India-Pakistan war: ಕದನ ವಿರಾಮ ಘೋಷಣೆ; ಸಿಂಧೂ ಜಲ ಒಪ್ಪಂದ ಕುರಿತು ಭಾರತದ ನಿಲುವು ಅಚಲ

ಏತನ್ಮಧ್ಯೆ ಸೇನಾ ಸಂಘರ್ಷಕ್ಕೂ ಮುನ್ನ ಅಂದರೆ ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ಘೋಷಿಸಿದ್ದ ಸಿಂಧೂ ಜಲ ಒಪ್ಪಂದ ಅಮಾನತು ಮುಂದುವರೆಯಲಿದೆ ಎಂದೂ ಎಂಇಎ ಸ್ಪಷ್ಟಪಡಿಸಿದೆ.
India-pakistan war
ಭಾರತ-ಪಾಕ್ ಸೇನಾ ಸಂಘರ್ಷ
Updated on

ನವದೆಹಲಿ: ಒಂದು ವಾರದಿಂದ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷ ಕೊನೆಗೂ ಕದನ ವಿರಾಮ ಘೋಷಣೆಯೊಂದಿಗೆ ಅಂತ್ಯವಾಗಿದೆ.

ಇಂದು ಸಂಜೆ 5 ಗಂಟೆಯಿಂದ ಅನ್ವಯವಾಗುವಂತೆ ಕದನ ವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನಗಳು ಒಪ್ಪಿರುವುದಾಗಿ ವಿದೇಶಾಂಗ ಸಚಿವಾಲಯ ಘೋಷಿಸಿದ್ದು, ಭೂ, ವಾಯು ಮತ್ತು ನೌಕಾ ಪಡೆಯ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ.

ಇದರನ್ವಯ ಎರಡು ಕಡೆಗೆ ಸೂಚನೆಗಳನ್ನು ನೀಡಲಾಗಿದೆ. ಉಭಯ ದೇಶಗಳ ಡಿಜಿಎಂಒಗಳು ಮೇ 12ರಂದು ಮಧ್ಯಾಹ್ನ 12 ಗಂಟಗೆ ಮತ್ತೆ ಮಾತುಕತೆ ನಡೆಸಲಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

India-pakistan war
ದಾಳಿ ನಿಲ್ಲಿಸುವಂತೆ ಗೋಗರೆದ Pak; ಸದ್ಯಕ್ಕೆ ಕದನ ವಿರಾಮಕ್ಕೆ ಭಾರತ ಒಪ್ಪಿಗೆ: ಮೇ 12ಕ್ಕೆ DGMO ನಡುವೆ ಮಾತುಕತೆ!

ಯಾವುದೇ ಷರತ್ತುಗಳಿಲ್ಲ

ಇದೇ ವೇಳೆ ಕದನ ವಿರಾಮಕ್ಕೆ ಯಾವುದೇ ಷರತ್ತುಗಳಿಲ್ಲ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದ್ದು, ಕದನ ವಿರಾಮಕ್ಕೆ ಪೂರ್ವ ಅಥವಾ ನಂತರದ ಯಾವುದೇ ಷರತ್ತುಗಳಿಲ್ಲ. ಬದಲಿಗೆ ಪಾಕಿಸ್ತಾನದಿಂದಲೇ ಈ ಕದನ ವಿರಾಮಕ್ಕೆ ಕರೆ ಬಂದಿದೆ ಎಂದು ಹೇಳಿದೆ.

ಏತನ್ಮಧ್ಯೆ ಸೇನಾ ಸಂಘರ್ಷಕ್ಕೂ ಮುನ್ನ ಅಂದರೆ ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ಘೋಷಿಸಿದ್ದ ಸಿಂಧೂ ಜಲ ಒಪ್ಪಂದ ಅಮಾನತು ಮುಂದುವರೆಯಲಿದೆ ಎಂದೂ ಎಂಇಎ ಸ್ಪಷ್ಟಪಡಿಸಿದೆ.

ಉಭಯ ದೇಶಗಳ ಡಿಜಿಎಂಒಗಳು ಮೇ 12ರಂದು ಮಧ್ಯಾಹ್ನ 12 ಗಂಟಗೆ ಮತ್ತೆ ಮಾತುಕತೆ ನಡೆಸಲಿದ್ದು, ಅಂದಿನ ಚರ್ಚೆ ಬಳಿಕ ಎಲ್ಲ ರೀತಿಯ ಗೊಂದಲಗಳಿಗೆ ತೆರೆ ಬೀಳಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com