
ಭೂಪಾಲ್/ ಮೇಘಾಲಯ: ಮೇ 23 ರಂದು ಇಂದೋರ್ ಪ್ರವಾಸಿ ರಾಜಾ ರಘುವಂಶಿ ಅವರ ಮಧುಚಂದ್ರ ಹತ್ಯೆಯ ತನಿಖೆ ನಡೆಸುತ್ತಿರುವ ಮೇಘಾಲಯ ಪೊಲೀಸರ ವಿಶೇಷ ತನಿಖಾ ತಂಡ (SIT) ರಾಜಾ ಅವರ ಪತ್ನಿ ಸೋನಮ್ ಸೇರಿದಂತೆ ಬಂಧಿತ ಐದು ಆರೋಪಿಗಳನ್ನು ಪ್ರಶ್ನಿಸಲು ಪ್ರಾರಂಭಿಸುತ್ತಿದ್ದಾರೆ. ಆದರೆ ತನಿಖಾಧಿಕಾರಿಗಳಿಗೆ ಇನ್ನೂ ಹಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.
ಮೇಘಾಲಯ ರಾಜಧಾನಿ ಶಿಲ್ಲಾಂಗ್‌ನ ಸ್ಥಳೀಯ ನ್ಯಾಯಾಲಯವು ಬುಧವಾರ ಸೋನಮ್ ರಘುವಂಶಿ ಮತ್ತು ಪ್ರಮುಖ ಆರೋಪಿ ರಾಜ್ ಕುಶ್ವಾ ಸೇರಿದಂತೆ ಇತರ ನಾಲ್ವರನ್ನು ಎಂಟು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ಸೋನಮ್ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂಬ ವರದಿಗಳಿದ್ದರೂ, ಮೇಘಾಲಯ ಪೊಲೀಸರು ಯಾವುದೇ ತೀರ್ಮಾನಕ್ಕೆ ಬರಬೇಡಿ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಾಟಕೀಯ ಬೆಳವಣಿಗೆಯಲ್ಲಿ, ಸೋನಮ್ ಅವರ ಸಹೋದರ ಗೋವಿಂದ್ ಬುಧವಾರ ರಾಜಾ ಅವರ ಮನೆಗೆ ಭೇಟಿ ನೀಡಿ, ಅವರ ಹತ್ಯೆಗೀಡಾದ ಸೋದರ ಮಾವನ ತಾಯಿ ಉಮಾ ರಘುವಂಶಿ ಅವರಿಗೆ ಸಮಾಧಾನ ಮಾಡಿದ್ದಾರೆ.
ಉತ್ತರಿಸಲಾಗದ ಒಂದು ಅಂಶವೆಂದರೆ ಸೋನಾಲ್ ಅವರ ಟ್ರಾಲಿ ಬ್ಯಾಗ್? "ರಾಜಾ ಅವರೊಂದಿಗೆ ಚೆರಾಪುಂಜಿ ಗೆ ಸಣ್ಣ ಭೇಟಿಗೆ ಹೋಗುವಾಗ ಅವಳು ಅಷ್ಟು ದೊಡ್ಡ ಟ್ರಾಲಿ ಬ್ಯಾಗ್ ಅನ್ನು ಏಕೆ ತೆಗೆದುಕೊಂಡು ಹೋದಳು? ಸ್ಕೂಟರ್ ಸವಾರಿ ಮಾಡುವ ಸಣ್ಣ ಪ್ರವಾಸದಲ್ಲಿ ಟ್ರಾಲಿ ಬ್ಯಾಗ್ ಹೊತ್ತೊಯ್ಯುವ ಯಾವುದೇ ದಂಪತಿಯನ್ನು ನೀವು ನೋಡಿದ್ದೀರಾ?" ತನಿಖೆ ನಡೆಸುತ್ತಿರುವ ಒಂದು ಮೂಲವು TNIE ಗೆ ತಿಳಿಸಿದೆ.
