ಪತಿಗೆ ಚಿನ್ನಾಭರಣ ಧರಿಸುವಂತೆ ಒತ್ತಾಯ, ರಿಟರ್ನ್ ಟಿಕೆಟ್ ಬುಕಿಂಗ್ ಮಾಡದ ಸೋನಮ್: 'ಹನಿಮೂನ್ ಹಂತಕಿ'ಯ ಕ್ರೈಮ್ ಹಿಸ್ಟರಿ!

ಸೋನಮ್ ಗೆ ನನ್ನ ಮಗನೊಂದಿಗೆ ಇರಲು ಇಷ್ಟವಿಲ್ಲದಿದ್ದರೆ ಅವಳು ಬಿಟ್ಟು ಹೋಗಬಹುದಿತ್ತು, ಆದರೆ ಅವನನ್ನು ಏಕೆ ಸಾಯಿಸಬೇಕಿತ್ತು. ಕೊಲೆಯ ಹಿಂದೆ ಅವಳ ಕೈವಾಡವಿದ್ದರೆ, ಅವಳಿಗೆ ಮರಣದಂಡನೆ ವಿಧಿಸಬೇಕು.
Sonam And Raja Raghuvanshi
ಸೋನಮ್ ಮತ್ತು ರಾಜಾ ರಘುವಂಶಿ
Updated on

ಭೂಪಾಲ್: ಮೇಘಾಲಯಕ್ಕೆ ಹನಿಮೂನ್ ಗಾಗಿ ತೆರಳಿದ್ದ ಸಮಯದಲ್ಲಿ ಪತಿ ರಾಜಾ ರಘುವಂಶಿ ಕೊಲೆಗೆ ಕಾರಣರಾದ ಆರೋಪ ಹೊತ್ತಿರುವ ಸೋನಮ್ ರಘುವಂಶಿಯನ್ನು ಸೋಮವಾರ ಮುಂಜಾನೆ ಬಂಧಿಸಲಾಯಿತು, ಎರಡು ವಾರಗಳ ಹುಡುಕಾಟದ ನಂತರ ಆರೋಪಿ ಪತ್ನಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ರಾಜಾ ರಘುವಂಶಿ ಕೊಲೆಗೆ ಸಂಬಂಧಿಸಿದಂತೆ ಸೋನಮ್ ಸೇರಿ ಇತರ ಮೂವರನ್ನು ಬಂಧಿಸಲಾಯಿತು, ಇವರಲ್ಲಿ ಒಬ್ಬನ ಜೊತೆ ಸೋನಮ್ ಸಂಬಂಧ ಹೊಂದಿದ್ದರು ಎನ್ನಲಾಗಿದೆ.

ಸೋನಮ್ ರಘುವಂಶಿ ಹಾಗೂ ಆಕೆಯ ಸಹೋದ್ಯೋಗಿ ಮತ್ತು ಆರೋಪಿತ ಪ್ರೇಮಿ ರಾಜ್ ಸಿಂಗ್ ಕುಶ್ವಾಹ್ ನಡುವೆ ಆರು ಗಂಟೆಗಳ ತಡರಾತ್ರಿಯ ದೂರವಾಣಿ ಸಂಭಾಷಣೆ ನಡೆದಿದೆ. ಮೇಘಾಲಯಕ್ಕೆ ಹನಿಮೂನ್ ಪ್ರವಾಸವನ್ನು ಅಂತಿಮಗೊಳಿಸಲು ಅವರ ಆತುರ, ಮತ್ತು ಪ್ರವಾಸದ ಸಮಯದಲ್ಲಿ ಪತಿ ರಾಜಾ ರಘುವಂಶಿ ಚಿನ್ನದ ಸರ ಮತ್ತು ಉಂಗುರಗಳನ್ನು ಧರಿಸಬೇಕೆಂದು ಆಕೆ ತುಂಬಾ ಒತ್ತಡ ಹಾಕಿದ್ದಳು. ಇದರಿಂದ ತನಿಖಾಧಿಕಾರಿಗಳು ರಾಜಾ ರಘುವಂಶಿ ಹತ್ಯೆಯಲ್ಲಿ ಸೋನಮ್ ಮತ್ತು ರಾಜ್ ಪ್ರಮುಖ ಶಂಕಿತರೆಂದು ಪರಿಗಣಿಸಿ ಪತ್ತೆಹಚ್ಚಲು ಸಾಧ್ಯವಾಯಿತು.

ಮೇಘಾಲಯ ಪೊಲೀಸರು ಮತ್ತು ಮಧ್ಯಪ್ರದೇಶದ ಪೊಲೀಸರು ಇಂದೋರ್‌ನಲ್ಲಿ ನಡೆಸಿದ ಹತ್ತು ಗಂಟೆಗಳ ಜಂಟಿ ಕಾರ್ಯಾಚರಣೆಯಲ್ಲಿ 21 ವರ್ಷದ ರಾಜ್ ಸಿಂಗ್ ಕುಶ್ವಾಹ್ ಮತ್ತು ಅವರ ಇಬ್ಬರು ಸಹಚರರನ್ನು ಭಾನುವಾರ ಬಂಧಿಸಿದ್ದಾರೆ.

Sonam And Raja Raghuvanshi
ಥೇಟ್ 'ಬಾ ನಲ್ಲೆ ಮಧುಚಂದ್ರಕೆ', ಆದರೆ ಸ್ವಲ್ಪ ಭಿನ್ನ: ಹನಿಮೂನ್ ವೇಳೆ ಪತಿಯನ್ನು ಕೊಲೆಗೈದು ನಾಪತ್ತೆಯಾಗಿದ್ದ ಪತ್ನಿಯ ಬಂಧನ!

ಲಲಿತಪುರ ಜಿಲ್ಲೆಯ 19 ವರ್ಷದ ಆಕಾಶ್ ರಜಪೂತ್ ಬಂಧನದೊಂದಿಗೆ ಕಾರ್ಯಾಚರಣೆ ಆರಂಭವಾಯಿತು, ಆತನನ್ನು ಭಾನುವಾರ ಸಂಜೆ ಇಂದೋರ್‌ಗೆ ಕರೆತರಲಾಯಿತು. ನಂತರ, ಪ್ರಮುಖ ಶಂಕಿತ ರಾಜ್ ಸಿಂಗ್ ಕುಶ್ವಾ ಮತ್ತು ಮತ್ತೊಬ್ಬ ಪ್ರಮುಖ ಸಹಚರ 22 ವರ್ಷದ ವಿಶಾಲ್ ಚೌಹಾಣ್‌ನನ್ನು ಇಂದೋರ್‌ನ ನಂದಬಾಗ್ ಪ್ರದೇಶದಲ್ಲಿ ಬಂಧಿಸಲಾಯಿತು.

ಜೂನ್ 23 ರಂದು ಮೇಘಾಲಯದಲ್ಲಿ ರಾಜಾ ರಘುವಂಶಿಯನ್ನು ಕೊಂದ ಆರೋಪದಲ್ಲಿ ವಿಶಾಲ್ ಮತ್ತು ಆಕಾಶ್ ಜೊತೆ ಸೇರಿದ್ದ ರಾಜ್‌ನ ಮೂರನೇ ಸಹಚರ 23 ವರ್ಷದ ಆನಂದ್ ಕುರ್ಮಿಯನ್ನು ಕೆಲವು ಗಂಟೆಗಳ ನಂತರ, ಅಂದರೆ ಸೋಮವಾರ ಬೆಳಿಗ್ಗೆ 11:30 ರ ಸುಮಾರಿಗೆ, ಮದ್ಯಪ್ರದೇಶದ ಬುಂದೇಲ್‌ಖಂಡ್ ಪ್ರದೇಶದ ಸಾಗರ್ ಜಿಲ್ಲೆಯ ಆತನ ಸಂಬಂಧಿಕರ ಮನೆಯಲ್ಲಿ ಬಂಧಿಸಲಾಯಿತು. ಮುಖ್ಯವಾಗಿ, ಇಂದೋರ್‌ನಲ್ಲಿ ರಾಜ್ ಸಿಂಗ್ ಕುಶ್ವಾ ಬಂಧನವಾದ ಒಂದು ಗಂಟೆಯೊಳಗೆ, ಘಾಜಿಪುರ ಜಿಲ್ಲೆಯಲ್ಲಿ ಎರಡು ವಾರಗಳ ಕಾಲ ನಿಗೂಢವಾಗಿ ಕಣ್ಮರೆಯಾಗಿದ್ದ ಸೋನಮ್ ರಘುವಂಶಿ ಕಾಣಿಸಿಕೊಂಡಿದ್ದಾಳೆ.

