
ಥಾಣೆ: ಭಾರತದಲ್ಲಿ ಅಕ್ರಮವಾಗಿ ತಂಗಿದ್ದಕ್ಕಾಗಿ ಥಾಣೆ ನ್ಯಾಯಾಲಯ ಎಂಟು ಮ್ಯಾನ್ಮಾರ್ ಪ್ರಜೆಗಳಿಗೆ ಎರಡು ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ಶಿಕ್ಷೆಯ ಅವಧಿ ಮುಗಿದ ನಂತರ ಅವರನ್ನು ಗಡೀಪಾರು ಮಾಡುವಂತೆ ಆದೇಶಿಸಿದೆ.
ಆರೋಪಿಗಳು ವಿದೇಶಿಯರಲ್ಲ ಎಂದು ಸಾಬೀತುಪಡಿಸಲು ಸಾಕ್ಷಿಗಳ ಕೊರತೆಯಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಿಟಿ ಪವಾರ್ ಅವರು ಜೂನ್ 10 ರಂದು ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿದರು.
UNHCR ನೀಡಿದ ನಿರಾಶ್ರಿತರ ಕಾರ್ಡ್‌ಗಳು ಭಾರತದಲ್ಲಿ ಉಳಿಯಲು ಯಾವುದೇ ಕಾನೂನು ಮಾನ್ಯತೆಯನ್ನು ಹೊಂದಿಲ್ಲ, ಏಕೆಂದರೆ ದೇಶವು 1951 ರ ಯುಎನ್ ನಿರಾಶ್ರಿತರ ಸಮಾವೇಶಕ್ಕೆ ಸಹಿ ಹಾಕಿಲ್ಲ ಎಂಬುದನ್ನು ನ್ಯಾಯಾಲಯ ಪರಿಗಣಿಸಿದೆ. ಶನಿವಾರ ತೀರ್ಪಿನ ಪ್ರತಿ ಲಭ್ಯವಾಗಿದೆ.
ವಿದೇಶಿಯರ ಕಾಯ್ದೆ 1946 ರ ನಿಬಂಧನೆಗಳ ಅಡಿಯಲ್ಲಿ ಎಂಟು ವ್ಯಕ್ತಿಗಳನ್ನು ತಪ್ಪಿತಸ್ಥರೆಂದು ಘೋಷಿಸಲಾಯಿತು ಮತ್ತು ಪ್ರತಿಯೊಬ್ಬರಿಗೂ 10,000 ರೂ. ದಂಡ ವಿಧಿಸಲಾಯಿತು. ಒಂಬತ್ತನೇ ಆರೋಪಿ ಭಾರತದ ರಿಯಾಜ್ ಅಹ್ಮದ್ ಅಕ್ಬರ್ ಅಲಿ ಶೇಖ್ ವಿರುದ್ಧದ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆತನನ್ನು ಖುಲಾಸೆಗೊಳಿಸಲಾಗಿದೆ.
ಏನಿದು ಕೇಸ್? ಉತ್ತನ್ ಸಾಗರಿ ಪೊಲೀಸರು ದೊರೆತ ಸುಳಿವಿನ ಆಧಾರದ ಮೇಲೆ ಫೆಬ್ರವರಿ 26, 2024 ರಂದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಚೌಕ್‌ಗಾಂವ್ ಜೆಟ್ಟಿಯಲ್ಲಿ ಎಂಟು ಜನರನ್ನು ಪೊಲೀಸರು ಬಂಧಿಸಿದ್ದರು. ಅವರ ಬಳಿ ಮೊಬೈಲ್ ಫೋನ್‌ಗಳು ಮತ್ತು ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಹೈ ಕಮಿಷನರ್ ನೀಡುವ ಕಾರ್ಡ್‌ಗಳು ಪತ್ತೆಯಾಗಿತ್ತು. ಅವುಗಳಲ್ಲಿ ಅವರು ಮ್ಯಾನ್ಮಾರ್‌ನ ನಾಗರಿಕರು ಎಂದು ಹೇಳಲಾಗಿತ್ತು.
Advertisement