
ಬಾರಾಮುಲ್ಲಾ: ಡಿಜಿಟಲ್ ಪೋಲೀಸಿಂಗ್‌ನ ಮಹತ್ವದ ಹೆಜ್ಜೆಯಾಗಿ, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪಟ್ಟಾನ್ ಪೊಲೀಸ್ ಠಾಣೆಯು ಫೆಬ್ರುವರಿ 28 ರಂದು ವಾಟ್ಸಾಪ್ ಮೂಲಕ ಸಲ್ಲಿಸಿದ ದೂರಿನ ನಂತರ ತನ್ನ ಮೊದಲ ಎಲೆಕ್ಟ್ರಾನಿಕ್ ಪ್ರಥಮ ಮಾಹಿತಿ ವರದಿಯನ್ನು (ಇ-ಎಫ್‌ಐಆರ್) ದಾಖಲಿಸಿದೆ ಎಂದು ಬಾರಾಮುಲ್ಲಾ ಪೊಲೀಸರು ತಿಳಿಸಿದ್ದಾರೆ.
ತೋಟಗಾರಿಕಾ ಇಲಾಖೆಯ ಸರ್ಕಾರಿ ನೌಕರರಾಗಿರುವ ಶ್ರೀನಗರದ ಬೆಮಿನಾ ನಿವಾಸಿಯೊಬ್ಬರು ವಾಟ್ಸಾಪ್ ಮೂಲಕ ಅದೇ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಶಕೀಲ್ ಉರ್ ರೆಹಮಾನ್ ಎಂಬುವವರ ವಿರುದ್ಧ ವಾಟ್ಸಾಪ್ ಮೂಲಕ ದೂರು ದಾಖಲಿಸಿದ್ದಾರೆ.
ದೂರುದಾರರು ಲೈಂಗಿಕ ಕಿರುಕುಳ, ಅತ್ಯಾಚಾರ ಯತ್ನ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪ ಹೊರಿಸಿದ್ದಾರೆ.
ದೂರನ್ನು ಪರಿಶೀಲಿಸಿದ ನಂತರ, ಸಂಬಂಧಿತ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣದಲ್ಲಿ ಇ-ಎಫ್‌ಐಆರ್ ದಾಖಲಿಸಿದ್ದಾರೆ.
ಸದ್ಯ ಈ ಸಂಬಂಧ ತನಿಖೆ ನಡೆಯುತ್ತಿದೆ.
Advertisement