ಸೋನಮ್ ರಘುವಂಶಿಯನ್ನು ಸೋಮವಾರ ರಾತ್ರಿ ಘಾಜಿಪುರದ ಸ್ಥಳೀಯ ನ್ಯಾಯಾಲಯದ ಮುಂದೆ ರಿಮಾಂಡ್ ಅನುಮತಿಗಾಗಿ ಹಾಜರುಪಡಿಸಲಾಯಿತು, ನಂತರ ಸಂಜೆ ಇಲ್ಲಿಗೆ ತಲುಪಿದ ಮೇಘಾಲಯ ಪೊಲೀಸ್ ತಂಡವು ಅವರನ್ನು ವಶಕ್ಕೆ ತೆಗೆದುಕೊಳ್ಳುವ ನಿರೀಕ್ಷೆಯಿತ್ತು. ನ್ಯಾಯಾಲಯದ ವಿಚಾರಣೆಗಳು ತಡರಾತ್ರಿಯವರೆಗೂ ಮುಂದುವರೆದವು. ಪ್ರಕರಣದಲ್ಲಿ ಬಂಧಿಸಲ್ಪಟ್ಟ ಇತರ ಮೂವರನ್ನು ಏಳು ದಿನಗಳ ಕಾಲ ಮೇಘಾಲಯ ಪೊಲೀಸರ ಸಾರಿಗೆ ಕಸ್ಟಡಿಗೆ ಕಳುಹಿಸಲಾಯಿತು.

ಮೂಲಗಳ ಪ್ರಕಾರ, ಸೋನಮ್ ಮೇ 16–17ರ ರಾತ್ರಿ ತಮ್ಮ ಸಂಸ್ಥೆಯ ಉದ್ಯೋಗಿ ರಾಜ್ ಸಿಂಗ್ ಕುಶ್ವಾ ಅವರೊಂದಿಗೆ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ಸುದೀರ್ಘ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಮೇ 17 ರಂದು, ರಾಜ್ ಸಿಂಗ್ ತನ್ನ ಸ್ನೇಹಿತರಾದ ಆಕಾಶ್, ವಿಶಾಲ್ ಮತ್ತು ಆನಂದ್ ಅವರನ್ನು ಸೂಪರ್ ಕಾರಿಡಾರ್‌ನ ಕೆಫೆಯಲ್ಲಿ ಭೇಟಿಯಾದರು, ಇವರೆಲ್ಲರೂ ಇಂದೋರ್‌ನ ನಂದಬಾಗ್ ಪ್ರದೇಶದವರಾಗಿದ್ದಾರೆ, ಇವರೆಲ್ಲರೂ ಅಲ್ಲಿಯೇ ಕೊಲೆ ಸಂಚು ರೂಪಿಸಿದ್ದಾರೆ.

Sonam And Raja Raghuvanshi
ಮೇಘಾಲಯ ಹನಿಮೂನ್ ಹತ್ಯೆ: ಪತಿ ಕೊಲೆಗೆ ಅನೈತಿಕ ಸಂಬಂಧ ಕಾರಣ; ಪತ್ನಿ, ಪ್ರೇಮಿ ಸೇರಿ ಐವರ ಬಂಧನ

ಕೆಲವು ದಿನಗಳ ನಂತರ, ಸೋನಮ್ ಅಸ್ಸಾಂ ಮತ್ತು ಮೇಘಾಲಯಕ್ಕೆ ಹನಿಮೂನ್‌ಗೆ ಹೋಗಲು ಯೋಜಿಸಿದ್ಧಳು. ಈ ವೇಳೆ ರಿಟರ್ನ್ ಟಿಕೆಟ್‌ಗಳನ್ನು ಬುಕ್ ಮಾಡದೆ ತನಗೂ ಮತ್ತು ರಾಜಾನಿಗೂ ವಿಮಾನ ಟಿಕೆಟ್‌ ಬುಕ್ ಮಾಡಿದ್ದಳು. ಮದುವೆಯಾದ ಕೇವಲ ಹತ್ತು ದಿನಕ್ಕೆ ರಾಜಾಗೆ ಪ್ರಯಾಣಿಸಲು ಇಷ್ಟವಿರಲಿಲ್ಲ ಎಂದು ವರದಿಯಾಗಿದೆ, ಆದರೆ ಸೋನಮ್ ಎಲ್ಲವನ್ನೂ ವ್ಯವಸ್ಥೆ ಮಾಡಿದ್ದಳು. ಪ್ರವಾಸದಲ್ಲಿ ರಾಜಾ ಅವರನ್ನು ಚಿನ್ನದ ಆಭರಣಗಳನ್ನು ಧರಿಸುವಂತೆ ಒತ್ತಾಯಿಸಿದರು ಎಂದು ಅವರ ಅತ್ತಿಗೆ ಹೇಳುತ್ತಾರೆ.

