ರೋಹಿತ್ ಶರ್ಮಾಗೂ ಮುನ್ನ ವಿರಾಟ್ ಕೊಹ್ಲಿ ಕುರಿತು ಟೀಕೆ; ಕಾಂಗ್ರೆಸ್ ನಾಯಕಿಯ ಹಳೆಯ ಪೋಸ್ಟ್ ವೈರಲ್

2018 ರಲ್ಲಿ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಶಮಾ ಮೊಹಮ್ಮದ್ ಆಗಿನ ಭಾರತದ ನಾಯಕ ವಿರಾಟ್ ಕೊಹ್ಲಿ ಅವರಿಗೆ 'ಇಂಗ್ಲಿಷ್ ಮತ್ತು ಆಸ್ಟ್ರೇಲಿಯನ್ ಬ್ಯಾಟ್ಸ್‌ಮನ್‌ಗಳಿಗೆ ಆದ್ಯತೆ ನೀಡುವವರು ಭಾರತದಲ್ಲಿ ವಾಸಿಸಬಾರದು' ಎಂದು ಟೀಕಿಸಿದ್ದರು.
ಶಮಾ ಮೊಹಮ್ಮದ್ - ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ
ಶಮಾ ಮೊಹಮ್ಮದ್ - ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ
Updated on

ನವದೆಹಲಿ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿರುದ್ಧದ ಟೀಕೆಗಳ ನಡುವೆಯೇ ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಅವರು ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕುರಿತು ಮಾಡಿದ್ದ ಸಾಮಾಜಿಕ ಮಾಧ್ಯಮದ ಹಳೆಯ ಪೋಸ್ಟ್ ಮತ್ತೆ ವೈರಲ್ ಆಗಿದೆ.

2018 ರಲ್ಲಿ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಶಮಾ ಮೊಹಮ್ಮದ್ ಆಗಿನ ಭಾರತದ ನಾಯಕ ವಿರಾಟ್ ಕೊಹ್ಲಿ ಅವರಿಗೆ 'ಇಂಗ್ಲಿಷ್ ಮತ್ತು ಆಸ್ಟ್ರೇಲಿಯನ್ ಬ್ಯಾಟ್ಸ್‌ಮನ್‌ಗಳಿಗೆ ಆದ್ಯತೆ ನೀಡುವವರು ಭಾರತದಲ್ಲಿ ವಾಸಿಸಬಾರದು' ಎಂದು ಟೀಕಿಸಿದ್ದರು.

2018ರ ನವೆಂಬರ್‌ನಲ್ಲಿ ಅಭಿಮಾನಿಯೊಬ್ಬರು ವಿರಾಟ್ ಕೊಹ್ಲಿ ಅವರಿಗೆ ಸಂದೇಶ ಕಳುಹಿಸಿದ್ದರು. ಅದರಲ್ಲಿ 'ನಾನು ಭಾರತೀಯ ಬ್ಯಾಟ್ಸ್‌ಮನ್‌ಗಳಿಗಿಂತ ಇಂಗ್ಲಿಷ್ ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳನ್ನು ನೋಡುವುದನ್ನು ಹೆಚ್ಚು ಆನಂದಿಸುತ್ತೇನೆ' ಎಂದು ಬರೆದಿದ್ದರು. ಅಲ್ಲದೆ, ಕೊಹ್ಲಿಯನ್ನು 'ಓವರ್-ರೇಟ್ ಬ್ಯಾಟ್ಸ್‌ಮನ್' ಎಂದು ಟೀಕಿಸಿದ್ದರು. ಇದಕ್ಕೆ ವಿರಾಟ್ ಕೊಹ್ಲಿ ಸಾರ್ವಜನಿಕವಾಗಿಯೇ ಪ್ರತಿಕ್ರಿಯಿಸಿದ್ದರು. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

'ನೀವು ಭಾರತದಲ್ಲಿ ವಾಸಿಸಬೇಕು ಎಂದು ನಾನು ಭಾವಿಸುವುದಿಲ್ಲ. ಬದಲಿಗೆ ನೀವು ಬೇರೆಡೆಗೆ ಹೋಗಬಹುದು. ವಿದೇಶಿ ಆಟಗಾರರನ್ನು ಇಷ್ಟಪಡುವ ನೀವು ಭಾರತದಲ್ಲಿ ವಾಸಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ನೀವು ನನ್ನನ್ನು ಇಷ್ಟಪಡದಿರುವುದರ ಬಗ್ಗೆ ನನಗೆ ಅಭ್ಯಂತರವಿಲ್ಲ. ಆದರೆ, ನಿಮ್ಮ ಆದ್ಯತೆಗಳನ್ನು ಸರಿಯಾಗಿ ರೂಪಿಸಿಕೊಳ್ಳಿ. ಭಾರತೀಯ ಆಟಗಾರರಿಗಿಂತ ವಿದೇಶಿ ಆಟಗಾರರಿಗೆ ಆದ್ಯತೆ ನೀಡುವುದು ತಪ್ಪು' ಎಂದು ಹೇಳಿದ್ದರು.

ಶಮಾ ಮೊಹಮ್ಮದ್ - ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ ಟೀಕಿಸುವ ಪೋಸ್ಟ್ ಅಳಿಸಲು ವಕ್ತಾರೆ ಶಮಾ ಮೊಹಮ್ಮದ್‌ಗೆ ಸೂಚನೆ; ಎಚ್ಚರಿಕೆ ನೀಡಿದ ಕಾಂಗ್ರೆಸ್!

