ಪಹಲ್ಗಾಮ್‌ ರಕ್ಕಸರಿಗೆ ಊಟ-ಆಶ್ರಯದ ನೆರವು: ಸೇನಾಪಡೆಗಳಿಂದ ತಪ್ಪಿಸಿಕೊಳ್ಳಲು ಹೋಗಿ ನದಿಗೆ ಜಿಗಿದ ಆರೋಪಿ, ಸಾವು; Video

ಕೆಲ ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಮ್ತಿಯಾಜ್‌ ಅಹ್ಮದ್‌ ಮಾಗ್ರೆನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ನದಿಗೆ ಜಿಗಿದ ಆರೋಪಿ.
ನದಿಗೆ ಜಿಗಿದ ಆರೋಪಿ.
Updated on

ನವದೆಹಲಿ: ಪಹಲ್ಗಾಮ್‌ ರಕ್ಕಸರಿಗೆ ಊಟ-ಆಶ್ರಯ ನೀಡಿ ನೆರವು ನೀಡಿದ್ದ ವ್ಯಕ್ತಿಯೊಬ್ಬ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ಹೋಗಿ, ನದಿಗೆ ಹಾರಿ ಮುಳುಗಿ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ.

ಇಮ್ತಿಯಾಜ್‌ ಅಹ್ಮದ್ ಮಾಗ್ರೆ ಎಂಬ 23 ವರ್ಷದ ವ್ಯಕ್ತಿ, ಪಹಲ್ಗಾಮ್‌ ದಾಳಿಕೋರರಿಗೆ ಸಕಲ ನೆರವು ನೀಡುತ್ತಿದ್ದ ಎಂದು ಮೂಲಗಳು ಖಚಿತಪಡಿಸಿವೆ.

ಕೆಲ ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಮ್ತಿಯಾಜ್‌ ಅಹ್ಮದ್‌ ಮಾಗ್ರೆನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಇಮ್ತಿಯಾಜ್‌ ತಾನು ಕಾಡಿನಲ್ಲಿ ಅಡಗಿದ್ದ ಭಯೋತ್ಪಾದಕರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದ.

ಇದರಂತೆ ಪೊಲೀಸರು ಇಮ್ತಿಯಾಜ್‌ನನ್ನು ಭಯೋತ್ಪಾದಕರು ಅಡಗಿದ್ದ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದಾಗ, ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ನದಿಗೆ ಹಾರಿದ್ದು, ತುಂಬ ದೂರ ಈಜಲಾಗದೇ, ಮುಳುಗಿ ಮೃತಪಟ್ಟಿದ್ದಾನೆಂದು ಭದ್ರತಾ ಪಡೆಗಳು ತಿಳಿಸಿವೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎತ್ತರದ ಪ್ರದೇಶದಿಂದ ಸೆರೆಹಿಡಿಯಲಾದ ವೀಡಿಯೊದಲ್ಲಿ, ಆರೋಪಿ ನದಿಗೆ ಹಾರುವ ಮೊದಲು ಅರಣ್ಯ ಪ್ರದೇಶವನ್ನು ಗಮನಿಸುತ್ತಿರುವುದು, ನದಿಗೆ ಹಾರಿದ ತಕ್ಷಣ, ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿರುವುದು ಕಂಡು ಬಂದಿದೆ. ಇದೀಗ ಈ ಘಟನೆ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ತನಿಖೆಗೆ ಒತ್ತಾಯಗಳೂ ಕೇಳಿ ಬರುತ್ತಿವೆ.

ಆದರೆ, ತಪ್ಪು ಮಾಹಿತಿ ಹರಡುತ್ತಿರುವವರನ್ನು ಭದ್ರತಾ ಪಡೆಗಳು ಖಂಡಿಸಿವೆ. ಭದ್ರತಾ ಪಡೆಗಳನ್ನು ಮಾಗ್ರೆಯ ದುರದೃಷ್ಟಕರ ಸಾವಿಗೆ ತಪ್ಪಾಗಿ ದೂಷಿಸಬಾರದು ಎಂದು ತಿಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಈ ಸಾವಿನಲ್ಲಿ ಸಂಚು ಅಡಗಿದೆ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕುಲ್ಗಾಮ್‌ನಲ್ಲಿ ಮತ್ತೊಂದು ಶವವು ನದಿಯಲ್ಲಿ ಪತ್ತೆಯಾಗಿದೆ. ಇದು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ. ಇಮ್ತಿಯಾಜ್ ಮಾಗ್ರೆನನ್ನು ಎರಡು ದಿನಗಳ ಹಿಂದೆ ಸೈನ್ಯವು ವಿಚಾರಣೆಗೆ ಕರೆದೊಯ್ದಿತ್ತು. ಈಗ ಆತನ ಶವವು ನದಿಯಲ್ಲಿ ನಿಗೂಢವಾಗಿ ಪತ್ತೆಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನದಿಗೆ ಜಿಗಿದ ಆರೋಪಿ.
'ದೇಶದ ಜನತೆ ಬಯಸಿದ್ದು ಖಂಡಿತವಾಗಿಯೂ ನಡೆಯುತ್ತೆ': ಪಹಲ್ಗಾಮ್ ದಾಳಿಗೆ ಪ್ರತೀಕಾರ ಕುರಿತು ರಾಜನಾಥ್ ಸಿಂಗ್ ಸ್ಫೋಟಕ ಹೇಳಿಕೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com