ಕಳೆದ 11 ವರ್ಷಗಳಲ್ಲಿ ಪ್ರಜಾಪ್ರಭುತ್ವ, ಆರ್ಥಿಕತೆ, ಸಾಮಾಜಿಕ ರಚನೆ ಮೇಲೆ ದೊಡ್ಡ ಹೊಡೆತ: ಮಲ್ಲಿಕಾರ್ಜುನ ಖರ್ಗೆ

ಸಾರ್ವಜನಿಕ ಅಭಿಪ್ರಾಯದ ವಿರುದ್ಧ ಹೋಗುವುದು ಮತ್ತು ಸರ್ಕಾರಗಳನ್ನು ಹಿಂಬಾಗಿಲಿನಿಂದ ಉರುಳಿಸುವುದು ಅಥವಾ ಏಕಪಕ್ಷೀಯ ಸರ್ವಾಧಿಕಾರವನ್ನು ಬಲವಂತವಾಗಿ ಹೇರುವುದು ನಡೆದಿದೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Updated on

ನವದೆಹಲಿ: ಕಳೆದ 11 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಪ್ರಜಾಪ್ರಭುತ್ವ, ಆರ್ಥಿಕತೆ ಮತ್ತು ಸಾಮಾಜಿಕ ರಚನೆ ಮೇಲೆ ಆಳವಾದ ಹೊಡೆತ ನೀಡಿದೆ ಎಂದು ಕಾಂಗ್ರೆಸ್ ಸೋಮವಾರ ಹೇಳಿದೆ.

ಈ ಕುರಿತು X ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ 11 ವರ್ಷಗಳಲ್ಲಿ ಸರ್ಕಾರವು ಸಂವಿಧಾನದ ಪ್ರತಿಯೊಂದು ಪುಟದಲ್ಲಿ 'ಸರ್ವಾಧಿಕಾರದ ಶಾಯಿಯನ್ನು ಮಾತ್ರ ಬಳಿದಿದೆ'. ಬಿಜೆಪಿ-ಆರ್‌ಎಸ್‌ಎಸ್ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಯನ್ನು ದುರ್ಬಲಗೊಳಿಸಿದೆ ಮತ್ತು ಅವುಗಳ ಸ್ವಾಯತ್ತತೆಯ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದ್ದಾರೆ.

ಸಾರ್ವಜನಿಕ ಅಭಿಪ್ರಾಯದ ವಿರುದ್ಧ ಹೋಗುವುದು ಮತ್ತು ಸರ್ಕಾರಗಳನ್ನು ಹಿಂಬಾಗಿಲಿನಿಂದ ಉರುಳಿಸುವುದು ಅಥವಾ ಏಕಪಕ್ಷೀಯ ಸರ್ವಾಧಿಕಾರವನ್ನು ಬಲವಂತವಾಗಿ ಹೇರುವುದು ನಡೆದಿದೆ. ಈ ಅವಧಿಯಲ್ಲಿ, ರಾಜ್ಯಗಳ ಹಕ್ಕುಗಳನ್ನು ನಿರ್ಲಕ್ಷಿಸಲಾಗಿದೆ ಮತ್ತು ಒಕ್ಕೂಟ ವ್ಯವಸ್ಥೆ ರಚನೆಯು ದುರ್ಬಲಗೊಂಡಿದೆ' ಎಂದು ಖರ್ಗೆ ಹೇಳಿದರು.

'ದ್ವೇಷ, ಬೆದರಿಕೆ ಮತ್ತು ಭಯ'ದ ವಾತಾವರಣವನ್ನು ಹರಡಲು ನಿರಂತರವಾಗಿ ಪ್ರಯತ್ನಗಳು ನಡೆಯುತ್ತಿವೆ. ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗಗಳ ಮೇಲಿನ ಶೋಷಣೆ ನಿರಂತರವಾಗಿ ಹೆಚ್ಚುತ್ತಿದೆ. ಅವರಿಗೆ ಮೀಸಲಾತಿ ಮತ್ತು ಸಮಾನ ಹಕ್ಕುಗಳನ್ನು ಕಸಿದುಕೊಳ್ಳುವ ಪಿತೂರಿ ಮುಂದುವರೆದಿದೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವು ಬಿಜೆಪಿಯ ಆಡಳಿತ ವೈಫಲ್ಯಕ್ಕೆ ದೊಡ್ಡ ಪುರಾವೆಯಾಗಿದೆ' ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ
ದೇಶಾದ್ಯಂತ ಜಾತಿ ಸಮೀಕ್ಷೆಗೆ ಕೇಂದ್ರ ಮೀಸಲಿಟ್ಟಿರುವ ಹಣ ಸಾಕಾಗುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ

