ಭಾರತದ ಭದ್ರತೆಗೆ 10 ಉಪಗ್ರಹಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿವೆ: ISRO Chairman V Narayanan

ನಾವು ದೇಶದ ಸುರಕ್ಷತೆಯನ್ನು ಖಾತರಿಪಡಿಸಲು ಬಯಸುವುದಾದರೆ, ಅದನ್ನು ನಮ್ಮ ಉಪಗ್ರಹಗಳ ಮೂಲಕ ಸಾಧಿಸಬೇಕು ಎಂದು ಹೇಳಿದರು.
ISRO Chairman V Narayanan
ಇಸ್ರೋ ಮುಖ್ಯಸ್ಥ ವಿ ನಾರಾಯಣನ್
Updated on

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷ ಮುಂದುವರೆದಿರುವಂತೆಯೇ ಭಾರತದ ರಕ್ಷಣೆ ಕುರಿತು ಮಹತ್ವದ ಮಾಹಿತಿ ನೀಡಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ದೇಶದ ರಕ್ಷಣೆಗೆ 10 ಉಪಗ್ರಹಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದೆ.

ಅಗರ್ತಲದಲ್ಲಿರುವ ಕೇಂದ್ರೀಯ ಕೃಷಿ ವಿಶ್ವವಿದ್ಯಾನಿಲಯದ 5ನೇ ಘಟಿಕೋತ್ಸವದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಅವರು, 'ಭಾರತದ ರಕ್ಷಣೆ ಮತ್ತು ಸುಭದ್ರತೆಯನ್ನು ಖಾತರಿಪಡಿಸುವ ಉದ್ದೇಶದಿಂದ ದೇಶದ 10 ಉಪಗ್ರಹಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ನಾವು ದೇಶದ ಸುರಕ್ಷತೆಯನ್ನು ಖಾತರಿಪಡಿಸಲು ಬಯಸುವುದಾದರೆ, ಅದನ್ನು ನಮ್ಮ ಉಪಗ್ರಹಗಳ ಮೂಲಕ ಸಾಧಿಸಬೇಕು ಎಂದು ಹೇಳಿದರು.

ನಾವು ನಮ್ಮ 7 ಸಾವಿರ ಕಿಲೋಮೀಟರ್ ಕಡಲ ಕಿನಾರೆಯ ಮೇಲೆ ನಿಗಾ ಇಡಬೇಕು. ಉಪಗ್ರಹ ಮತ್ತು ಡ್ರೋನ್‌ ತಂತ್ರಜ್ಞಾನದ ಹೊರತಾಗಿ, ಹಲವು ಅಂಶಗಳನ್ನು ನಾವು ಸಾಧಿಸಲಾಗದು. ಇದುವರೆಗೆ ಇಸ್ರೋ 127 ಉಪಗ್ರಹಗಳನ್ನು ಉಡಾಯಿಸಿದೆ. ಇದರಲ್ಲಿ ಖಾಸಗಿ ಕಾರ್ಯಾಚರಣೆದಾರಿಗೆ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಕಾರ್ಯನಿರ್ವಹಿಸುವ ಉಪಗ್ರಹಗಳೂ ಸೇರಿವೆ.

ISRO Chairman V Narayanan
Operation Sindoor ನಿಲ್ಲಲ್ಲ, ಕದನ ವಿರಾಮ ಉಲ್ಲಂಘಿಸಿದರೆ ಸುಮ್ಮನಿರಲ್ಲ: ಭಾರತ ಎಚ್ಚರಿಕೆ ಬೆನ್ನಲ್ಲೇ ಗಡಿ ಕ್ಯಾತೆ ನಿಲ್ಲಿಸಿದ ಪಾಕಿಸ್ತಾನ

ಈ ಪೈಕಿ 22 ಕೆಳ ಭೂ ಕಕ್ಷೆಯಲ್ಲಿದ್ದರೆ 29 ಕೇಂದ್ರ ಸರ್ಕಾರದ ಸ್ವಾಮ್ಯದ ಜಿಯೊ ಸಿಂಕ್ರನೈಸ್ ಕಕ್ಷೆಯಲ್ಲಿವೆ. ಭಾರತ ಸುಮಾರು 12 ಬೇಹುಗಾರಿಕೆ ಉಪಗ್ರಹಗಳನ್ನು ಹೊಂದಿದೆ. ಇದರಲ್ಲಿ ನಿರ್ದಿಷ್ಟ ಕಣ್ಗಾವಲು ಉದ್ದೇಶಗಳಿಗಾಗಿ ತಯಾರಿಸಿದ ಕಾರ್ಟೊಸ್ಯಾಟ್ ಮತ್ತು ಆರ್ ಐಎಸ್‍ಎಟಿ ಸರಣಿಯ ಉಪಗ್ರಹಗಳು, ಇಎಂಐಎಸ್‍ಎಟಿ ಮತ್ತು ಮೈಕ್ರೊಸ್ಯಾಟ್ ಸರಣಿಯ ಉಪಗ್ರಹಗಳು ಸೇರಿವೆ ಎಂದು ವಿವರಿಸಿದರು.

"ನಮ್ಮ ನೆರೆಹೊರೆಯವರ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ನಮ್ಮ ದೇಶದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಾದರೆ, ನಾವು ನಮ್ಮ ಉಪಗ್ರಹಗಳ ಮೂಲಕ ಸೇವೆ ಸಲ್ಲಿಸಬೇಕು. ನಮ್ಮ 7,000 ಕಿಮೀ ಸಮುದ್ರ ತೀರ ಪ್ರದೇಶಗಳನ್ನು ನಾವು ಮೇಲ್ವಿಚಾರಣೆ ಮಾಡಬೇಕು.

ನಾವು ಸಂಪೂರ್ಣ ಉತ್ತರ ಭಾಗವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಉಪಗ್ರಹ ಮತ್ತು ಡ್ರೋನ್ ತಂತ್ರಜ್ಞಾನವಿಲ್ಲದೆ, ನಾವು ಅದನ್ನು ಸಾಧಿಸಲು ಸಾಧ್ಯವಿಲ್ಲ ಎಂದು ವಿ. ನಾರಾಯಣನ್ ಹೇಳಿದರು.

ಭಾರತದ ಕಣ್ಗಾವಲು ಸಾಮಥ್ರ್ಯ ಅಭಿವೃದ್ಧಿಗಾಗಿ ಮುಂದಿನ ಐದು ವರ್ಷಗಳಲ್ಲಿ ಭಾರತ 52 ಉಪಗ್ರಹಗಳನ್ನು ಉಡಾಯಿಸಲಿದೆ ಎಂದು ಕೆಲ ದಿನಗಳ ಹಿಂದೆ ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನಾ ಮತ್ತು ಅನುಮತಿ ಕೇಂದ್ರದ ಅಧ್ಯಕ್ಷ ಪವನ್ ಕುಮಾರ್ ಗೋಯಂಕಾ ಪ್ರಕಟಿಸಿದ್ದರು. ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷದ ಸಂದರ್ಭದಲ್ಲಿ ಇಸ್ರೋ ಮುಖ್ಯಸ್ಥರ ಹೇಳಿಕೆ ವಿಶೇಷ ಮಹತ್ವ ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com