Honeymoon murder: ರಾಜಾ ರಘುವಂಶಿ ಕುಟುಂಬಕ್ಕೆ 'ಕೊಲೆಗಾತಿ' ಸೋನಮ್ ಸಹೋದರ ಬೆಂಬಲ; ನ್ಯಾಯಕ್ಕಾಗಿ ಹೋರಾಟದ ಪಣ! Video

ಮಧ್ಯಪ್ರದೇಶದ ಇಂದೋರ್‌ನ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣ ಪ್ರಮುಖ ಘಟ್ಟಕ್ಕೆ ತಲುಪಿದೆ. ರಾಜಾನನ್ನು ತಾನೇ ಕೊಂದಿರುವುದಾಗಿ ಪತ್ನಿ ಸೋನಮ್ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.
ರಾಜಾ ರಘುವಂಶಿ-ಸೋನಮ್
ರಾಜಾ ರಘುವಂಶಿ-ಸೋನಮ್
Updated on

ಇಂದೋರ್: ಮಧ್ಯಪ್ರದೇಶದ ಇಂದೋರ್‌ನ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣ ಪ್ರಮುಖ ಘಟ್ಟಕ್ಕೆ ತಲುಪಿದೆ. ರಾಜಾನನ್ನು ತಾನೇ ಕೊಂದಿರುವುದಾಗಿ ಪತ್ನಿ ಸೋನಮ್ ರಘುವಂಶಿ (Sonam Raghuvanshi) ವಿಶೇಷ ತನಿಖಾ ತಂಡದ (SIT) ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ಶಿಲ್ಲಾಂಗ್ ಪೊಲೀಸರು ಪ್ರಸ್ತುತಪಡಿಸಿದ ದೃಢವಾದ ಪುರಾವೆಗಳು ಮತ್ತು ಕಠಿಣ ವಿಚಾರಣೆಯು ಸೋನಮ್ ಅವರನ್ನು ಸತ್ಯವನ್ನು ಬಾಯಿಬಿಡುವಂತೆ ಮಾಡಿತು. ಇದರ ನಂತರ, ಸೋನಮ್ ಅವರ ಸಹೋದರ ಸೋನಮ್ ಅವರೊಂದಿಗಿನ ಎಲ್ಲಾ ಸಂಬಂಧಗಳನ್ನು ಮುರಿದುಕೊಂಡಿರುವುದಾಗಿ ಸಾರ್ವಜನಿಕವಾಗಿ ಘೋಷಿಸಿದರು. ರಾಜಾ ರಘುವಂಶಿ (Raja Raghuvanshi) ಪರವಾಗಿ ನ್ಯಾಯಕ್ಕಾಗಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಸೋನಮ್ ಅವರ ಸಹೋದರ ಗೋವಿಂದ್ ರಘುವಂಶಿ, ಸೋನಮ್ ಕೊಲೆ ಮಾಡಿದ್ದಾಳೆ ಎಂಬುದು ನಮಗೆ 100 ಪ್ರತಿಶತ ಖಚಿತವಾಗಿದೆ. ಸಾಕ್ಷ್ಯಗಳ ಆಧಾರದ ಮೇಲೆ ಇದು ಸ್ಪಷ್ಟವಾಗಿದೆ. ನಾವು ರಾಜಾ ರಘುವಂಶಿ ಕುಟುಂಬಕ್ಕೆ ಕ್ಷಮೆಯಾಚಿಸಿದ್ದೇವೆ. ಸೋನಮ್ ಕೊಲೆ ಮಾಡಿದ್ದರೆ ಅವಳನ್ನು ಗಲ್ಲಿಗೇರಿಸಬೇಕು ಎಂದು ಹೇಳಿದರು. ಮತ್ತೊಂದೆಡೆ, ಶಿಲ್ಲಾಂಗ್ ಪೊಲೀಸರು ಘಟನೆಯ ನಂತರ ಕೊಲೆಗಾರರನ್ನು ಸೋನಮ್ ಭೇಟಿಯಾದ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಿದರು. ಅದರಲ್ಲಿ ಆಕೆ ಆರೋಪಿಗಳ ಜೊತೆ ಮಾತನಾಡುತ್ತಿರುವುದು ಕಂಡುಬಂದಿದೆ. ಕರೆ ವಿವರಗಳು ಮತ್ತು ಮೊಬೈಲ್ ಸ್ಥಳದ ಆಧಾರದ ಮೇಲೆ ಪೊಲೀಸರು ಪ್ರಶ್ನೆಗಳನ್ನು ಸಿದ್ಧಪಡಿಸಿದರು. ಆದರೆ ತಪ್ಪು ಒಪ್ಪಿಕೊಳ್ಳದೆ ಸೋನಮ್‌ಗೆ ಯಾವುದೇ ದಾರಿ ಇರಲಿಲ್ಲ.

