'ಬ್ಲೂ ಫಿಲಂ ನೋಡ್ತಾಳೆ, ಹಸ್ತ ಮೈಥುನ ಚಟ ಇದೆ ಅಂತ ವಿಚ್ಛೇದನ ಕೊಡೋಕೆ ಆಗಲ್ಲ': Madras High Court

ಮದುವೆಯಾದ ಮಹಿಳೆ ಅಶ್ಲೀಲ ವಿಡಿಯೋ ನೋಡೋದು ಅಥವಾ ತನಗೆ ತಾನೇ ಖುಷಿಪಡಿಸಿಕೊಳ್ಳುವಂಥ ಹಸ್ತಮೈಥುನದಲ್ಲಿ ತೊಡಗಿಕೊಳ್ಳುವುದು ಗಂಡನ ಮೇಲಿನ ಕ್ರೌರ್ಯವಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ.
Madras HC
ಮದ್ರಾಸ್ ಹೈಕೋರ್ಟ್
Updated on

ಚೆನ್ನೈ: ಮದುವೆಯಾದ ಮಹಿಳೆ ಬ್ಲೂ ಫಿಲಂ ನೋಡ್ತಾಳೆ.. ಹಸ್ತ ಮೈಥುನ ಚಟ ಇದೆ ಅಂತ ವಿಚ್ಚೇದನ ಕೊಡೋಕೆ ಆಗಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.

ಹೌದು.. ಮದುವೆಯಾದ ಮಹಿಳೆ ಅಶ್ಲೀಲ ವಿಡಿಯೋ ನೋಡೋದು ಅಥವಾ ತನಗೆ ತಾನೇ ಖುಷಿಪಡಿಸಿಕೊಳ್ಳುವಂಥ ಹಸ್ತಮೈಥುನದಲ್ಲಿ ತೊಡಗಿಕೊಳ್ಳುವುದು ಗಂಡನ ಮೇಲಿನ ಕ್ರೌರ್ಯವಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ಜಸ್ಟೀಸ್ ಆರ್. ಪೂರ್ಣಿಮಾ ಅವರಿದ್ದ ಪೀಠ, ಗಂಡ-ಹೆಂಡತಿ ಸಂಬಂಧದಲ್ಲಿ ಇಂಥ ಕೆಲಸಗಳು ತೊಂದರೆ ತರುತ್ತದೆ ಎಂದು ಸಾಬೀತು ಮಾಡಲು ಸಾಧ್ಯವಿಲ್ಲ. ಇಂಥ ವರ್ತನೆಯನ್ನು ಗಂಡನ ಮೇಲೆ ಮಾಡೋ ಕ್ರೌರ್ಯ ಎಂದೂ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

Madras HC
'ಸ್ತನಗಳ ಹಿಡಿಯುವುದು, ಪ್ಯಾಂಟ್ ಎಳೆಯುವುದು ಅತ್ಯಾಚಾರ ಯತ್ನವಲ್ಲ': Allahabad High Court

ಏನಿದು ಪ್ರಕರಣ?

2018 ಜುಲೈ 11ಕ್ಕೆ ಮದುವೆ ಆಗಿದ್ದ ತಮಿಳುನಾಡಿನ ಕರೂರು ಮೂಲದ ಗಂಡ ಹೆಂಡತಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. 2020 ಡಿಸೆಂಬರ್ 9 ರಿಂದ ಇಬ್ಬರೂ ಬೇರೆ ಬೇರೆ ಇದ್ದೇವೆ. ತನ್ನ ಮದುವೆ ರದ್ದು ಮಾಡಲು ಕೌಟುಂಬಿಕ ಕೋರ್ಟ್ ಸಮ್ಮತಿ ನೀಡಲಿಲ್ಲ. ಹೀಗಾಗಿ ಗಂಡ ಹೈಕೋರ್ಟ್‌ ಮೆಟ್ಟಿಲೇರಿದ್ದ.

ಈ ವೇಳೆ ಗಂಡನ ಪರ ವಕೀಲರು ವಾದ ಮಾಡಿ, ಅವರ ನಡುವಿನ ಸಂಬಂಧ ಸರಿಪಡಿಸೋಕೆ ಆಗದಷ್ಟು ಹಾಳಾಗಿದೆ . ಉಪಯೋಗ ಇಲ್ಲದ ಸಂಬಂಧ ಮುಂದುವರೆಸೋಕೆ ಅರ್ಥ ಇಲ್ಲ ಎಂದು ವಾದಿಸಿದ್ದರು. ಮಾತ್ರವಲ್ಲದೇ ಹೆಂಡತಿಗೆ ಲೈಂಗಿಕ ರೋಗ ಇದೆ. ಹಸ್ತು ಮೈಥುನ ಚಟ ಮತ್ತು ಬ್ಲೂಫಿಲಂ ನೋಡುವ ಅಭ್ಯಾಸ ಇದೆ ಎಂದು ಆರೋಪ ಮಾಡಿದ್ದರು. ಆದರೆ, ಇದಕ್ಕೆ ಸರಿಯಾದ ದಾಖಲೆ ನೀಡಲು ವಿಫಲವಾಗಿದ್ದರು.

ಇದರ ವಿಚಾರಣೆ ನಡೆಸಿದ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠ, ಅಶ್ಲೀಲ ಚಿತ್ರ ನೋಡಲು ಇಷ್ಟವಿಲ್ಲ ಎಂದ ಗಂಡನನ್ನು, ಇಂಥ ಸಿನಿಮಾ ನೋಡುವಂತೆ ಹೆಂಡತಿ ಬಲವಂತ ಮಾಡಿದರೆ ಮಾತ್ರವೇ ಇದು ಕ್ರೌರ್ಯ ಎನಿಸಿಕೊಳ್ಳಲಿದೆ ಎಂದು ಹೇಳಿದೆ.

Madras HC
Religious Conversion: ಮತಾಂತರ ತಡೆಯದಿದ್ದರೆ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ- Allahabad High Court

'ಖಾಸಗಿತನ ಅನ್ನೋದು ಒಬ್ಬೊಬ್ಬರ ಮೂಲಭೂತ ಹಕ್ಕು. ಗಂಡಸರು ತಮಗೆ ತಾವೇ ಖುಷಿ ಪಡೋದು ಜಗತ್ತಿನಲ್ಲಿ ಒಪ್ಪಿಕೊಳ್ಳುವ ವಿಷಯವಾಗಿ ನೋಡುತ್ತಾರೆ. ಇದೇ ಕೆಲಸವನ್ನು ಮಹಿಳೆ ಮಾಡಿದರೆ ಅದನ್ನು ತಪ್ಪು ಅಂತಾ ನೋಡುವುದು ಸರಿಯಲ್ಲ. ಹಾಗಾಗಿ ಅಶ್ಲೀಲ ವಿಡಿಯೋ ನೋಡೋದು ಹಿಂದು ಮದುವೆ ಕಾನೂನಿನ 13(1)ಗೆ ಅನ್ವಯ ತಪ್ಪು ಎಂದು ಸಾಬೀತು ಮಾಡಲು ಆಗುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಹೆಂಡತಿ ತನ್ನ ಗಂಡನ ಜೊತೆ ಸಂಸಾರ ಮಾಡೋಕೆ ವಾಪಸ್ ಬರಬೇಕು ಅನ್ನೋ ಅರ್ಜಿನೂ ಕೋರ್ಟ್ ವಿಚಾರಣೆ ಮಾಡಿತು. "ಮದುವೆಯಾದ ನಂತರ ಮಹಿಳೆ ವಿವಾಹೇತರ ಸಂಬಂಧ ಹೊಂದಿದ್ದರೆ, ಅದು ವಿಚ್ಛೇದನಕ್ಕೆ ಕಾರಣವಾಗುತ್ತದೆ. ಆದಾಗ್ಯೂ, 'ಲೈಂಗಿಕ ಸ್ವಾಯತ್ತತೆ'ಯಲ್ಲಿ ತೊಡಗಿಕೊಳ್ಳುವುದು ವಿಚ್ಚೇದನಕ್ಕೆ ಕಾರಣವಾಗುವುದಿಲ್ಲ. ಯಾವುದೇ ಕಲ್ಪನೆಯಿಂದ ನೋಡಿದರೂ, ಅದು ಗಂಡನ ಮೇಲೆ ಕ್ರೌರ್ಯವನ್ನು ಉಂಟುಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ" ಎಂದು ಹೈಕೋರ್ಟ್ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com