ದೇಶದ ಯುವ ಜನರಲ್ಲಿ ಹೃದಯಾಘಾತ ಹೆಚ್ಚಳ: ಸ್ಟೆರಾಯ್ಡ್, ಹಾರ್ಮೋನ್ ಥೆರಪಿಯಿಂದ ಅಪಾಯ; ವೈದ್ಯರ ಎಚ್ಚರಿಕೆ ಏನು?

ಫಿಟ್ ಆಗಿ ಕಾಣಬೇಕು ಎಂಬ ಮನೋಭಾವವುಳ್ಳ ಯುವ ಜನರಲ್ಲಿ ಹೃದಯಾಘಾತ ರಕ್ತನಾಳದಂತಹ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಕಳವಳಕ್ಕೆ ಕಾರಣ.
heart attack
ಹೃದಯಾಘಾತ (ಸಾಂಕೇತಿಕ ಚಿತ್ರ)
Updated on

ನವದೆಹಲಿ: ಕನ್ನಡದ 'ಹುಡುಗರು' ಚಿತ್ರದ 'ಬೋರ್ಡ್ ಇಲ್ಲದ ಬಸ್' ಸಾಂಗ್ ನಲ್ಲಿ ಪುನೀತ್ ರಾಜ್ ಕುಮಾರ್ ಜೊತೆಗೆ ಹೆಜ್ಜೆ ಹಾಕಿದ್ದ ನಟಿ ಶೆಫಾಲಿ ಜರಿವಾಲಾ ಇತ್ತೀಚಿಗೆ ಹೃದಯಾಘಾತದಿಂದ ಸಾವನ್ನಪ್ಪಿರುವಂತೆಯೇ ದೇಶದಲ್ಲಿ ಯುವ ಜನತೆಯಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿರುವ ಮಾತಿಗೆ ಮತ್ತಷ್ಟು ಇಂಬು ನೀಡಿದೆ. ಪುನೀತ್ ರಾಜ್ ಕುಮಾರ್ ಕೂಡಾ ಹೃದಯಾಘಾತದಿಂದಲೇ ಸಾವನ್ನಪ್ಪಿದ್ದರು.

ಫಿಟ್ ಆಗಿ ಕಾಣಬೇಕು ಎಂಬ ಮನೋಭಾವವುಳ್ಳ ಯುವ ಜನರಲ್ಲಿ ಹೃದಯಾಘಾತ ರಕ್ತನಾಳದಂತಹ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಅಲ್ಲದೇ ಫಿಟ್ ನೆಸ್ , ವರ್ಕೌಟ್ ಗಳೇ ಇದಕ್ಕೆ ಕಾರಣನಾ? ಎಂಬಂತಹ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹೃದಯಾಘಾತಕ್ಕೆ ಪ್ರಮುಖ ಕಾರಣಗಳು: ಈ ಕುರಿತು ಮಾತನಾಡಿರುವ ಕೌಶಂಬಿಯ ಯಶೋಧಾ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ Principal Consultant ಡಾ. ಡಾ ಧೀರೇಂದ್ರ ಸಿಂಘಾನಿಯಾ, ಸ್ಟೆರಾಯ್ಡ್ ಗಳು, ನಿದ್ರೆಯ ಕೊರತೆ ಮತ್ತು ವಿಶೇಷವಾಗಿ ಮಹಿಳೆಯರಲ್ಲಿನ ಹಾರ್ಮೋನ್ ಥೆರಪಿ ಹೃದಯಾಘಾತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದಿದ್ದಾರೆ.