ಸೋನಮ್ ಮೇಘಾಲಯಕ್ಕೆ ಪ್ರವಾಸ ಮಾಡುವಾಗ ಕೆಲವು ಪುರುಷರು ಆಭರಣಗಳನ್ನು ದೋಚಲು ತಮ್ಮ ಮೇಲೆ ದಾಳಿ ಮಾಡಿದರು, ರಾಜಾ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಅವರು ಅವನನ್ನು ಕೊಂದರು ಎಂದು ಘಾಜಿಪುರ ಜಿಲ್ಲೆಯ ಡಾಬಾ ಮಾಲೀಕರಿಗೆ ಸೋನಮ್ ಹೇಳಿದ್ದಳು. ಚಿನ್ನಾಭರಣ ಧರಿಸುವಂತೆ ಸೋನಂ ಒತ್ತಾಯ ಮಾಡಿದ್ದು ಮತ್ತು ರಿಟರ್ನ್ ಟಿಕೆಟ್ ಬುಕ್ ಮಾಡದಿದ್ದದ್ದು ದರೋಡೆ ಮತ್ತು ಕೊಲೆಯ ಸಂಚಿನ ಭಾಗವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸೋನಂ ಮದುವೆಯ ನಂತರ ಮತ್ತು ಪ್ರವಾಸಕ್ಕೂ ಮೊದಲು ದೊಡ್ಡ ಮೊತ್ತದ ಹಣವನ್ನು ಹಿಂತೆಗೆದುಕೊಂಡಿದ್ದಾರೆಯೇ ಎಂಬ ಬಗ್ಗೆ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸೋನಂ ಮತ್ತು ರಾಜ್ ಸಿಂಗ್ ನಿರಂತರ ಸಂಪರ್ಕದಲ್ಲಿದ್ದರು, ಪ್ರವಾಸದ ಸಮಯದಲ್ಲಿಯೂ ಪ್ರತ್ಯೇಕ ಸಿಮ್ ಕಾರ್ಡ್‌ಗಳನ್ನು ಬಳಸುತ್ತಿದ್ದರು ಎಂದು ಪುರಾವೆಗಳು ತೋರಿಸುತ್ತವೆ. ಸೋನಂ ರಘುವಂಶಿ ಲೈವ್ ಲೋಕೇಶನ್ ಅನ್ನು ಹಂತಕರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.

ರಾಜ್ ಸಿಂಗ್ ಇಂದೋರ್‌ನಲ್ಲಿಯೇ ಉಳಿದುಕೊಂಡಿದ್ದರೂ, ಅವರ ಮೂವರು ಬಾಲ್ಯದ ಗೆಳೆಯರಾದ ಆಕಾಶ್, ವಿಶಾಲ್ ಮತ್ತು ಆನಂದ್ ದೆಹಲಿ ಮೂಲಕ ಪ್ರೀಮಿಯಂ ರೈಲಿನ ಮೂಲಕ ಗುವಾಹಟಿಗೆ ಪ್ರಯಾಣಿಸಿದ್ದಾರೆ ಎಂದು ತನಿಖೆಗಳು ಬಹಿರಂಗಪಡಿಸುತ್ತವೆ. ಅವರು ಶಿಲ್ಲಾಂಗ್‌ನಲ್ಲಿ ಸೋನಂ ಮತ್ತು ರಾಜಾ ಅವರನ್ನು ಪ್ರವಾಸಿಗರಾಗಿ ಭೇಟಿಯಾಗಿ ಮೇ 23 ರಂದು ಮೇಘಾಲಯಕ್ಕೆ ಕರೆದೊಯ್ದರು, ಅಲ್ಲಿ ರಾಜ್ ರೂಪಿಸಿದ ಸಂಚಿನ ಪ್ರಕಾರ ರಾಜಾ ರಘುವಂಶಿ ಕೊಲ್ಲಲ್ಪಟ್ಟರು ಎಂದು ಹೇಳಲಾಗಿದೆ. ನಂತರ ಮೂವರು ಇಂದೋರ್‌ಗೆ ಹಿಂತಿರುಗಿದ್ದಾರೆ. ಸೋನಂ ರಾಜ್ ಜೊತೆ ಸಂಬಂಧ ಹೊಂದಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ, ಇದು ರಾಜಾ ಹತ್ಯೆಯ ಹಿಂದಿನ ಉದ್ದೇಶವಾಗಿರಬಹುದು ಎಂದು ಹೇಳಲಾಗಿದೆ.

