
ಉತ್ತರ ಪ್ರದೇಶ: ದೇಶಾದ್ಯಂತ ಮೇಘಾಲಯದಲ್ಲಿ ಸಂಭವಿಸಿದ್ದ ಹನಿಮೂನ್ ಹತ್ಯೆ ಪ್ರಕರಣ ಸದ್ದು ಮಾಡುತ್ತಿರುವಾಗಲೇ, ಉತ್ತರಪ್ರದೇಶದಲ್ಲಿ ಮದುವೆಗೂ ಮುನ್ನವೇ ವರನ ಹತ್ಯೆ ನಡೆದಿದೆ.
ಉತ್ತರ ಪ್ರದೇಶದ ರಾಂಪುರದಲ್ಲಿ ಮದುವೆಗೆ ಒಂದು ದಿನ ಮೊದಲು ವರನ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಹಾಲ್ ಮೃತ ದುರ್ದೈವಿಯಾಗಿದ್ದಾನೆ. ಈ ಘಟನೆ ಜೂನ್ 15 ರಂದು ನಡೆದಿದ್ದು, ಮೃತನ ಗ್ರಾಮವಾದ ಧನಪುರದ ವ್ಯಕ್ತಿ ಸದ್ದಾಂ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ, ಆತನಿಗೆ ವಧುವಿನೊಂದಿಗೆ ಸಂಬಂಧವಿದೆ ಎಂದು ಶಂಕಿಸಲಾಗಿದೆ.
ಸೋಮವಾರ ಬೆಳಿಗ್ಗೆ ಆರೋಪಿ ಸದ್ದಾಂ ಅವರನ್ನು ಬಂಧಿಸಲಾಗಿದೆ ಎಂದು ರಾಂಪುರ ನಗರದ ವೃತ್ತ ಅಧಿಕಾರಿ ಜಿತೇಂದ್ರ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು. ನಿಹಾಲ್ ನ ಮೊಬೈಲ್ ಫೋನ್ ನ್ನು ತಾನು ಮರೆಮಾಡಿದ್ದೇನೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದರು.
"ನಿಹಾಲ್ ನನ್ನು 15 ನೇ ತಾರೀಖಿನಂದು ಕೊಲೆ ಮಾಡಲಾಯಿತು. ಕೊಲೆಯ ನಂತರ, ಕೊಟ್ವಾಲಿ ಗಂಜ್ ಪೊಲೀಸ್ ಠಾಣೆಯ ಪೊಲೀಸರು ನಿಹಾಲ್ ನ ಮೊಬೈಲ್ ನ್ನು ಮರುಪಡೆಯಲು ಆರೋಪಿ ಸದ್ದಾಂ ಅವರನ್ನು ಕರೆದೊಯ್ದರು. ರಿಕವರಿ ಪ್ರಕ್ರಿಯೆಯಲ್ಲಿ, ಆರೋಪಿ ಸದ್ದಾಂ ಪೊಲೀಸ್ ಕಾನ್ಸ್ಟೇಬಲ್ ನಿಂದ ಪಿಸ್ತೂಲ್ ಕಸಿದುಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದರು. ತಕ್ಷಣ, ಎಸ್ಎಚ್ಒ ಆತ್ಮರಕ್ಷಣೆಗಾಗಿ ದುಷ್ಕರ್ಮಿಯ ಮೇಲೆ ಗುಂಡು ಹಾರಿಸಿದರು. ದುಷ್ಕರ್ಮಿ ಗಾಯಗೊಂಡರು ಮತ್ತು ತಕ್ಷಣ ಆಸ್ಪತ್ರೆಗೆ ಕಳುಹಿಸಲಾಗಿದೆ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ," ಎಂದು ರಾಂಪುರ ನಗರದ ವೃತ್ತ ಅಧಿಕಾರಿ ಜಿತೇಂದ್ರ ಸಿಂಗ್ ನಿನ್ನೆ ಸುದ್ದಿಗಾರರಿಗೆ ತಿಳಿಸಿದರು.
ಕೊತ್ವಾಲಿಗಂಜ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಮೃತ ವ್ಯಕ್ತಿಗೆ ಸೇರಿದ ಮೊಬೈಲ್ ನ್ನು ವಶಪಡಿಸಿಕೊಂಡಿದ್ದಾರೆ. "ಪ್ರಸ್ತುತ, ಇದು ಪ್ರೇಮ ಪ್ರಕರಣವೇ ಎಂಬುದು ಸ್ಪಷ್ಟವಾಗಿಲ್ಲ. ನಿಹಾಲ್ ಜೊತೆ ವಧುವಿನ ವಿವಾಹ ಜೂನ್ 16 ರಂದು ಬೆಳಿಗ್ಗೆ ನಿಶ್ಚಯಿಸಲಾಗಿತ್ತು" ಎಂದು ಪೊಲೀಸ್ ಅಧಿಕಾರಿ ಹೇಳಿದರು.
Advertisement