ದೆಹಲಿ ಮುಖ್ಯಮತ್ರಿ ರೇಖಾ ಗುಪ್ತಾ
ದೆಹಲಿ ಮುಖ್ಯಮತ್ರಿ ರೇಖಾ ಗುಪ್ತಾ

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿ ಬಂಧನ

ಬಂಧಿತನನ್ನು ಶ್ಲೋಕ್ ತಿವಾರಿ ಎಂದು ಗುರುತಿಸಲಾಗಿದ್ದು, ವಂಚಕನಾಗಿರುವ ಆರೋಪಿ ಆಗಾಗ್ಗೆ ತನ್ನ ಗುರುತನ್ನು ಬದಲಾಯಿಸುತ್ತಿರುತ್ತಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Published on

ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ 25 ವರ್ಷದ ವ್ಯಕ್ತಿಯೊಬ್ಬನನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನನ್ನು ಶ್ಲೋಕ್ ತಿವಾರಿ ಎಂದು ಗುರುತಿಸಲಾಗಿದ್ದು, ವಂಚಕನಾಗಿರುವ ಆರೋಪಿ ಆಗಾಗ್ಗೆ ತನ್ನ ಗುರುತನ್ನು ಬದಲಾಯಿಸುತ್ತಿರುತ್ತಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಾಯುವ್ಯ ದೆಹಲಿಯಲ್ಲಿರುವ ಪಡೆಯ ವಿಶೇಷ ಘಟಕದ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುರುವಾರ ಮತ್ತು ಶುಕ್ರವಾರದ ಮಧ್ಯರಾತ್ರಿ ಆರೋಪಿಯು ಉತ್ತರ ಪ್ರದೇಶದ ನೆರೆಯ ಗಾಜಿಯಾಬಾದ್‌ನಲ್ಲಿ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.

ಗಾಜಿಯಾಬಾದ್ ಪೊಲೀಸರು ದೆಹಲಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಪಂಚವಟಿ ಕಾಲೋನಿಗೆ ತಂಡವನ್ನು ಕಳುಹಿಸಿದ್ದರು. ಆರೋಪಿ ಪಂಚವಟಿ ಕಾಲೋನಿಯಿಂದಲೇ ಕರೆ ಮಾಡಿದ್ದ ಎಂದು ಗಾಜಿಯಾಬಾದ್‌ನ ಸಹಾಯಕ ಪೊಲೀಸ್ ಆಯುಕ್ತ ರಿತೇಶ್ ತ್ರಿಪಾಠಿ ತಿಳಿಸಿದ್ದಾರೆ.

ದೆಹಲಿ ಮುಖ್ಯಮತ್ರಿ ರೇಖಾ ಗುಪ್ತಾ
ಗೋವಿಗೆ ಆಹಾರ ಕೊಡುತ್ತಿದ್ದ ವ್ಯಕ್ತಿಯನ್ನು ಕಂಡು ದೆಹಲಿ ಸಿಎಂ ರೇಖಾ ಗುಪ್ತಾ ಗರಂ!

X
Open in App

Advertisement

X
Kannada Prabha
www.kannadaprabha.com