
ನವದೆಹಲಿ: "ನರೇಂದ್ರ ಮೋದಿ ಅಂದರೆ ಭಾರತ ಮತ್ತು ಭಾರತ ಎಂದರೆ ನರೇಂದ್ರ ಮೋದಿ" ಎಂದು ಭಾವಿಸುವುದು ತಪ್ಪು ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಧಾನಿಯನ್ನು ಟೀಕಿಸಿದ್ದಕ್ಕಾಗಿ ಬಿಜೆಪಿ ಕಾಂಗ್ರೆಸ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
'ನರೇಂದ್ರ ಸರೆಂಡರ್' ಎಂಬ ರಾಹುಲ್ ಗಾಂಧಿ ಹೇಳಿಕೆ ಸಮರ್ಥಿಸಿಕೊಂಡ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು, ಮೋದಿ ತಾನು ಚತುರ ಮತ್ತು 'ವಿಶ್ವಗುರು' ಎಂಬುದನ್ನು ತೋರಿಸಬೇಕಾದ ಸಂದರ್ಭಗಳಲ್ಲಿ "ಭಾರತದ ರಾಷ್ಟ್ರೀಯ ಹಿತಾಸಕ್ತಿ ವಿಚಾರದಲ್ಲಿ ಪದೇ ಪದೇ ಶರಣಾಗಿದ್ದಾರೆ" ಎಂದು ಟೀಕಿಸಿದರು.
ಇಂದು ದೆಹಲಿಯ ಕಾಂಗ್ರೆಸ್‌ನ ಇಂದಿರಾ ಗಾಂಧಿ ಭವನ, ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖೇರಾ, "ಬಿಜೆಪಿ ಜನ ಕಳೆದ 11 ವರ್ಷಗಳಿಂದ ತಮ್ಮ ನಾಯಕನಿಗಾಗಿ 'ಮುಕದ್ದರ್ ಕಾ ಸಿಕಂದರ್' ಚಿತ್ರವನ್ನು ನಿರ್ಮಿಸುತ್ತಿದ್ದರು. ಆದರೆ ಚಿತ್ರ ಸಿದ್ಧವಾದಾಗ, ಅದು 'ನರೇಂದ್ರ ಕಾ ಶರಣಾಗತಿ' ಎಂದು ಬದಲಾಯಿತು. ವಾಸ್ತವವಾಗಿ, ಧೈರ್ಯದ ಇಂಜೆಕ್ಷನ್ ಇಲ್ಲ. ಆದರೆ ಅದು ವ್ಯಕ್ತಿಯ ಪಾತ್ರದಲ್ಲಿ ಅಂತರ್ಗತವಾಗಿರುತ್ತದೆ. "ಬಿಜೆಪಿ-ಆರ್‌ಎಸ್‌ಎಸ್ ಜನರ ಇತಿಹಾಸ ಹೇಡಿತನದಿಂದ ಕೂಡಿದೆ". ಅಂತಹ ವ್ಯಕ್ತಿ ದೇಶದ ಆಡಳಿತ ವಹಿಸಿಕೊಂಡಾಗ, ದೇಶದ ಭವಿಷ್ಯ ಅಪಾಯದಲ್ಲಿದೆ ಮತ್ತು ಇದನ್ನು ಪ್ರಸ್ತುತ ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
"ಟ್ರಂಪ್ ಅಲ್ಲಿಂದ ಸಿಗ್ನಲ್ ನೀಡಿದ ತಕ್ಷಣ, ಫೋನ್ ಎತ್ತಿಕೊಂಡು, 'ನೀವು ಏನು ಮಾಡುತ್ತಿದ್ದೀರಿ ಮೋದಿ ಜಿ? ನರೇಂದ್ರ ಸರೆಂಡರ್' ಎಂದು ಹೇಳಿದರು... ಮತ್ತು ಮೋದಿ ಜಿ 'ಜಿ ಹುಜೂರ್' ಮೂಲಕ ಟ್ರಂಪ್ ಅವರ ಆದೇಶ ಪಾಲಿಸಿದರು" ಎಂದು ಭೋಪಾಲ್‌ನಲ್ಲಿ ರಾಹುಲ್ ಗಾಂಧಿ ಹೇಳಿದ ಒಂದು ದಿನದ ನಂತರ ಪವನ್ ಖೇರಾ ಈ ಹೇಳಿಕೆ ನೀಡಿದ್ದಾರೆ.
ಇನ್ನು ರಾಹುಲ್ ಗಾಂಧಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಅವರು, ಕಾಂಗ್ರೆಸ್ ನಾಯಕ ಸಶಸ್ತ್ರ ಪಡೆಗಳನ್ನು ಅವಮಾನಿಸಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
Advertisement