
ಮುಂಬೈ: ಮಗಳ ಹೋಳಿ ಆಚರಣೆಯನ್ನು ಟೀಕಿಸಿದ ಮೌಲಾನಾಗೆ ಕ್ರಿಕೆಟಿಗ ಮಹಮದ್ ಶಮಿ (Mohammed Shami) ಖಡಕ್ ತಿರುಗೇಟು ನೀಡಿದ್ದು, ಮಕ್ಕಳ ಹೋಳಿ ಆಚರಣೆ ಪ್ರಶ್ನೆ ಮಾಡೋ ನೀವು ಮಹಿಳೆಯರ ಮೇಲೆ ಅತ್ಯಾಚಾರವಾದಾಗ ಎಲ್ಲಿಗೆ ಹೋಗಿರ್ತೀರಾ ಎಂದು ಪ್ರಶ್ನಿಸಿದ್ದಾರೆ.
ಹೌದು.. ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ರಂಜಾನ್ ಉಪವಾಸ ಆಚರಿಸಲಿಲ್ಲ ಎಂದು ಕ್ರಿಕೆಟಿಗ ಮಹಮದ್ ಶಮಿ ವಿರುದ್ಧ ಕೆಲ ಧಾರ್ಮಿಕ ಮುಖಂಡರು ಕಿಡಿಕಾರಿದ್ದರು. ಇದೀಗ ಇದೇ ಶಮಿ ಅವರ ಪುತ್ರಿ ಹೋಳಿ ಆಚರಣೆಯಲ್ಲಿ ಪಾಲ್ಗೊಂಡ ಕಾರಣಕ್ಕೆ ಮತ್ತೆ ಟೀಕಾಪ್ರಹಾರ ನಡೆಸಿದ್ದು, ಮೊಹಮ್ಮದ್ ಶಮಿ ಅವರ ಮಗಳು ಆಯಿರಾ ರಂಜಾನ್ ತಿಂಗಳಲ್ಲಿ ಹೋಳಿ ಆಡುವುದನ್ನು ಮೌಲಾನಾ ಟೀಕಿಸಿದ್ದಾರೆ.
ಇದು ಅಪರಾಧ ಎಂದು ಹೇಳಿರುವ ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ, '"ಅವಳು ಚಿಕ್ಕ ಹುಡುಗಿ ... ಅವಳು ಅರ್ಥಮಾಡಿಕೊಳ್ಳದೆ ಹೋಳಿ ಆಡಿದರೆ, ಅದು ಅಪರಾಧವಲ್ಲ. ಆಕೆಯ ಪೋಷಕರಿಗೆ ಬುದ್ದಿ ಇರಬೇಕಿತ್ತು. ಆಕೆ ವಿವೇಕಿಯಾಗಿ ಹೋಳಿ ಆಚರಣೆ ಮಾಡಿದ್ದರೆ ಅದು ಷರಿಯಾ ಪ್ರಕಾರ ಅದನ್ನು ಧರ್ಮ ವಿರೋಧಿ ನಡೆ ಎಂದು ಪರಿಗಣಿಸಲಾಗುತ್ತದೆ ಎಂದು ಟೀಕಿಸಿದ್ದರು.
ಶಮಿ ಮಾಜಿ ಪತ್ನಿ ತೀವ್ರ ತರಾಟೆ!
ಮೌಲಾನಾ ಟೀಕೆ ವ್ಯಾಪಕ ಸುದ್ದಿಯಾಗುತ್ತಲೇ ಇದೀಗ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹಮದ್ ಶಮಿ ಮಾಜಿ ಪತ್ನಿ ಹಸಿನ್ ಜಹಾನ್ ಮೌಲಾನರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಮಕ್ಕಳ ಹೋಳಿ ಆಚರಣೆಯನ್ನು ಟೀಕಿಸುವ ಮೌಲಾನಾಗಳು ಇದೇ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರವಾದಾಗ ಎಲ್ಲಿಗೆ ಹೋಗಿರುತ್ತಾರೆ. ಆ ಬಗ್ಗೆ ಒಂದೇ ಒಂದು ಮಾತನ್ನೂ ಆಡುವುದಿಲ್ಲ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಅಂದಹಾಗೆ ಶಮಿ ಪುತ್ರಿ ಆಯಿರಾ ಮಾತ್ರವಲ್ಲದೇ ಶಮಿ ಮಾಜಿ ಪತ್ನಿ ಹಸೀನ್ ಜಹಾನ್ ಕೂಡ ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
Advertisement