ಈ ಹಬ್ಬ ಸಮಾಜದಲ್ಲಿ ಭರವಸೆ, ಸಾಮರಸ್ಯ-ದಯೆಯ ಮನೋಭಾವ ಹೆಚ್ಚಿಸಲಿ: ರಂಜಾನ್ ಶುಭಾಶಯ ಕೋರಿದ ಪ್ರಧಾನಿ ಮೋದಿ
ನವದೆಹಲಿ: ರಂಜಾನ್ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದು, ಈ ಹಬ್ಬವು ಸಮಾಜದಲ್ಲಿ ಭರವಸೆ, ಸಾಮರಸ್ಯ ಮತ್ತು ದಯೆಯ ಮನೋಭಾವ ಹೆಚ್ಚಿಸಲಿ ಎಂದು ಸೋಮವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಈದ್-ಉಲ್-ಫಿತರ್ ಹಬ್ಬದ ಶುಭಾಶಯಗಳು. ಈ ಹಬ್ಬವು ಸಮಾಜದಲ್ಲಿ ಭರವಸೆ, ಸಾಮರಸ್ಯ ಮತ್ತು ದಯೆಯ ಮನೋಭಾವ ಹೆಚ್ಚಿಸಲಿ ಎಂದು ಹಾರೈಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಜನತೆಗೆ ಈದ್ - ಉಲ್ - ಫಿತರ್ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದು, ಈದ್ ಸಹಾನುಭೂತಿ ಮತ್ತು ದಾನದ ಮನೋಭಾವವನ್ನು ಉತ್ತೇಜಿಸುವ ಸಂದರ್ಭವಾಗಿದೆ. ಈ ಹಬ್ಬವು ಎಲ್ಲರ ಜೀವನದಲ್ಲಿ ಶಾಂತಿ, ಪ್ರಗತಿ ಮತ್ತು ಸಂತೋಷವನ್ನು ತರಲಿ ಮತ್ತು ಸಕಾರಾತ್ಮಕ ಮನೋಭಾವದಿಂದ ಮುನ್ನಡೆಯಲು ನಮಗೆ ಶಕ್ತಿ ನೀಡಲಿ.
ಈದ್-ಉಲ್-ಫಿತರ್ನ ಶುಭ ಸಂದರ್ಭದಲ್ಲಿ ನಾನು ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲ ಭಾರತೀಯರಿಗೆ, ವಿಶೇಷವಾಗಿ ಮುಸ್ಲಿಂ ಸಹೋದರ ಸಹೋದರಿಯರಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