ಕೊಹ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್, 'ವಿರಾಟ್ ಕೊಹ್ಲಿ ಬ್ರಿಟಿಷರು ಕಂಡುಹಿಡಿದ ಆಟವನ್ನು ಆಡುತ್ತಾರೆ, ವಿದೇಶಿ ಬ್ರ್ಯಾಂಡ್‌ಗಳನ್ನು ಅನುಮೋದಿಸಿ ನೂರಾರು ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ, ಇಟಲಿಯಲ್ಲಿ ವಿವಾಹವಾದರು, ಹರ್ಷಲ್ ಗಿಬ್ಸ್ ಅವರ ನೆಚ್ಚಿನ ಕ್ರಿಕೆಟಿಗ ಮತ್ತು ಏಂಜೆಲಿಕ್ ಕೆರ್ಬರ್ ಅವರನ್ನು ಅತ್ಯುತ್ತಮ ಟೆನಿಸ್ ಆಟಗಾರ್ತಿ ಎಂದು ಹೇಳಿದ್ದಾರೆ. ಆದರೆ, ವಿದೇಶಿ ಬ್ಯಾಟ್ಸ್‌ಮನ್‌ಗಳನ್ನು ಪ್ರೀತಿಸುವವರಿಗೆ ಭಾರತವನ್ನು ತೊರೆಯಲು ಹೇಳುತ್ತಾರೆ' ಎಂದು ತಿರುಗೇಟು ನೀಡಿದ್ದರು.

ಅಂದು ಶಮಾ ಮಾಡಿದ್ದ ಪೋಸ್ಟ್ ಇದೀಗ ವೈರಲ್ ಆಗಿದೆ. ಅನೇಕ ಬಳಕೆದಾರರು 'ಶಮಾ ಅವರಿಗೆ ಪ್ರತಿಯೊಬ್ಬ ಭಾರತೀಯ ಆಟಗಾರರೊಂದಿಗೂ ಸಮಸ್ಯೆ ಇದ್ದಂತೆ ತೋರುತ್ತಿದೆ' ಎಂದಿದ್ದಾರೆ.

'ಅವರು (ವಿರಾಟ್ ಕೊಹ್ಲಿ) ದೇಶಕ್ಕಾಗಿ ತುಂಬಾ ಮಾಡಿದ್ದಾರೆ' ಎಂದು ಮತ್ತೋರ್ವ ಬಳಕೆದಾರರು ಸೋಮವಾರ ಕಮೆಂಟ್ ಮಾಡಿದ್ದಾರೆ. 'ಇದು ಯಾರಿಗೋ ಒಬ್ಬರಿಗೆ ಸೀಮಿತವಾಗಿಲ್ಲ; ಬದಲಿಗೆ ಆಕೆ ಎಲ್ಲರನ್ನೂ ದ್ವೇಷಿಸುತ್ತಾರೆ' ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು.

ವಿರಾಟ್ ಕೊಹ್ಲಿ ಕುರಿತು ಶಮಾ ಮೊಹಮ್ಮದ್ ಮಾಡಿದ್ದ ಟ್ವೀಟ್
ವಿರಾಟ್ ಕೊಹ್ಲಿ ಕುರಿತು ಶಮಾ ಮೊಹಮ್ಮದ್ ಮಾಡಿದ್ದ ಟ್ವೀಟ್

'ಕ್ರೀಡಾಪಟುವಾಗಿ ರೋಹಿತ್ ಶರ್ಮಾ ಅವರ ದೇಹತೂಕ ಹೆಚ್ಚಾಗಿದೆ. ಅವರು ತೂಕವನ್ನು ಇಳಿಸಬೇಕಾಗಿದೆ ಮತ್ತು ಸಹಜವಾಗಿ ಅವರು ಭಾರತ ಕಂಡ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ!' ಎಂದು ವಕ್ತಾರೆ ಶಮಾ ಮೊಹಮ್ಮದ್ ಬರೆದಿದ್ದರು.

ಮತ್ತೊಂದು ಪೋಸ್ಟ್‌ನಲ್ಲಿ ಶಮಾ, 'ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ಕಪಿಲ್ ದೇವ್, ರವಿಶಾಸ್ತ್ರಿ ಮತ್ತು ಉಳಿದ ನಾಯಕರಿಗೆ ಹೋಲಿಸಿದರೆ ರೋಹಿತ್ ಶರ್ಮಾ ಅವರಲ್ಲಿ ಇರುವ ವಿಶೇಷ ಗುಣ ಯಾವುದು? ಎಂದು ಪ್ರಶ್ನಿಸಿದ್ದರು. ಇದು ಬಿಜೆಪಿ ನಾಯಕರು ಸೇರಿದಂತೆ ಎಲ್ಲೆಡೆ ಟೀಕೆಗೆ ಗುರಿಯಾಗಿತ್ತು.

ಕ್ರಿಕೆಟ್ ದಂತಕಥೆಯ ರೋಹಿತ್ ಶರ್ಮಾ ಬಗ್ಗೆ ಶಮಾ ಮೊಹಮ್ಮದ್ ಅವರ ಹೇಳಿಕೆಗಳು ವೈಯಕ್ತಿಕವಾಗಿದ್ದು, ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com