ಸನಾತನ ಧರ್ಮ ನಿರ್ಮೂಲನೆ ಹೇಳಿಕೆ: ಉದಯ ನಿಧಿ ವಿರುದ್ಧ ಹೊಸ FIR ದಾಖಲು ಬೇಡ- ಸುಪ್ರೀಂ ಕೋರ್ಟ್

ಸನಾತನ ಧರ್ಮ ನಿರ್ಮೂಲನೆ ಕುರಿತು ಉದಯ ನಿಧಿ ಸ್ಟಾಲಿನ್ 2023ರಲ್ಲಿ ನೀಡಿದ್ದ ಹೇಳಿಕೆಗೆ ತನ್ನ ಅನುಮತಿ ಇಲ್ಲದೆ ಹೊಸದಾಗಿ ಎಫ್ ಐಆರ್ ದಾಖಲಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Supreme Court, Udhayanidhi Stalin
ಸುಪ್ರೀಂಕೋರ್ಟ್, ಉದಯನಿಧಿ ಸ್ಟಾಲಿನ್ ಸಾಂದರ್ಭಿಕ ಚಿತ್ರ
Updated on

ನವದೆಹಲಿ: ತಮಿಳುನಾಡು ಉಪಮುಖ್ಯಮಂತ್ರಿ ಎಂ.ಉದಯನಿಧಿ ಸ್ಟಾಲಿನ್ ಅವರಿಗೆ ಸುಪ್ರೀಂಕೋರ್ಟ್ ಗುರುವಾರ ಬಿಗ್ ರಿಲೀಫ್ ನೀಡಿದೆ. ‘ಸನಾತನ ಧರ್ಮ ನಿರ್ಮೂಲನೆ’ಹೇಳಿಕೆಗಾಗಿ ಯಾವುದೇ ಹೊಸ FIR ದಾಖಲಿಸಬಾರದು ಎಂದು ಆದೇಶಿಸಿದೆ.

ಸನಾತನ ಧರ್ಮ ನಿರ್ಮೂಲನೆ ಕುರಿತು ಉದಯ ನಿಧಿ ಸ್ಟಾಲಿನ್ 2023ರಲ್ಲಿ ನೀಡಿದ್ದ ಹೇಳಿಕೆಗೆ ತನ್ನ ಅನುಮತಿ ಇಲ್ಲದೆ ಹೊಸದಾಗಿ ಎಫ್ ಐಆರ್ ದಾಖಲಿಸಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಎಫ್‌ಐಆರ್‌ಗಳನ್ನು ವಿಚಾರಣೆ ಮಾಡುವ ನ್ಯಾಯಾಲಯಗಳಲ್ಲಿ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡುವ ಮಧ್ಯಂತರ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ವಿಸ್ತರಿಸಿದೆ.

ಸ್ಟಾಲಿನ್ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಮಹಾರಾಷ್ಟ್ರ ಅಲ್ಲದೇ ಪಾಟ್ನಾ, ಜಮ್ಮು, ಬೆಂಗಳೂರಿನಲ್ಲಿ ಎಫ್ ಐಆರ್ ದಾಖಲಾಗಿದ್ದು, ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿರುವ ತಮಿಳುನಾಡಿಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿದರು.

ಮಹಾರಾಷ್ಟ್ರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸನಾತನ ಧರ್ಮ ನಿರ್ಮೂಲನೆ ಸಮ್ಮೇಳನದಲ್ಲಿ ಮಲೇರಿಯಾ, ಕೊರೊನಾ, ಢೆಂಗೀ ತರಹ ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದು ಉದಯ ನಿಧಿ ಸ್ಟಾಲಿನ್ ಹೇಳಿದ್ದಾರೆ. ಬೇರೊಂದು ರಾಜ್ಯದ ಮುಖ್ಯಮಂತ್ರಿಗಳು, ಬೇರೊಂದು ಧರ್ಮದ ಬಗ್ಗೆಗಿನ ಇಂತಹ ಹೇಳಿಕೆಯನ್ನು ಶ್ಲಾಘಿಸುವರೇ, ಇಸ್ಲಾಂ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳುವರೇ, ಇದು ಸಹಿಸಲಾಗದು ಎಂದರು.

Supreme Court, Udhayanidhi Stalin
ಸನಾತನ ಧರ್ಮ ಕುರಿತ ಹೇಳಿಕೆ: ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ; ನ್ಯಾಯಾಲಯ ಸೂಚನೆ

ತುಷಾರ್ ಮೆಹ್ತಾ ವಾದಕ್ಕೆ ಸಿಂಘ್ವಿ ಆಕ್ಷೇಪ ವ್ಯಕ್ತಪಡಿಸಿದರು. ಅಂತಿಮವಾಗಿ ವಾದ- ವಿವಾದ ಆಲಿಸಿದ ನ್ಯಾಯಪೀಠ, ತನ್ನ ಅನುಮತಿ ಇಲ್ಲದೆ ಹೊಸದಾಗಿ ಎಫ್ ಐಆರ್ ದಾಖಲಿಸಬಾರದು ಎಂದು ತೀರ್ಪು ನೀಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com