ಸೋನಮ್ ಅವರ ತಂದೆ ದೇವಿ ಸಿಂಗ್, ಮೇಘಾಲಯ ಪೊಲೀಸರ ಆರೋಪವನ್ನು ಬಲವಾಗಿ ತಿರಸ್ಕರಿಸುತ್ತಾರೆ. "ತನಿಖೆ ನಡೆಸಲು ವಿಫಲರಾಗಿದ್ದರಿಂದ ಈ ಸಂಪೂರ್ಣ ಸುಳ್ಳು ಕಥೆಯನ್ನು ಸೃಷ್ಟಿಸಲಾಗಿದೆ. ನಾವು ಸಿಬಿಐ ತನಿಖೆಗೆ ಒತ್ತಾಯಿಸುತ್ತೇವೆ. ನನ್ನ ಮಗಳ ವರ್ಚಸ್ಸಿಗೆ ಕಳಂಕ ತಂದಿದ್ದಕ್ಕಾಗಿ ನಾನು ಲೀಗಲ್ ನೋಟಿಸ್ ಕಳುಹಿಸುತ್ತೇನೆ. ಅವಳು ಸಂಪೂರ್ಣವಾಗಿ ನಿರಪರಾಧಿ ಎಂದು ಆಕೆಯ ತಂದೆ ಸಮರ್ಥಿಸಿಕೊಂಡಿದ್ದಾರೆ.

ನನ್ನ ಮಗನಿಗೆ ಮೇಘಾಲಯಕ್ಕೆ ಹೋಗಲು ಇಷ್ಟವಿರಲಿಲ್ಲ. ರಿಟರ್ನ್ ಟಿಕೆಟ್ ಇಲ್ಲದೆ ಪ್ರವಾಸವನ್ನು ಯೋಜಿಸಿ ಬುಕ್ ಮಾಡಿದ್ದು ಸೋನಮ್ ಎಂದು ರಾಜಾ ಅವರ ತಾಯಿ ಉಮಾ ರಘುವಂಶಿ ತಿಳಿಸಿದ್ದಾರೆ.

ಸೋನಮ್ ಸುಸಂಸ್ಕೃತಳಾಗಿದ್ದಳು, ನಾನು ಅವಳನ್ನು ನನ್ನ ಮಗಳಂತೆ ನಡೆಸಿಕೊಂಡೆ. ಒಳ್ಳೆಯ ಮುಹೂರ್ತಕ್ಕಾಗಿ ಮದುವೆಗೆ ಒಂದು ವರ್ಷ ಕಾಯಬೇಕೆಂದು ನಾನು ಬಯಸಿದ್ದೆ, ಆದರೆ ಅವಳ ತಂದೆ ಆತುರದಲ್ಲಿ ಮದುವೆ ಮಾಡಿದರು. ಸೋನಮ್ ಗೆ ನನ್ನ ಮಗನೊಂದಿಗೆ ಇರಲು ಇಷ್ಟವಿಲ್ಲದಿದ್ದರೆ ಅವಳು ಹೋಗಬಹುದಿತ್ತು, ಆದರೆ ಅವನನ್ನು ಏಕೆ ಸಾಯಿಸಬೇಕಿತ್ತು. ಅವನ ಕೊಲೆಯ ಹಿಂದೆ ಅವಳ ಕೈವಾಡವಿದ್ದರೆ, ಅವಳಿಗೆ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com