
ಭಾಗ್ಪತ್: ಲವರ್ ಜೊತೆ OYO ರೂಮಿಗೆ ಹೋಗಿದ್ದ ಪತ್ನಿಯನ್ನು ಆಕೆಯ ಪತಿ ರೆಡ್ ಹ್ಯಾಂಡ್ ಆಗಿ ಹಿಡಿಯುತ್ತಲೇ ಮಹಿಳೆ ಕಟ್ಟಡ ರೂಮಿನಿಂದಲೇ ಜಿಗಿದು ಪರಾರಿಯಾಗಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಪ್ರಿಯಕರನ ಜೊತೆ ಓಯೋ ರೂಮ್‌ನಲ್ಲಿದ್ದ ಹೆಂಡತಿಯನ್ನ ರೆಡ್ ಹ್ಯಾಂಡ್ ಆಗಿ ಗಂಡ ಪತ್ತೆ ಮಾಡಿದ್ದು, ಗಂಡನ ಕೈಯಲ್ಲಿ ಸಿಕ್ಕಿ ಹಾಕಿಕೊಂಡ ಪತ್ನಿ ಹೊಟೆಲ್ ರೂಮಿನಿಂದಲೇ ಜಿಗಿದು ಪರಾರಿಯಾಗಿದ್ದಾಳೆ.
ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಓಯೋ ರೂಮ್‌ನಲ್ಲಿ ತನ್ನ ಪ್ರೇಮಿಯನ್ನು ಭೇಟಿಯಾಗಲು ಬಂದಿದ್ದ ಮಹಿಳೆಯೊಬ್ಬಳು 12 ಅಡಿ ಎತ್ತರದ ಟೆರೇಸ್‌ನಿಂದ ಕೆಳಗೆ ಹಾರಿದ್ದಾಳೆ. ಅಷ್ಟೇ ಅಲ್ಲದೇ ಮಹಿಳೆ ಹಾರುತ್ತಿರುವ ವಿಡಿಯೋ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಈ ಸಂಪೂರ್ಣ ಪ್ರಕರಣ ಬಾಗ್ಪತ್ ಜಿಲ್ಲೆಯ ಛಪ್ರೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕಾಕೋರಿ ಕಲಾ ಗ್ರಾಮದ ಯುವಕನೊಬ್ಬ ತುಘಾನಾ ಗ್ರಾಮದ ಯುವತಿಯನ್ನು 2019 ರಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದ. ಈ ಜೋಡಿಗೆ ಒಬ್ಬ ಮಗ ಕೂಡ ಇದ್ದಾನೆ. ಆದರೆ ಇತ್ತೀಚೆಗೆ ದಂಪತಿ ನಡುವೆ ಬಿರುಕು ಉಂಟಾಗಿತ್ತು. ಅಲ್ಲದೇ ಹಲವು ಬಾರಿ ಇಬ್ಬರ ನಡುವೆ ಜಗಳಗಳು ಕೂಡಾ ನಡೆದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.
ಮಹಿಳೆಗೆ ಅಕ್ರಮ ಸಂಬಂಧ
ಇನ್ನು ಈ ಜೋಡಿ ಕಲಹಕ್ಕೆ ಮಹಿಳೆಯ ಅಕ್ರಮ ಸಂಬಂಧ ಕಾರಣ ಎಂದು ಹೇಳಲಾಗಿತ್ತು. ಆಕೆಯ ಬಾಯ್ ಫ್ರೆಂಡ್ ಕಾರಣದಿಂದಾಗಿಯೇ ದಂಪತಿಗಳ ನಡುವೆ ಆಗಾಗ ಜಗಳವಾಗುತ್ತಿತ್ತು. ಇತ್ತೀಚೆಗೆ ಪ್ರಿಯಕರನೊಂದಿಗೆ ಮಹಿಳೆ ಓಯೋಗೆ ಹೋಗಿದ್ದಾಳೆ. ಆದರೆ ಇವರಿಬ್ಬರ ಖತರ್ನಾಕ್ ಕೆಲಸ ಮಹಿಳೆಯ ಪತಿಗೆ ಗೊತ್ತಾಗಿದೆ. ತಕ್ಷಣ ಗಂಡ ತನ್ನ ಅತ್ತೆ-ಮಾವಂದಿರನ್ನು ಕರೆಸಿಕೊಂಡು ಆಕೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಮುಂದಾಗಿದ್ದಾನೆ.
