
ರೈಲಿನ ಸಾಮಾನ್ಯ ಬೋಗಿಯಲ್ಲಿ ಕುಳಿತಿದ್ದ 15 ವರ್ಷದ ಬಾಲಕಿಗೆ ತನ್ನ ಮರ್ಮಾಂಗ ತೋರಿಸಿ ವೃದ್ಧ ವ್ಯಕ್ತಿಯೋರ್ವ ವಿಕೃತಿ ಮೆರೆದಿರುವ ಘಟನೆ ತ್ರಿಪುರಾದಲ್ಲಿ ನಡೆದಿದೆ. ಅಗರ್ತಲಾ ಮತ್ತು ಫಿರೋಜ್‌ಪುರದ ನಡುವೆ ಚಲಿಸುವ ತ್ರಿಪುರ ಸುಂದರಿ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ನಡೆದಿದ್ದು ನಂತರ ಬಾಲಕಿ ತನ್ನ ಚಪ್ಪಲಿಯಿಂದ ವ್ಯಕ್ತಿಗೆ ಥಳಿಸಿದ್ದಾಳೆ.
ಘಟನೆ ಸಂಬಂಧ ತ್ರಿಪುರಾದ ಧರ್ಮನಗರ ಪಟ್ಟಣದಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) ಅಮರ್‌ಪುರದ ನಿವಾಸಿ ಮೊಹಮ್ಮದ್ ಇಬ್ರಾಹಿಂ ಎಂಬ ಮುಸ್ಲಿಂ ವ್ಯಕ್ತಿಯನ್ನು ಬಂಧಿಸಿದ್ದಾರೆ. ಅಂಬಾಸ್ಸಾ ನಿಲ್ದಾಣದಲ್ಲಿ ರೈಲಿನಿಂದ ಹಲವು ಪ್ರಯಾಣಿಕರು ಇಳಿದು ಹೋಗಿದ್ದರು. ರೈಲು ಸುರಂಗದ ಮೂಲಕ ಹಾದುಹೋಗುತ್ತಿದ್ದಾಗ ಈ ಪರಿಸ್ಥಿತಿಯನ್ನು ಬಳಸಿಕೊಂಡ ಇಬ್ರಾಹಿಂ ಬಾಲಕಿಯ ಮುಂದೆ ಕುಳಿತು ತನ್ನ ಮರ್ಮಾಂಗವನ್ನು ಪ್ರದರ್ಶಿಸಿದ್ದಾನೆ.
ಮೊಹಮ್ಮದ್ ಇಬ್ರಾಹಿಂನ ನೀಚ ಕೃತ್ಯದ ವೀಡಿಯೊವನ್ನು ಸಂತ್ರಸ್ತೆ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಷಯವು ಇತರ ಪ್ರಯಾಣಿಕರ ಗಮನಕ್ಕೆ ಬಂದಿದ್ದು ಆರೋಪಿಗೆ ಹಿಡಿದು ಪದೇ ಪದೇ ಕಪಾಳಮೋಕ್ಷ ಮಾಡಿದ್ದಾರೆ. ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಮಹಿಳೆಯೊಬ್ಬರು ಇಬ್ರಾಹಿಂಗೆ ಚಪ್ಪಲಿಯಿಂದ ಹೊಡೆಯುತ್ತಿರುವುದು ಕಂಡುಬಂದಿದೆ.
ರೈಲು ಧರ್ಮನಗರ ಪಟ್ಟಣವನ್ನು ತಲುಪಿದ ನಂತರ, ಆರೋಪಿಯನ್ನು ರೈಲಿನಿಂದ ಇಳಿಸಿ ಸರ್ಕಾರಿ ರೈಲ್ವೆ ಪೊಲೀಸರಿಗೆ (GRP) ಒಪ್ಪಿಸಲಾಯಿತು.
Advertisement