'ಯುಪಿಎ ಅವಧಿಯಲ್ಲಿ ಸರಾಸರಿ ಶೇ 8ರಷ್ಟಿದ್ದ ದೇಶದ ಜಿಡಿಪಿ ಬೆಳವಣಿಗೆ ದರವನ್ನು ಶೇ 5-6ರಲ್ಲಿ ಕಾಯ್ದುಕೊಳ್ಳುವುದನ್ನು ಬಿಜೆಪಿ-ಆರ್‌ಎಸ್‌ಎಸ್ ಅಭ್ಯಾಸವನ್ನಾಗಿ ಮಾಡಿಕೊಂಡಿದೆ. ವಾರ್ಷಿಕವಾಗಿ 2 ಕೋಟಿ ಉದ್ಯೋಗಗಳ ಭರವಸೆ ಈಡೇರಿಸುವ ಬದಲು, ಯುವಕರಿಂದ ಕೋಟ್ಯಂತರ ಉದ್ಯೋಗಗಳನ್ನು ಕಸಿದುಕೊಳ್ಳಲಾಯಿತು. ಹಣದುಬ್ಬರದಿಂದಾಗಿ, ಸಾರ್ವಜನಿಕ ಉಳಿತಾಯವು 50 ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ ಮತ್ತು ಆರ್ಥಿಕ ಅಸಮಾನತೆಯು 100 ವರ್ಷಗಳಲ್ಲಿಯೇ ಅತ್ಯಧಿಕವಾಗಿದೆ' ಎಂದು ಅವರು ಹೇಳಿದರು.

'ನೋಟು ಅಮಾನ್ಯೀಕರಣ, ಜಿಎಸ್‌ಟಿ, ಯೋಜಿತವಲ್ಲದ ಲಾಕ್‌ಡೌನ್ ಮತ್ತು ಅಸಂಘಟಿತ ವಲಯದ ಮೇಲೆ ಹೇರಿದ ಹೊಡೆತಗಳು ಕೋಟ್ಯಂತರ ಜನರ ಭವಿಷ್ಯವನ್ನು ಹಾಳು ಮಾಡಿವೆ. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ನಮಾಮಿ ಗಂಗೆ ಮತ್ತು 100 ಸ್ಮಾರ್ಟ್ ಸಿಟಿಗಳಂತಹ ಕಾರ್ಯಕ್ರಮಗಳು ವಿಫಲವಾಗಿವೆ' ಎಂದು ಅವರು ಆರೋಪಿಸಿದರು.

'ರೈಲ್ವೆಗಳು ಹಾಳಾಗಿವೆ. ಕಾಂಗ್ರೆಸ್-ಯುಪಿಎ ಅವಧಿಯಲ್ಲಿ ನಿರ್ಮಿಸಲಾದ ಅಥವಾ ಯೋಜಿಸಲಾದ ಮೂಲಸೌಕರ್ಯ ಯೋಜನೆಗಳನ್ನು ಮಾತ್ರ ಉದ್ಘಾಟಿಸಿದೆ. ಸಂವಿಧಾನದ ಪ್ರತಿಯೊಂದು ಪುಟದ ಮೇಲೆ ಸರ್ವಾಧಿಕಾರದ ಶಾಯಿಯನ್ನು ಬಳಿಯುವಲ್ಲಿಯೇ ಮೋದಿ ಸರ್ಕಾರ ಕಳೆದ 11 ವರ್ಷಗಳನ್ನು ವ್ಯರ್ಥ ಮಾಡಿದೆ' ಎಂದು ಖರ್ಗೆ ಆರೋಪಿಸಿದರು.

ಬಿಜೆಪಿ ಪ್ರಧಾನಿ ಮೋದಿ ಅವರ ಕಳೆದ 11 ವರ್ಷಗಳ ಆಡಳಿತವನ್ನು ಶ್ಲಾಘಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com