ಮತ್ತೆ ಭಾರತದ ಮೇಲೆ ಪಾಕ್ ದಾಳಿ: ಡ್ರೋನ್, F-16, JF-17 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ?

ರಾತ್ರಿ 9 ಗಂಟೆಯ ನಂತರ ರಾಜಸ್ಥಾನದ ಗಡಿ ಜಿಲ್ಲೆಗಳಲ್ಲಿ ವಿದ್ಯುತ್ ಸಂಪೂರ್ಣ ಕಡಿತಗೊಂಡಿದೆ.
Drone attack by Pakistan
ಪಾಕಿಸ್ತಾನದಿಂದ ಡ್ರೋನ್ ದಾಳಿonline desk
Updated on

ಜಮ್ಮು: ಭಾರತದ ಮೇಲೆ ಮತ್ತೆ ಪಾಕಿಸ್ತಾನ ದಾಳಿಗೆ ಮುಂದಾಗಿದ್ದು ಜಮ್ಮುವಿನ ಹಲವು ಭಾಗಗಳಲ್ಲಿ ಡ್ರೋನ್ ಮೂಲಕ ದಾಳಿ ನಡೆಸಲು ಯತ್ನಿಸಿದೆ.

ಪಠಾಣ್ ಕೋಟ್ ವಾಯುನೆಲೆ, ಜಮ್ಮು ವಿಮಾನ ನಿಲ್ದಾಣ ಸೇರಿ ಭಾರತದ 8 ಸ್ಥಳಗಳನ್ನು ಗುರಿಯಾಗಿಸಿಕೊಂಡು ಪಾಕ್ ಡ್ರೋನ್ ದಾಳಿ ನಡೆಸಿದೆ

ಆದರೆ ಭಾರತೀಯ ಸೇನಾಪಡೆಗಳು ಪಾಕ್ ದಾಳಿಯನ್ನು ಸಮರ್ಥವಾಗಿ ಎದುರಿಸಿವೆ. ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆ ಬಳಸಿ ಪಾಕ್ ಡ್ರೋನ್ ಗಳನ್ನು ಭಾರತೀಯ ಸೇನೆ ಆಕಾಶದಲ್ಲೇ ಹೊಡೆದುರುಳಿಸಿದೆ.

ಜಮ್ಮು ನಾಗರಿಕ ವಿಮಾನ ನಿಲ್ದಾಣ, ಸಾಂಬಾ, ಆರ್‌ಎಸ್ ಪುರ, ಅರ್ನಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಕಡೆಗೆ ಪಾಕಿಸ್ತಾನದಿಂದ ಎಂಟು ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಭದ್ರತಾ ಸಂಸ್ಥೆಗಳು ವರದಿ ಮಾಡಿವೆ-ಇವೆಲ್ಲವನ್ನೂ ಎಸ್ -400 ಯಶಸ್ವಿಯಾಗಿ ಹೊಡೆದುರುಳಿಸಿದೆ.

ರಾತ್ರಿ 9 ಗಂಟೆಯ ನಂತರ ರಾಜಸ್ಥಾನದ ಗಡಿ ಜಿಲ್ಲೆಗಳಲ್ಲಿ ವಿದ್ಯುತ್ ಕಡಿತಗೊಂಡಿದೆ.

Drone attack by Pakistan
ಒಳಗೆ ನುಗ್ಗಿ ಹೊಡೀತಿದ್ದಾರೆ, ಭಾರತದ ದಾಳಿಯಿಂದ ನಮ್ಮನ್ನು ದೇವರೇ ಕಾಪಾಡಬೇಕು: ಪಾಕ್ ಸಂಸತ್ ನಲ್ಲಿ ಕಣ್ಣೀರಿಟ್ಟ ಸಂಸದರು; Video

ಇದಕ್ಕೂ ಮೊದಲು ಭಾರತ ಲಾಹೋರ್ ನಲ್ಲಿ ಪಾಕ್ ನ ಏರ್ ಡಿಫೆನ್ಸ್ ಸಿಸ್ಟಮ್ ನ್ನು ಹೊಡೆದುರುಳಿಸಿತ್ತು. ಭಾರತೀಯ ಸೇನೆ ಹಾಗೂ ಪಾಕ್ ಸೇನೆ ಈ ದಾಳಿಯನ್ನು ಖಚಿತಪಡಿಸಿದ್ದವು. ಇನ್ನು ಗಡಿ ಭಾಗದಲ್ಲಿ ಪಾಕಿಸ್ತಾನ ಅಪ್ರಚೋದಿತ ಶೆಲ್ ದಾಳಿಯನ್ನು ಮುಂದುವರೆಸಿದೆ.

ಇತ್ತೀಚಿನ ಮಾಹಿತಿಯ ಪ್ರಕಾರ ಭಾರತೀಯ ಸೇನೆ ಪಾಕಿಸ್ತಾನದ 2 ಎಫ್-16 ಯುದ್ಧ ವಿಮಾನ ಹಾಗೂ ಒಂದು ಜೆಎಫ್-17 ವಿಮಾನವನ್ನು ಹೊಡೆದುರುಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಮಾಹಿತಿಯನ್ನು ಭಾರತೀಯ ಸೇನೆ ಇನ್ನಷ್ಟೇ ಅಧಿಕೃತವಾಗಿ ಪ್ರಕಟಿಸಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com