
ಲಖನೌ: ಬಾಲಿವುಡ್ ನಲ್ಲಿ ವ್ಯಾಪರ ಸುದ್ಗಿಗೆ ಗ್ರಾಸವಾಗಿರುವ Porn Film (ಅಶ್ಲೀಲ ಚಿತ್ರ ತಯಾರಿಕೆ) ಜಾಲ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಈ ಬಾರಿ ದಂಪತಿಗಳು ನಡೆಸುತ್ತಿದ್ದ ಬಹುದೊಡ್ಡ Porn Film ತಯಾರಿಕಾ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಹೌದು.. ವಿದೇಶಿ ಹಣಕಾಸು, ವಯಸ್ಕರ ಮನರಂಜನೆ - ಪ್ರಮುಖ ಆನ್‌ಲೈನ್ ಅಶ್ಲೀಲ ಜಾಲವನ್ನು ಭೇದಿಸಲಾಗಿದ್ದು, ಅಂತರರಾಷ್ಟ್ರೀಯ ಗಡಿಗಳನ್ನು ಮೀರಿ ವ್ಯಾಪಿಸಿರುವ ಅಕ್ರಮ ಜಾಲವನ್ನು ಪತ್ತೆಹಚ್ಚಲಾಗಿದೆ.
ಉತ್ತರ ಪ್ರದೇಶದ NOIDA (New Okhla Industrial Development Authority) ದಲ್ಲಿ ಈ ಬೃಹತ್ ಅಶ್ಲೀಲ ಚಿತ್ರ ತಯಾರಿಕಾ ಜಾಲವನ್ನು ಪೊಲೀಸರು ಭೇದಿಸಿದ್ದು, ಈ ಜಾಲ ಎಷ್ಟು ವಿಸ್ತರಿಸಿತ್ತು ಎಂದರೆ ವಿದೇಶದಿಂದ ಈ ಜಾಲಕ್ಕೆ ಆರ್ಥಿಕ ನೆರವು ಲಭಿಸುತ್ತಿತ್ತು ಎಂಬ ಆಘಾತಕಾರಿ ಅಂಶವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಭಾರತದ ದಂಪತಿಗಳು ನಡೆಸುತ್ತಿದ್ದ ಜಾಲ
ಇನ್ನು ಈ ಬೃಹತ್ ಪೋರ್ನ್ ಫಿಲ್ಮ್ ತಯಾರಿಕಾ ಜಾಲವನ್ನು ಭಾರತ ದಂಪತಿಗಳ ನಡೆಸುತ್ತಿದ್ದ ಆಘಾತಕಾರಿ ಮಾಹಿತಿ ಬಯಲಾಗಿದ್ದು, ನೋಯ್ಡಾ ಮೂಲದ ದಂಪತಿಗಳಾದ, ಉಜ್ವಲ್ ಕಿಶೋರ್ ಮತ್ತು ಅವರ ಪತ್ನಿ ನೀಲು ಶ್ರೀವಾಸ್ತವ ಈ ಜಾಲವನ್ನು ನಡೆಸುತ್ತಿದ್ದರು. ಈ ಜಾಲವು ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಬೃಹತ್ ವಿದೇಶಿ ನಿಧಿ ಕೂಡ ಈ ಜಾಲಕ್ಕೆ ದೊರೆಯುತ್ತಿತ್ತು ಎಂದು ತಿಳಿದುಬಂದಿದೆ.
ದಾಳಿ ಸಮಯದಲ್ಲೇ ಪೋರ್ನ್ ಫಿಲಂ ಲೈವ್ ಸ್ಟ್ರೀಮಿಂಗ್
ಇನ್ನು ಅಧಿಕಾರಿಗಳ ದಾಳಿ ಸಂದರ್ಭದಲ್ಲೇ ಇಲ್ಲಿ ಮೂವರು ಯುವತಿಯರನ್ನು ಬಳಸಿಕೊಂಡು ಪೋರ್ನ್ ಫಿಲಂ ಲೈವ್ ಸ್ಟ್ರೀಮಿಂಗ್ ನಡೆಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Xhamster, Stripchat ನಲ್ಲಿ ವಿಡಿಯೋ ಅಪ್ಲೋಡ್
ಮೂಲಗಳ ಪ್ರಕಾರ ಈ ದಂಪತಿಗಳು Xhamster ಮತ್ತು Stripchat ನಂತಹ ಜನಪ್ರಿಯ ವಯಸ್ಕ ಮನರಂಜನಾ ವೆಬ್‌ಸೈಟ್‌ಗಳಲ್ಲಿ ಖಾತೆ ತೆರೆದು ಅಲ್ಲಿ ತಾವು ತಯಾರಿಸುತ್ತಿದ್ದ ಪೋರ್ನ್ ಫಿಲಂ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದರು.
ಈ ಸಂಸ್ಥೆಗಳೊಂದಿಗೆ ಕಾರ್ಯ ನಿರ್ವಹಿಸಲು ಹೆಸರುವಾಸಿಯಾದ ಟೆಕ್ನಿಯಸ್ ಲಿಮಿಟೆಡ್ ಎಂಬ ಸೈಪ್ರಸ್ ಮೂಲದ ಕಂಪನಿಯೊಂದಿಗೆ ಈ ದಂಪತಿಗಳು ಸಂಬಂಧ ಹೊಂದಿದ್ದರು. ಬ್ಯಾಂಕ್ ವಹಿವಾಟುಗಳಲ್ಲಿ ಉದ್ದೇಶ ಕೋಡ್‌ಗಳನ್ನು ತಪ್ಪಾಗಿ ಪ್ರತಿನಿಧಿಸುವ ಮೂಲಕ, ಜಾಹೀರಾತು ಮತ್ತು ಮಾರುಕಟ್ಟೆ ಸಂಶೋಧನೆಗಾಗಿ ಪಾವತಿಗಳಾಗಿ ತಪ್ಪಾಗಿ ತೋರಿಸುವ ಮೂಲಕ ದಂಪತಿಗಳು ವಿದೇಶಿ ಕಂಪನಿಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಇಡಿ ದಾಳಿ
ಅತ್ತ ಪೊಲೀಸ್ ದಾಳಿ ಸಂದರ್ಭದಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಕೂಡ ನಡೆದಿದ್ದು, ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಂಪತಿಗಳ ನೋಯ್ಡಾ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ 15.66 ಕೋಟಿ ರೂಪಾಯಿಗಳ ಅಕ್ರಮ ವಿದೇಶಿ ನಿಧಿ ಪತ್ತೆಯಾಗಿದೆ. ಅಂತೆಯೇ ತನಿಖೆಯಲ್ಲಿ ಪ್ರಮುಖ ಆರೋಪಿ ಉಜ್ವಲ್ ಕಿಶೋರ್ ಭಾರತಕ್ಕೆ ಸ್ಥಳಾಂತರಗೊಳ್ಳುವ ಮೊದಲು ರಷ್ಯಾದಲ್ಲಿ ಇದೇ ರೀತಿಯ ಜಾಲದಲ್ಲಿ ಭಾಗಿಯಾಗಿದ್ದ ಮತ್ತು ಅವನ ಹೆಂಡತಿಯೊಂದಿಗೆ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದ ಎಂದು ತಿಳಿದುಬಂದಿದೆ.
ಮಾಡೆಲ್ ಗಳ ನೇಮಕಕ್ಕೆ ಸಾಮಾಜಿಕ ಜಾಲತಾಣ ಬಳಕೆ
ಇನ್ನು ಈ ಖತರ್ನಾಕ್ ದಂಪತಿಗಳು ತಮ್ಮ ಪೋರ್ನ್ ಚಿತ್ರ ತಯಾರಿಕೆಗಾಗಿ ಮಾಡೆಲ್ ಗಳ ನೇಮಕಕ್ಕೆ ಸಾಮಾಜಿಕ ಜಾಲತಾಣ ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ದಂಪತಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು, ಮುಖ್ಯವಾಗಿ ಫೇಸ್‌ಬುಕ್ ಅನ್ನು ಮಾಡೆಲ್‌ಗಳನ್ನು ನೇಮಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದರು.
ಅವರು 'ಎಚಾಟೊ ಡಾಟ್ ಕಾಮ್' ಎಂಬ ಖಾತೆ ತೆರೆದು ಇಲ್ಲಿ ಯುವತಿಯರಿಗೆ ಲಾಭದಾಯಕ ಸಂಬಳದ ಆಸೆ ತೋರಿಸಿ ಮಾಡೆಲಿಂಗ್ ಅವಕಾಶಗಳನ್ನು ನೀಡುತ್ತಿದ್ದರು ಎನ್ನಲಾಗಿದೆ. ದೆಹಲಿ-ಎನ್‌ಸಿಆರ್ ಪ್ರದೇಶದ ಅನೇಕ ಮಹಿಳೆಯರು ಈ ಜಾಹೀರಾತುಗಳ ಮೂಲಕ ಆಕರ್ಷಿತರಾಗಿ ಆಡಿಷನ್‌ಗಾಗಿ ದಂಪತಿಗಳ ನೋಯ್ಡಾದ ಫ್ಲಾಟ್‌ಗೆ ತಲುಪಿದಾಗ, ಅವರಿಗೆ ಅಶ್ಲೀಲ ಚಿತ್ರ ಜಾಲದಲ್ಲಿ ಭಾಗವಹಿಸುವ ಅವಕಾಶ ನೀಡಲಾಗುತ್ತಿತ್ತು. ಒಪ್ಪದವರಿಗೆ ತಿಂಗಳಿಗೆ 1 ರಿಂದ 2 ಲಕ್ಷ ರೂ.ಗಳವರೆಗೆ ಸಂಭಾವನೆ ನೀಡುವ ಆಸೆ ತೋರಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಯಸ್ಕ ಸಿನಿಮಾಗಳ ಸ್ಟ್ರೀಮಿಂಗ್
ಅಧಿಕಾರಿಗಳ ದಾಳಿಯ ಸಮಯದಲ್ಲಿ, ದಂಪತಿಗಳ ಈ ಫ್ಲಾಟ್‌ನಲ್ಲಿ ಓನ್ಲಿಫ್ಯಾನ್ಸ್‌ನಂತಹ ವಯಸ್ಕ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಂಡುಬರುವ ವಿಷಯವನ್ನು ಪ್ರಸಾರ ಮಾಡಲು ಸ್ಥಾಪಿಸಲಾದ ವೃತ್ತಿಪರ ವೆಬ್‌ಕ್ಯಾಮ್ ಸ್ಟುಡಿಯೋ ಕೂಡ ಪತ್ತೆಯಾಗಿದೆ. ಇದು ಅಶ್ಲೀಲ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲು ಬಳಸುವ ಹೈಟೆಕ್ ಪ್ರಸಾರ ಸೌಲಭ್ಯಗಳನ್ನು ಹೊಂದಿದೆ ಎನ್ನಲಾಗಿದೆ.
