ಸಿಕ್ಕಿಂ: ಸೇನಾ ಶಿಬಿರದ ಮೇಲೆ ಭೂಕುಸಿತ; ಮೂವರ ಸಾವು, 6 ಮಂದಿ ಸಿಬ್ಬಂದಿ ನಾಪತ್ತೆ

ಭಾರೀ ಮಳೆಯಿಂದಾಗಿ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಕ್ಕಿಂ: ಸೇನಾ ಶಿಬಿರದ ಮೇಲೆ ಭೂಕುಸಿತ; ಮೂವರ ಸಾವು, 6 ಮಂದಿ ಸಿಬ್ಬಂದಿ ನಾಪತ್ತೆ
Updated on

ಕೋಲ್ಕತ್ತಾ: ಸಿಕ್ಕಿಂನ ಛಾಟೆನ್‌ನಲ್ಲಿ ಸೇನಾ ಶಿಬಿರದ ಮೇಲೆ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಮೂವರು ಸಾವನ್ನಪ್ಪಿ ಆರು ಭದ್ರತಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ರಕ್ಷಣಾಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಭಾರೀ ಮಳೆಯಿಂದಾಗಿ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಬಳಿಕ ಕೂಡಲೇ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಮೂವರ ಮೃತದೇಹಗಳನ್ನು ಹೊರತೆಗೆದಿದ್ದಾರೆ, ಘಟನೆಯಲ್ಲಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, 6 ಮಂದಿ ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಕಾಣೆಯಾದ ಆರು ಮಂದಿ ಸೇನಾ ಸಿಬ್ಬಂದಿಗಳ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸಿಕ್ಕಿಂ: ಸೇನಾ ಶಿಬಿರದ ಮೇಲೆ ಭೂಕುಸಿತ; ಮೂವರ ಸಾವು, 6 ಮಂದಿ ಸಿಬ್ಬಂದಿ ನಾಪತ್ತೆ
ಈಶಾನ್ಯ ಭಾರತದಲ್ಲಿ ಭೂಕುಸಿತ, ಪ್ರವಾಹ: 24 ಮಂದಿ ಸಾವು

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com