಸುತ್ತಿದೆ.

Donald Trump
ಇರಾನ್ ಪೆಟ್ರೋಲಿಯಂ ಉತ್ಪನ್ನಗಳ ವ್ಯಾಪಾರ: ಆರು ಭಾರತೀಯ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ

ಅಮೆರಿಕದ ಈ ಬಲವಂತದ ತಾರತಮ್ಯದ ಕ್ರಮಗಳು ಅಂತರರಾಷ್ಟ್ರೀಯ ಕಾನೂನು ಮತ್ತು ರಾಷ್ಟ್ರೀಯ ಸಾರ್ವಭೌಮತ್ವದ ತತ್ವಗಳನ್ನು ಉಲ್ಲಂಘಿಸುತ್ತವೆ. ಇದು ಆಧುನಿಕ ರೂಪದ ಆರ್ಥಿಕ ಸಾಮ್ರಾಜ್ಯಶಾಹಿಯನ್ನು ಪ್ರತಿನಿಧಿಸುತ್ತದೆ ಎಂದು ಇರಾನ್ ರಾಯಭಾರ ಕಚೇರಿ X ನಲ್ಲಿ ಪೋಸ್ಟ್ ಮಾಡಿದೆ.

ಇರಾನ್ ವಿರುದ್ಧ ಹೇರಲಾಗಿರುವ ನಿರ್ಬಂಧಕ್ಕೆ ಸಂಬಂಧಿಸಿದಂತೆ ತನ್ನ ಇತ್ತೀಚಿನ ಕ್ರಮದ ಭಾಗವಾಗಿ ಅಮೆರಿಕವು ಆ ದೇಶದಿಂದ ತೈಲ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಖರೀದಿಸುವ ಎಂಟು ಭಾರತೀಯ ಕಂಪನಿಗಳು ಹಾಗೂ ಮುಹಮ್ಮದ್ ಹುಸೇನ್ ಶಮ್ಖಾನಿ ಅವರ ನಿಯಂತ್ರಣದಲ್ಲಿರುವ ಹಡಗು ಸಾಮ್ರಾಜ್ಯದ ಭಾಗವಾಗಿ ಗುರುತಿಸಿಕೊಂಡಿರುವ ಐವರು ಭಾರತೀಯ ಪ್ರಜೆಗಳ ವಿರುದ್ಧ ನಿರ್ಬಂಧಗಳನ್ನು ಹೇರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com