ವಿವಿಧ ಸೇವೆಗೆ ವಿವಿಧ ದರ
ಇನ್ನು ಈ ಖತರ್ನಾಕ್ ದಂಪತಿಗಳು ತಮ್ಮ ಅಶ್ಲೀಲ ಚಿತ್ರಗಳ ಸೇವೆಗಾಗಿ ಗ್ರಾಹಕರಿಗೆ ವಿವಿಧ ಆಫರ್ ಗಳನ್ನು ನೀಡುತ್ತಿತ್ತು. ಗ್ರಾಹಕರು ಮಾಡಿದ ಪಾವತಿಗಳ ಆಧಾರದ ಮೇಲೆ ಮಾಡೆಲ್‌ಗಳು ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಅರ್ಧ-ಮುಖದ ಪ್ರದರ್ಶನಗಳು, ಪೂರ್ಣ-ಮುಖದ ಪ್ರದರ್ಶನಗಳು ಮತ್ತು ಪೂರ್ಣ ನಗ್ನತೆ ಸೇರಿದಂತೆ ವಿವಿಧ ವರ್ಗಗಳನ್ನು ನೀಡಲಾಗುತ್ತಿತ್ತು.
ಗ್ರಾಹಕರು ಈ ಸೇವೆಗಳನ್ನು ಪ್ರವೇಶಿಸಲು ಟೋಕನ್‌ಗಳನ್ನು ಖರೀದಿಸುತ್ತಿದ್ದರು. ವರ್ಗವನ್ನು ಅವಲಂಬಿಸಿ ವಿಭಿನ್ನ ಶುಲ್ಕಗಳೊಂದಿಗೆ ಗ್ರಾಹಕರಿಗೆ ಸೇವೆಗೆ ಪ್ರವೇಶ ನೀಡಲಾಗುತ್ತಿತ್ತು. ಇನ್ನು ಗಳಿಕೆಯ ಶೇಕಡಾ 75 ರಷ್ಟು ಅವರು ಉಳಿಸಿಕೊಳ್ಳುತ್ತಿದ್ದ ದಂಪತಿ ಕೇವಲ ತಮ್ಮ ಆದಾಯದ ಶೇ. 25 ಪ್ರತಿಶತವನ್ನು ಮಾಡೆಲ್‌ಗಳೊಂದಿಗೆ ಹಂಚಿಕೊಳ್ಳುತ್ತಿದ್ದರು.
ಕ್ರಿಪ್ಟೋ ಕರೆನ್ಸಿ ಪಾವತಿ
ದಂಪತಿಗಳು ಆರಂಭದಲ್ಲಿ ಗ್ರಾಹಕರಿಂದ ಕ್ರಿಪ್ಟೋಕರೆನ್ಸಿಗಳ ಮೂಲಕ ಪಾವತಿಗಳನ್ನು ಪಡೆಯುತ್ತಿದರು. ಟೆಕ್ನಿಯಸ್ ಲಿಮಿಟೆಡ್‌ನಿಂದ 7 ಕೋಟಿ ರೂ.ಗಳನ್ನು ವರ್ಗಾಯಿಸಲಾದ ನೆದರ್‌ಲ್ಯಾಂಡ್ಸ್‌ನ ಬ್ಯಾಂಕ್ ಖಾತೆಯನ್ನು ಸಹ ED ಪತ್ತೆಹಚ್ಚಿದೆ. ನಂತರ ಈ ಹಣವನ್ನು ಅಂತರರಾಷ್ಟ್ರೀಯ ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಭಾರತದಲ್ಲಿ ನಗದು ರೂಪದಲ್ಲಿ ಹಿಂಪಡೆಯಲಾಗುತ್ತಿತ್ತು. ತನಿಖಾ ಸಂಸ್ಥೆಯ ಪ್ರಕಾರ, ಈ ದಂಧೆಯ ಮೂಲಕ ಸಾವಿರಾರು ಮಹಿಳೆಯರನ್ನು ನೇಮಕ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
Advertisement