
ನವದೆಹಲಿ: ಇಂಟರ್ನೆಟ್ ಯುಗದಲ್ಲಿ ಹೆಚ್ಚು ಹೆಚ್ಚು ವೀಕ್ಷಣೆ ಪಡೆಯಲು ಜನ ಸಾಕಷ್ಟು ಸರ್ಕಸ್ ಮಾಡುತ್ತಿದ್ದಾರೆ. ಇದಕ್ಕೆ ಇದೀಗ ಕೃತಕ ಬುದ್ದಿಮತ್ತೆ ಕೂಡ ಸಾಥ್ ನೀಡುತ್ತಿದೆ.
ಪಟ್ಟಣಕ್ಕೆ ನುಗ್ಗಿದ ಸಿಂಹವೊಂದು ಅಂಗಡಿ ಬಳಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಮೂಸಿ ಹೋಗಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದ್ದು, ಈ ಮೈ ಜುಮ್ಮೆನ್ನಿಸುವ ವಿಡಿಯೋಗೆ ಲಕ್ಷ ಲಕ್ಷ ವೀಕ್ಷಣೆಗಳು ಬಂದಿವೆ.
ವಿಡಿಯೋದಲ್ಲಿ ಓರ್ವ ವ್ಯಕ್ತಿ ಅಂಗಡಿ ಬಳಿ ಮಲಗಿದ್ದಾಗ ಅಲ್ಲಿಗೆ ಬಂದ ಸಿಂಹವೊಂದು ಆತನನ್ನು ನೋಡಿ ಹತ್ತಿರ ಬಂದು ಮೂಸುತ್ತದ್ದೆ. ಬಳಿಕ ಕೆಲ ಸೆಕೆಂಡುಗಳ ಕಾಲ ಆತನನ್ನು ದಿಟ್ಟಿಸಿ ನೋಡಿದ ಸಿಂಹ ಇನ್ನೇನು ಆತನ ಮೇಲೆ ದಾಳಿ ಮಾಡುತ್ತದೆ ಎಂದು ಭಾವಿಸುತ್ತಿರುವಂತೆಯೇ ಅದು ಅಲ್ಲಿದ ದೂರ ಸರಿದು ಕತ್ತಲೆಯಲ್ಲಿ ಮಾಯವಾಗುತ್ತದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಸುಮಾರು 7 ಮಿಲಿಯನ್ ವೀಕ್ಷಣೆ ಬಂದಿದೆ. ಅಂತೆಯೇ ತರಹೇವಾರಿ ಕಮೆಂಟ್ ಗಳು ಹರಿದು ಬರುತ್ತಿದ್ದು, ಆತನ ಅದೃಷ್ಟ ಮತ್ತು ಜೀವ ಗಟ್ಟಿಯಾಗಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ.
AI ವಿಡಿಯೋ
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಲೇ ಈ ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿರುವ ಅರಣ್ಯಾಧಾಕಾರಿ ಪ್ರವೀಣ್ ಕಸ್ವಾನ್, 'ಇದು ನೈಜ ದೃಶ್ಯವಲ್ಲ. ಇದು ಕೃತಕ ಬುದ್ದಿಮತ್ತೆ (AI)ರಚಿಸಿರುವ ವಿಡಿಯೋ ಆಗಿದೆ ಎಂದು ಹೇಳಿದ್ದಾರೆ.
'ಸಿಂಹವು ಮನುಷ್ಯನನ್ನು ಮೂಸಿ ನೋಡುತ್ತಿರುವ ಈ ವೀಡಿಯೊ ಸುಮಾರು 7 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ಇದು AI- ರಚಿತವಾದ ವೀಡಿಯೊ. ಜನರನ್ನು ಗೊಂದಲಗೊಳಿಸಲು AI ಅನ್ನು ಹೇಗೆ ಬಳಸಬಹುದು ಎಂಬುದನ್ನು ಇದರಿಂದ ಊಹಿಸಬಹುದು. ಅಂತೆಯೇ ಈಗ AI ಇನ್ನೂ ಶೈಶವಾವಸ್ಥೆಯಲ್ಲಿದೆ. ಈಗಲೇ ಹೀಗಾದರೆ ಇನ್ನು ಭವಿಷ್ಯ ಊಹಿಸಿ ಎಂದು ಟ್ವೀಟ್ ಮಾಡಿದ್ದಾರೆ.
Advertisement