
ಮುಂಬೈ: ಕನ್ನಡದ 'ಹುಡುಗರು' ಚಿತ್ರದ 'ಬೋರ್ಡ್ ಇಲ್ಲದ ಬಸ್' ಸಾಂಗ್ ನಲ್ಲಿ ಪುನೀತ್ ರಾಜ್ ಕುಮಾರ್ ಜೊತೆಗೆ ಹೆಜ್ಜೆ ಹಾಕಿದ್ದ ನಟಿ ಶೆಫಾಲಿ ಜರಿವಾಲಾ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ನಿಟ್ಟಿನಲ್ಲಿ 42ರ ಹರೆಯದ ಜರಿವಾಲಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆಕೆಯ ಸಾವಿಗೆ ಕಾರಣದ ಬಗ್ಗೆ ಅಭಿಪ್ರಾಯವನ್ನು ಕಾಯ್ದಿರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ಸಾವಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದ್ದರಿಂದ, ಮುಂಬೈ ಪೊಲೀಸರು ಅಪಘಾತ ಸಾವಿನ ವರದಿ (ಎಡಿಆರ್) ದಾಖಲಿಸಿದ್ದಾರೆ. ಆಕೆಯ ಸಾವಿನ ಬಗ್ಗೆ ಪೊಲೀಸರು ಬೆಳಿಗ್ಗೆ 1 ಗಂಟೆಗೆ (ಶನಿವಾರ) ಮಾಹಿತಿ ಪಡೆದಿದ್ದರು. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಕಳುಹಿಸಲಾಯಿತು. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಆದರೆ ಸಾವಿನ ಕಾರಣದ ಬಗ್ಗೆ ಅಭಿಪ್ರಾಯವನ್ನು ಕಾಯ್ದಿರಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಇದು ಸಹಜ ಸಾವು ಎಂದು ತೋರುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಜರಿವಾಲಾ ಅವರನ್ನು ಶುಕ್ರವಾರ ರಾತ್ರಿ ಅವರ ಪತಿ, ನಟ ಪರಾಗ್ ತ್ಯಾಗಿ ಮುಂಬೈನ ಉಪನಗರದಲ್ಲಿರುವ ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಂದು ರಾತ್ರಿ 11:15 ರ ಸುಮಾರಿಗೆ ಆಸ್ಪತ್ರೆಗೆ ಕರೆತರಲಾಯಿತು. ಅಷ್ಟರಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಆಕೆಯ ಸಾವಿನ ಬಗ್ಗೆ ಮಾಹಿತಿ ನೀಡಿದ ನಂತರ, ಸಂಚಾರಿ ಫೋರೆನ್ಸಿಕ್ ಘಟಕ ಮತ್ತು ಪೊಲೀಸ್ ತಂಡ ಗೋಲ್ಡನ್ ರೇಸ್-ವೈ ಕಟ್ಟಡದಲ್ಲಿರುವ ನಟನ ಅಪಾರ್ಟ್ಮೆಂಟ್ ಗೆ ತೆರಳಿ ಪರಿಶೀಲನೆ ನಡೆಸಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement