ಸಾಂದರ್ಭಿಕ ಚಿತ್ರ
ದೇಶ
ಬ್ಯಾಂಕಾಕ್‌ನಲ್ಲಿ ಪ್ರಬಲ ಭೂಕಂಪ: ಕೋಲ್ಕತ್ತಾ, ಇಂಫಾಲ್‌ನಲ್ಲೂ ಕಂಪಿಸಿದ ಭೂಮಿ
ಅಧಿಕೃತ ಮೂಲಗಳ ಪ್ರಕಾರ, ಭೂಕಂಪದಿಂದಾಗಿ ನಗರದಲ್ಲಿ ಯಾವುದೇ ಆಸ್ತಿಪಾಸ್ತಿ ಹಾನಿ ಅಥವಾ ಜೀವಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಕೋಲ್ಕತ್ತಾ: ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಶುಕ್ರವಾರ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ನಂತರ ಕೋಲ್ಕತ್ತಾ ಮತ್ತು ಇಂಫಾಲ್‌ನಲ್ಲೂ ಲಘು ಕಂಪನದ ಅನುಭವವಾಗಿದೆ.
ಮೋನಿವಾ ನಗರದಿಂದ ಪೂರ್ವಕ್ಕೆ ಸುಮಾರು 50 ಕಿ.ಮೀ ದೂರದಲ್ಲಿರುವ ಮಧ್ಯ ಮ್ಯಾನ್ಮಾರ್‌ನಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.
ಭೂಕಂಪದ ಸಮಯದಲ್ಲಿ ಕೋಲ್ಕತ್ತಾ ಮತ್ತು ಪಕ್ಕದ ಪ್ರದೇಶಗಳ ನಿವಾಸಿಗಳಿಗೂ ಭೂಮಿ ಕಂಪಿಸಿದ ಅನುಭವವಾಗಿದೆ ಮತ್ತು ಗೋಡೆಗೆ ನೇತಾಕಿದ್ದ ವಸ್ತುಗಳು ತೂಗಾಡುತ್ತಿರುವುದನ್ನು ಗಮನಿಸಿದ್ದಾರೆ ಎಂದು ವರದಿಯಾಗಿದೆ.
ಅಧಿಕೃತ ಮೂಲಗಳ ಪ್ರಕಾರ, ಭೂಕಂಪದಿಂದಾಗಿ ನಗರದಲ್ಲಿ ಯಾವುದೇ ಆಸ್ತಿಪಾಸ್ತಿ ಹಾನಿ ಅಥವಾ ಜೀವಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಮಣಿಪುರದಲ್ಲಿ, ಇಂಫಾಲ್‌ನ ತಂಗಲ್ ಬಜಾರ್ ನಿವಾಸಿಗಳಿಗೆ ಈ ಕಂಪನವು ಭೀತಿಯನ್ನುಂಟುಮಾಡಿದೆ. ಇಲ್ಲಿ ಅನೇಕ ಹಳೆಯ ಬಹುಮಹಡಿ ಕಟ್ಟಡಗಳಿವೆ.
ಆದಾಗ್ಯೂ, ಇಲ್ಲಿಯವರೆಗೆ ಯಾವುದೇ ಆಸ್ತಿ ಹಾನಿ ಅಥವಾ ಜೀವ ಹಾನಿ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.