ಪ್ರವಾಸದ ಸಮಯದಲ್ಲಿ ಸೋನಮ್ ಹೊಂದಿದ್ದ ಹಲವು ಮೊಬೈಲ್ ಫೋನ್‌ಗಳು ಎಲ್ಲಿವೆ? ಕನಿಷ್ಠ ಎರಡು ಐಫೋನ್‌ಗಳು ಇದ್ದವು, ಅವುಗಳಲ್ಲಿ ಒಂದು ಕೊಲೆಯ ನಂತರ ನಾಶವಾದಂತೆ ತೋರುತ್ತಿದೆ. ಉಳಿದೆಲ್ಲವೂ ಸ್ವಿಚ್ ಆಫ್ ಆಗಿವೆ. ಅದರಲ್ಲು ಮುಖ್ಯವಾಗಿ ಡೇಟಾ ನಾಶವಾಗಿದೆ ಎಂದು ಮೂಲಗಳು ತಿಳಿಸಿವೆ. ಮೇಘಾಲಯದಲ್ಲಿ ತಮ್ಮ ಮಧುಚಂದ್ರದ ಸಮಯದಲ್ಲಿ ಪತಿ ರಾಜಾ ರಘುವಂಶಿ ಅವರ ಕೊಲೆ ಪ್ರಕರಣದ ಆರೋಪಿ ಸೋನಮ್ ರಘುವಂಶಿ ಅವರನ್ನು ಬುಧವಾರ, ಜೂನ್ 11, 2025 ರಂದು ಶಿಲ್ಲಾಂಗ್‌ನ ಗಣೇಶ್ ದಾಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಯ ನಂತರ ಕಸ್ಟಡಿಗೆ ಪಡೆಯಲಾಗಿದೆ.
“ರಾಜ ಮೇ 23 ರಂದು ಶಿಲ್ಲಾಂಗ್‌ನಿಂದ ಸೊಹ್ರಾ (ಚೆರಾಪುಂಜಿ) ಗೆ ಹೋಗಲು ಸ್ಕೂಟರ್ ಬಾಡಿಗೆಗೆ ಪಡೆದರು. ಅವರು ಕೊಲೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಸ್ಕೂಟರ್ ಬಿಡಲಾಗಿತ್ತು. ಆ ಸ್ಕೂಟರ್ ಅನ್ನು ಅಲ್ಲಿಗೆ ಯಾರು ತೆಗೆದುಕೊಂಡು ಹೋದರು? ಅಲ್ಲದೆ, ಹತ್ಯೆಯ ಸ್ವಲ್ಪ ಸಮಯದ ನಂತರ ಹತ್ತಿರದ ಪ್ರದೇಶಗಳ ಸಿಸಿಟಿವಿ ಗಳಲ್ಲಿ ಸೋನಮ್ ಸ್ಕೂಟರ್ ನಲ್ಲಿ ವ್ಯಕ್ತಿಯೊಬ್ಬರ ಜೊತೆ ಹೋಗುತ್ತಿರುವುದು ಮಾತ್ರ ಸೆರೆಯಾಗಿದೆ. ಬಹುಶ ಹಂತರಕಲ್ಲಿ ಒಬ್ಬನಾದ ವಿಶಾಲ್ ಇರಬಹುದು ಎನ್ನಲಾಗಿದೆ,
ಹಂತಕರು ರಾಜಾ ರಘುವಂಶಿ ಮೇಲೆ ದಾಳಿ ಮಾಡಿದರು, ಆದರೆ ಅವರಲ್ಲಿ ಇಬ್ಬರ ದಾಳಿಗೆ ರಾಜಾ ಪ್ರತಿದಾಳಿ ಮಾಡಿದ್ದಾರೆ. ಹೀಗಾಗಿ ಮೂರನೇ ಹಂತಕ ವಿಶಾಲ್ ಮಚ್ಚಿನಿಂದ ಅವನ ತಲೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮುಂಜಾನೆ, ಸೋನಮ್ ಳನ್ನು ಗಿರಿಧಾಮಕ್ಕೆ ಕರೆತರಲಾಯಿತು ಮತ್ತು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಗರ್ಭಧಾರಣೆಯ ಪರೀಕ್ಷೆಯ ವರದಿ ನಕಾರಾತ್ಮಕವಾಗಿದೆ ಎಂದು ಮೇಘಾಲಯ ಪೊಲೀಸರು ತಿಳಿಸಿದ್ದಾರೆ. ಸೋನಮ್ ಅವರ ಸಹೋದರ ಗೋವಿಂದ್ ರಘುವಂಶಿ ಬುಧವಾರ ರಾಜಾ ಅವರ ಮನೆಗೆ ಭೇಟಿ ನೀಡಿದ್ದರು. ಸೋನಮ್ ಕೊಲೆ ಮಾಡಿದ್ದಾಳೆ ಎಂದು ಸಾಕ್ಷಿಗಳು ಸ್ಪಷ್ಟವಾಗಿ ಸೂಚಿಸುತ್ತವೆ, ಆಕೆಗೆ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
Advertisement