ಹೊಟೆಲ್ ನಿಂದಲೇ ಕೆಳಗೆ ಹಾರಿದ ಮಹಿಳೆ
ಅದರಂತೆ ಆತ ಓಯೋ ಹೊಟೆಲ್ ಗೆ ಹೋಗುತ್ತಲೇ ಈ ವಿಚಾರ ತಿಳಿದ ಖತರ್ನಾಕ್ ಲೇಡಿ ಹೋಟೆಲ್‌ನ ಹಿಂದಿನ ಕೋಣೆಯ ಕಿಟಕಿಯಿಂದ 12 ಅಡಿ ಎತ್ತರದ ಟೆರೇಸ್‌ನಿಂದ ಕೆಳಗೆ ಜಿಗಿದಿದ್ದಾಳೆ. ಇದನ್ನು ಆಕೆಯ ಗಂಡ ವಿಡಿಯೋ ಮಾಡಿದ್ದು, ಅದರಲ್ಲಿ ಮಹಿಳೆ ಹೇಗೆ ಜಿಗಿದು ಓಡಿಹೋಗಿದ್ದಾಳೆ ಎಂಬುದು ಸ್ಪಷ್ಟವಾಗಿ ನೋಡಬಹುದು. ಸದ್ಯ ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿಯೂ ವೈರಲ್ ಆಗುತ್ತಿದೆ.
ಲವರ್ ನನ್ನು ಹಿಡಿದ ಗ್ರಾಮಸ್ಥರು, ದೂರು ದಾಖಲು
ಇನ್ನು ಆರೋಪಿತ ಪ್ರೇಮಿಯನ್ನು ಸ್ಥಳೀಯರು ಹಿಡಿದು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಆದರೆ ಪೊಲೀಸರು ಬರುವ ಮೊದಲೇ ಮಹಿಳೆ ಪರಾರಿಯಾಗಿದ್ದಾಳೆ. ತನ್ನ ಜೀವಕ್ಕೆ ಬೆದರಿಕೆ ಇದೆ ಎಂದು ಹೆದರಿ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮಹಿಳೆ ತನ್ನ ಪ್ರಿಯಕರ ಶೋಭಿತ್ ಜೊತೆ ಹೋಟೆಲ್‌ಗೆ ಬಂದಿದ್ದಾಳೆ.
ಸ್ವಲ್ಪ ಸಮಯದ ನಂತರ, ಆಕೆಯ ಪತಿ ಮತ್ತು ಅತ್ತೆ ಮಾವ ಸ್ಥಳಕ್ಕೆ ತಲುಪಿದ್ದಾರೆ, ಸ್ಪಷ್ಟವಾಗಿ ಅವಳನ್ನು ಹಿಂಬಾಲಿಸಿದ್ದಾರೆ. ಅವರನ್ನು ನೋಡಿದ ಮಹಿಳೆ ಭಯಭೀತರಾಗಿ ಸುಮಾರು 12 ಅಡಿ ಎತ್ತರದ ಹೋಟೆಲ್ ಛಾವಣಿಯಿಂದ ಹಾರಿ ಪರಾರಿಯಾಗಿದ್ದಾಳೆ. ಆರೋಪಿತ ಪ್ರೇಮಿಯನ್ನು ಬಂಧಿಸಲಾಗಿದೆ ಮತ್ತು ವಿಚಾರಣೆ ನಡೆಸಲಾಗುತ್ತಿದೆ ಎಂದು ಬಾರೌತ್ ಕೊಟ್ವಾಲಿ ಸ್ಟೇಷನ್ ಹೌಸ್ ಅಧಿಕಾರಿ (SHO) ಮನೋಜ್ ಕುಮಾರ್ ಚಾಹಲ್ ಹೇಳಿದ್ದಾರೆ.
ಅಂದಹಾಗೆ ಈ ಹೋಟೆಲ್ ಅನ್ನು ತುಗಾನಾ ಗ್ರಾಮದ ಯುವಕ ಬಾಡಿಗೆಗೆ ನಡೆಸುತ್ತಿದ್ದ, ಆತನನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಪತಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ತನಿಖೆಯಲ್ಲಿದೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಚಾಹಲ್ ಹೇಳಿದರು.
ಮದುವೆಗಿಂತ ಮೊದಲೇ ಪರಸಂಗ
ಇನ್ನು ತನ್ನ ಪತ್ನಿ ಮದುವೆಗೆ ಮೊದಲು ಹಲವಾರು ಪುರುಷರೊಂದಿಗೆ ಸಂಬಂಧ ಹೊಂದಿದ್ದಳು ಮತ್ತು ಆ ನಂತರವೂ ಆ ಸಂಬಂಧಗಳು ಮುಂದುವರೆದವು ಎಂದು ಪತಿ ಆರೋಪಿಸಿದ್ದಾರೆ. ಅಲ್ಲದೆ ಆಕೆ ಸುಳ್ಳು ಪ್ರಕರಣಗಳನ್ನು ಕಟ್ಟಿ ತನಗೆ ಬೆದರಿಕೆ ಹಾಕುತ್ತಿದ್ದಳು ಮತ್ತು ಆಕ್ಷೇಪಿಸಿದರೆ ಕೊಲ್ಲುವುದಾಗಿಯೂ ಬೆದರಿಕೆ ಹಾಕುತ್ತಿದ್ದಳು ಎಂದು ಪತಿ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
Advertisement