ಆಹಾರ ಪದಾರ್ಥಗಳ ಮೇಲೆ ಬೂಸ್ಟ್, ಫಂಗಸ್ ಪತ್ತೆ: Zepto ವೇರ್ ಹೌಸ್ ಲೈಸೆನ್ಸ್ ರದ್ದು!

ವೇರ್ ಹೌಸ್ ನಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು, ಕೆಟ್ಟು ಹೋಗಿದ್ದ ತಿನಿಸುಗಳು, ಬೂಸ್ಟ್, ಫಂಗಸ್ ಸಹಿತ ಹಣ್ಣು ತರಕಾರಿಗಳು ಕಂಡುಬಂದಿವೆ.
Zepto's Warehouse Licence Suspended
Zepto ವೇರ್ ಹೌಸ್ ಲೈಸೆನ್ಸ್ ರದ್ದು!
Updated on

ಮುಂಬೈ: ಆಹಾರ ಪದಾರ್ಥಗಳ ಮೇಲೆ ಬೂಸ್ಟ್, ಫಂಗಸ್ ಕಂಡು ಬಂದ ಹಿನ್ನಲೆಯಲ್ಲಿ ಖ್ಯಾತ Fast ಡೆಲಿವರಿ ಆ್ಯಪ್ ಆಧಾರಿತ ಸಂಸ್ಥೆ Zepto ವೇರ್ ಹೌಸ್ ಅನ್ನು ಅಧಿಕಾರಿಗಳು ಮುಚ್ಚಿದ್ದು, ಅದರ ಪರವಾನಗಿ ರದ್ದು ಮಾಡಿದ್ದಾರೆ.

ಹೌದು.. ಆಹಾರ ಪದಾರ್ಥಗಳು, ಅವಧಿ ಮೀರಿದ ಉತ್ಪನ್ನಗಳು ಮತ್ತು ನೈರ್ಮಲ್ಯವಿಲ್ಲದ ಶೇಖರಣಾ ಪರಿಸ್ಥಿತಿಗಳಲ್ಲಿ ಶಿಲೀಂಧ್ರಗಳ ಬೆಳವಣಿಗೆ - ತೇವ ಮತ್ತು ಅಸ್ತವ್ಯಸ್ತ ಶೇಖರಣೆ ಆರೋಪದ ಮೇರೆಗೆ ಮುಂಬೈನ Zepto ವೇರ್ ಹೌಸ್ ಲೈಸೆನ್ಸ್ ಅನ್ನು ಅಧಿಕಾರಿಗಳು ರದ್ದುಗೊಳಿಸಿದ್ದಾರೆ.

ಮಹಾರಾಷ್ಟ್ರದ ಧಾರವಿಯಲ್ಲಿರುವ ಜೆಪ್ಟೋದ ಗೋದಾಮಿಗೆ ಭೇಟಿ ನೀಡಿದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಅಧಿಕಾರಿಗಳು ಇಂದು ಪರಿಶೀಲನೆ ನಡೆಸಿದರು.

ಈ ವೇಳೆ ವೇರ್ ಹೌಸ್ ನಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು, ಕೆಟ್ಟು ಹೋಗಿದ್ದ ತಿನಿಸುಗಳು, ಬೂಸ್ಟ್, ಫಂಗಸ್ ಸಹಿತ ಹಣ್ಣು ತರಕಾರಿಗಳು ಕಂಡುಬಂದಿವೆ.

ಹೀಗಾಗಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯ ಗಂಭೀರ ಅಕ್ರಮಗಳು ಮತ್ತು ಅನುಸರಣೆಯನ್ನು ಗಮನಿಸಿರುವ ಎಫ್‌ಡಿಎ, ಆನ್‌ಲೈನ್ ದಿನಸಿ ವಿತರಣಾ ವೇದಿಕೆಯಾದ ಜೆಪ್ಟೋ ಪ್ರೈವೇಟ್ ಲಿಮಿಟೆಡ್‌ನ ಆಹಾರ ವ್ಯವಹಾರ ಪರವಾನಗಿಯನ್ನು ಅಮಾನತುಗೊಳಿಸಿದೆ.

ಇದೀಗ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಆಂತರಿಕ ಪರಿಶೀಲನೆಯನ್ನು ಪ್ರಾರಂಭಿಸಿದ್ದು, ಅದಾಗ್ಯೂ ತನ್ನ ಗ್ರಾಹಕರಿಗೆ ಸುರಕ್ಷಿತ ಉತ್ಪನ್ನಗಳನ್ನು ಒದಗಿಸಲು ಬದ್ಧವಾಗಿದೆ ಎಂದು ಜೆಪ್ಟೋ ಹೇಳಿಕೆಯಲ್ಲಿ ತಿಳಿಸಿದೆ.

Zepto's Warehouse Licence Suspended
ಶರ್ಮಿಷ್ಠಾ ಪನೋಲಿ ಬಂಧನಕ್ಕೆ ಪವನ್ ಕಲ್ಯಾಣ್ ಆಕ್ರೋಶ; ಹಿಂದೂ ಧರ್ಮವನ್ನು ಟೀಕಿಸಿದವರ ಕಥೆಯೇನು? ಅವರಿಗೆ ಶಿಕ್ಷೆ ಯಾವಾಗ?

Zepto ಸ್ಪಷ್ಟನೆ

'ಜೆಪ್ಟೋದಲ್ಲಿ, ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಅತ್ಯುನ್ನತ ಮಾನದಂಡಗಳನ್ನು ಕಾಪಾಡಿಕೊಳ್ಳುವುದು ಮಾತುಕತೆಗೆ ಒಳಪಡುವುದಿಲ್ಲ. ನಾವು ಈಗಾಗಲೇ ಆಂತರಿಕ ಪರಿಶೀಲನೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಪೂರ್ಣ ಮತ್ತು ತ್ವರಿತ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ.

ಗುರುತಿಸಲಾದ ಲೋಪಗಳನ್ನು ಸರಿಪಡಿಸಲು ಮತ್ತು ನಮ್ಮ ಗ್ರಾಹಕರಿಗೆ ಉತ್ತಮ ಮತ್ತು ಸುರಕ್ಷಿತ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸಲು ನಮ್ಮ ಪ್ರಕ್ರಿಯೆಗಳನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ನಿಯಂತ್ರಕ ಬಾಧ್ಯತೆಗಳು ಮತ್ತು ಅನ್ವಯವಾಗುವ ಕಾನೂನುಗಳಿಗೆ ಅನುಸಾರವಾಗಿ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ನಾವು ಅಗತ್ಯವಿರುವ ಎಲ್ಲಾ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ' ಎಂದು ಜೆಪ್ಟೋ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com