ಸೆಲೆಬ್ರಿಟಿಗಳಲ್ಲಿ ಫಿಟ್ ಆಗಿ ಕಾಣುವ ಮನೋಭಾವ, ನಿದ್ರೆಯ ಕೊರತೆ: ಸೆಲೆಬ್ರಿಟಿಯಾಗಲೀ ಅಥವಾ ಸಾಮಾನ್ಯ ವ್ಯಕ್ತಿಯಾಗಲೀ ದೇಹದ ನಿಯಮಗಳನ್ನು ಪಾಲಿಸದಿದ್ದರೆ ಎಲ್ಲರಿಗೂ ಸಮಸ್ಯೆಗಳು ಬರುತ್ತವೆ. ಸೆಲೆಬ್ರಿಟಿಗಳಲ್ಲಿ ಎಲ್ಲರೂ ಫಿಟ್ ಆಗಿ ಕಾಣಿಸಿಕೊಳ್ಳಲು ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಏನು ಮಾಡುತ್ತಾರೇ ಎಂಬುದು ಗೊತ್ತಿಲ್ಲ. ಸರಿಯಾಗಿ ನಿದ್ರೆ ಮಾಡದಿರುವುದು ಕೂಡಾ ಹೃದಯಾಘಾತಕ್ಕೆ ಕಾರಣವಾಗಲಿದೆ. ಅನೇಕ ಸೆಲೆಬ್ರಿಟಿಗಳು ಇಡೀ ರಾತ್ರಿ ಎಚ್ಚರವಾಗಿರುತ್ತಾರೆ ಎಂದು ಅವರು ಹೇಳಿದರು.

ಮಹಿಳೆಯರಲ್ಲಿ ಹಾರ್ಮೋನ್ ಥೆರಪಿಯೂ ಪ್ರಮುಖ ಕಾರಣ: ಸ್ಟೀರಾಯ್ಡ್ ಗಳು, ಮಿತಿ ಮೀರಿದ ಔಷಧ ಬಳಕೆ (drug overdoses) ಮಹಿಳೆಯರಲ್ಲಿ ಹಾರ್ಮೋನು ಥೆರಪಿ, ಹಾರ್ಮೋನು ಬದಲಾವಣೆ ಥೆರಪಿ, ಗರ್ಭನಿರೋಧಕ ಮಾತ್ರೆ, ಔಷಧ ಸೇವಿಸುವುದು ಹೃದಯಾಘಾತದ ಅಪಾಯಕ್ಕೆ ಕಾರಣವಾಗಬಹುದು ಎಂದು ಡಾ.ಸಿಂಘಾನಿಯಾ ತಿಳಿಸಿದ್ದಾರೆ.

heart attack
Shefali Jariwala: ಮರಣೋತ್ತರ ಪರೀಕ್ಷೆ ಪೂರ್ಣ; ಸಾವಿಗೆ ಕಾರಣವೇನು? ಪೊಲೀಸ್ ಅಧಿಕಾರಿಗಳು ಹೇಳಿದ್ದು ಹೀಗೆ...

ಸೋಶಿಯಲ್ ಮೀಡಿಯಾ ಬಳಕೆಯಿಂದಲೂ ಹೃದಯಾಘಾತ: ಅಲ್ಲದೇ ಹೆಚ್ಚಾದ ಮಾನಸಿಕ ಒತ್ತಡ ಮತ್ತು ಸೋಶಿಯಲ್ ಮೀಡಿಯಾ ಬಳಕೆ ಚಟ ಕೂಡಾ ರಕ್ತದೊತ್ತಡ ಮತ್ತು ಕಾರ್ಟಿಸೋಲ್ ಮಟ್ಟ ಹೆಚ್ಚಾಗಲು ಕೊಡುಗೆ ನೀಡುತ್ತದೆ. ಇದು ಅಂತಿಮವಾಗಿ ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ಇತ್ತೀಚೆಗೆ ಹೃದಯಾಘಾತದಿಂದ ಬದುಕುಳಿದ 36 ವರ್ಷದ ವ್ಯಕ್ತಿಯ coronary ಆಂಜಿಯೋಗ್ರಫಿಯನ್ನು ಡಾ ಸಿಂಘಾನಿಯಾ ತೋರಿಸಿದರು. ಆತನಿಗೆ ಯಾವುದೇ ಧೂಮಪಾನ, ಮಧ್ಯಪಾನದ ಚಟ ಇರಲಿಲ್ಲ. ವೈದ್ಯಕೀಯ ಚಿಕಿತ್ಸೆ ಕೂಡಾ ಪಡೆಯುತ್ತಿರಲಿಲ್ಲ. ಆದರೂ ಹೃದಯಾಘಾತವಾಗಿತ್ತು. ಇದರಿಂದ ಹೊರಬರಲು ಈಗಲೂ ಪ್ರಾರ್ಥಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com