
ನವದೆಹಲಿ: ಸಂಘರ್ಷ ಪೀಡಿತ ಇರಾನ್‌ನಲ್ಲಿ ಸಿಲುಕಿದ್ದ 296 ಭಾರತೀಯರು ಮತ್ತು ನಾಲ್ವರು ನೇಪಾಳಿ ಪ್ರಜೆಗಳನ್ನು ಹೊತ್ತ ಮತ್ತೊಂದು ವಿಶೇಷ ವಿಮಾನ ಬುಧವಾರ ದೆಹಲಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಇದರೊಂದಿಗೆ ಆಪರೇಷನ್ ಸಿಂಧು ಅಡಿಯಲ್ಲಿ ಸ್ಥಳಾಂತರಿಸಲಾದ ಒಟ್ಟು ಭಾರತೀಯರ ಸಂಖ್ಯೆ 3,154ಕ್ಕೆ ತಲುಪಿದೆ.
"ಜೂನ್ 25 ರಂದು ಸಂಜೆ 4:30 ಕ್ಕೆ ಮಶಾದ್‌ನಿಂದ ಹೊರಟು ನವದೆಹಲಿಗೆ ಬಂದಿಳಿದ ವಿಶೇಷ ವಿಮಾನದಲ್ಲಿ 296 ಭಾರತೀಯರು ಮತ್ತು 4 ನೇಪಾಳಿ ಪ್ರಜೆಗಳನ್ನು ಇರಾನ್‌ನಿಂದ ಸ್ಥಳಾಂತರಿಸಲಾಯಿತು. ಆಪರೇಷನ್ ಸಿಂಧು ಕಾರ್ಯಾಚರಣೆಯಡಿ ಇಲ್ಲಿಯವರೆಗೆ 3154 ಭಾರತೀಯ ಪ್ರಜೆಗಳನ್ನು ಇರಾನ್‌ನಿಂದ ಮನೆಗೆ ಕರೆತರಲಾಗಿದೆ" ಎಂದು ವಿದೇಶಾಂಗ ಸಚಿವಾಲಯ X ನಲ್ಲಿ ಪೋಸ್ಟ್ ಮಾಡಿದೆ.
ಆಪರೇಷನ್ ಸಿಂಧು ಕಾರ್ಯಾಚರಣೆ ಅಡಿ ಭಾರತ ಮಂಗಳವಾರ ಇರಾನ್ ಮತ್ತು ಇಸ್ರೇಲ್ ನಿಂದ 1100 ಜನರನ್ನು ಕರೆತಂದಿತ್ತು.
ಇಸ್ರೇಲ್ ಮತ್ತು ಇರಾನ್ ನಡುವಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಇರಾನ್ ನಿಂದ ಹೊರ ಹೋಗಲು ಬಯಸುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಸರ್ಕಾರ ಆಪರೇಷನ್ ಸಿಂಧು ಕಾರ್ಯಾಚರಣೆ ಪ್ರಾರಂಭಿಸಿದೆ.
Advertisement