ಶಿಲ್ಲಾಂಗ್ ಪೊಲೀಸರು ಸೋನಮ್ ರಘುವಂಶಿ ಮತ್ತು ರಾಜ್ ಕುಶ್ವಾಹ ಅವರನ್ನು ಮುಖಾಮುಖಿ ವಿಚಾರಣೆ ನಡೆಸಿದರು. ಈ ಸಂದರ್ಭದಲ್ಲಿ, ಸೋನಮ್ ಹೇಳಿಕೆಗಳಲ್ಲಿ ಹಲವು ವಿರೋಧಾಭಾಸಗಳು ಬೆಳಕಿಗೆ ಬಂದಿತ್ತು. ಇದು ಅವರ ಅಪರಾಧವನ್ನು ಮತ್ತಷ್ಟು ದೃಢಪಡಿಸಿತು. ಪೊಲೀಸ್ ಮೂಲಗಳ ಪ್ರಕಾರ, ಸೋನಮ್ ವೈಯಕ್ತಿಕ ದ್ವೇಷ ಮತ್ತು ಕೌಟುಂಬಿಕ ವಿವಾದವನ್ನು ಕೊಲೆಗೆ ಕಾರಣವೆಂದು ಉಲ್ಲೇಖಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕೊಲೆಯಲ್ಲಿ ಭಾಗಿಯಾಗಿರುವ ಇತರ ಶಂಕಿತರನ್ನು ಹುಡುಕಲಾಗುತ್ತಿದೆ. ಸೋನಮ್ ಇತರ ಕೆಲವು ಜನರ ಹೆಸರುಗಳನ್ನು ಸಹ ಬಹಿರಂಗಪಡಿಸಿದ್ದಾಳೆ. ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ.

ರಾಜಾ ರಘುವಂಶಿ-ಸೋನಮ್
ಮೇಘಾಲಯ ಹನಿಮೂನ್ ಕೊಲೆ ಕೇಸ್: ಗಂಡನ ಹತ್ಯೆಯ ನಂತರ 17 ದಿನಗಳ ಕಾಲ ಸೋನಂ ಎಲ್ಲಿದ್ದರು? ಮಿಲಿಯನ್ ಡಾಲರ್ ಪ್ರಶ್ನೆ!

ಇದಕ್ಕೂ ಮೊದಲು, ಗೋವಿಂದ್ ರಘುವಂಶಿ ಮೃತ ರಾಜಾ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದು, ಅಲ್ಲಿ ಆತ ಕೊಲೆ ಮಾಡಿದ ವ್ಯಕ್ತಿಯನ್ನು ಗಲ್ಲಿಗೇರಿಸಬೇಕು ಎಂದು ಹೇಳಿದರು. ಸೋನಮ್ ಅವರ ಪಿತೂರಿಯ ಬಗ್ಗೆ ತನಗೆ ತಿಳಿದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ರಾಜಾ ರಘುವಂಶಿ ಕೊಲೆ ಪ್ರಕರಣವನ್ನು ಭೇದಿಸಿದ್ದೇವೆಂದು ಹೇಳಿಕೊಳ್ಳುವ ಮೇಘಾಲಯ ಪೊಲೀಸರು, ಈ ಕೊಲೆಯ ಮಾಸ್ಟರ್ ಮೈಂಡ್ ಸೋನಮ್ ರಘುವಂಶಿ ಎಂದು ಹೇಳುತ್ತಾರೆ. ಅವರು ತಮ್ಮ ರಾಜ್ ಕುಶ್ವಾಹ ಮತ್ತು ನಾಲ್ವರು ಗುತ್ತಿಗೆ ಕೊಲೆಗಾರರ ​​ಸಹಾಯದಿಂದ ಈ ಪಿತೂರಿ ನಡೆಸಿದ್ದಾರೆ. ಪೊಲೀಸರು ಎಲ್ಲಾ ಆರೋಪಿಗಳನ್ನು ಶಿಲ್ಲಾಂಗ್‌ಗೆ ಟ್ರಾನ್ಸಿಟ್ ರಿಮಾಂಡ್‌ಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರನ್ನು ನಿರಂತರವಾಗಿ ವಿಚಾರಣೆ ನಡೆಸಲಾಗುತ್ತಿದೆ. ಮೇಘಾಲಯ ಪೊಲೀಸರು ಇಡೀ ಕಾರ್ಯಾಚರಣೆಗೆ 'ಆಪರೇಷನ್ ಹನಿಮೂನ್' (Operation Honeymoon) ಎಂದು ಹೆಸರಿಸಿದ್ದು ಇದರ ಅಡಿಯಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಯಿತು. ಇದರ ತನಿಖೆಗಾಗಿ ರಚಿಸಲಾದ ಎಸ್‌ಐಟಿಯಲ್ಲಿ 120 ಪೊಲೀಸರು ಸೇರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com