ಭಾರತ- ಪಾಕ್ DGMO ಮಹತ್ವದ ಸಭೆ: ಗುಂಡಿನ ದಾಳಿ, ಆಕ್ರಮಣ ನಡೆಸದಂತೆ ಬದ್ಧತೆ; ಸೇನೆ ನಿಯೋಜನೆ ಕಡಿತಕ್ಕೆ ಒಪ್ಪಿಗೆ!

ಎರಡೂ ಕಡೆಯವರು ಒಂದೇ ಒಂದು ಗುಂಡು ಹಾರಿಸಬಾರದು ಅಥವಾ ಯಾವುದೇ ಆಕ್ರಮಣಕಾರಿ ಕ್ರಮ ಆರಂಭಿಸಬಾರದು ಎಂಬ ಬದ್ಧತೆ ಮುಂದುವರಿಕೆಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು.
India DGMO LT General Rajiv Ghai
ಭಾರತದ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್
Updated on

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಘೋಷಣೆ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ಮಿಲಿಟರಿ ಕಾರ್ಯಾಚರಣೆಗಳ ಸೇನಾ ಜನರಲ್ ಗಳ (DGMO) ಮಹತ್ವದ ಸಭೆ ಸೋಮವಾರ ನಡೆಯಿತು.

ಎರಡೂ ಕಡೆಯವರು ಒಂದೇ ಒಂದು ಗುಂಡು ಹಾರಿಸಬಾರದು ಅಥವಾ ಯಾವುದೇ ಆಕ್ರಮಣಕಾರಿ ಕ್ರಮ ಆರಂಭಿಸಬಾರದು ಎಂಬ ಬದ್ಧತೆ ಮುಂದುವರಿಕೆಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು.

ಗಡಿ ಮತ್ತಿತರ ಪ್ರದೇಶಗಳಲ್ಲಿ ಸೇನಾಪಡೆ ನಿಯೋಜನೆ ಕಡಿತ ಖಾತ್ರಿಗೆ ಎರಡು ಕಡೆಯವರು ಒಪ್ಪಿಕೊಂಡಿರುವುದಾಗಿ ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ಹಾಟ್ ಲೈನ್ ಮೂಲಕ ಸಭೆ ನಡೆದಿದೆ. ಮೊದಲಿಗೆ ಮಧ್ಯಾಹ್ನ 12ಕ್ಕೆ ಸಭೆ ನಿಗದಿಯಾಗಿತ್ತು. ಆದರೆ, ತದನಂತರ ಸಂಜೆಗೆ ಮುಂದೂಡಲಾಗಿತ್ತು.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22 ರಂದು ಉಗ್ರರು ನಡೆಸಿದ ದಾಳಿಯಲ್ಲಿ 26 ಜನರನ್ನು ಬಲಿ ತೆಗೆದುಕೊಂಡಿದ್ದರು. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೂ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಗಳಲ್ಲಿ ಮೇ 7 ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ್ದವು.

India DGMO LT General Rajiv Ghai
ನೀರು, ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ: ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ!

ಬಳಿಕ ಪಾಕ್ ಪಡೆಗಳು ಭಾರತದ ಗಡಿ ಪ್ರದೇಶಗಳಲ್ಲಿ ನಡೆಸಿದ ಶೆಲ್, ಡ್ರೋನ್ ಹಾಗೂ ಕ್ಷಿಪಣಿ ದಾಳಿಯನ್ನು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯಿಂದ ಸಮರ್ಥವಾಗಿ ಸೇನೆ ಹಿಮ್ಮೆಟ್ಟಿಸಿದ್ದವು. ನಾಲ್ಕು ರಾತ್ರಿಗಳು ಗಡಿಯಾಚೆ ನಡೆದ ಸೇನಾ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ, ಮೇ 10 ರಂದು ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಒಪ್ಪಂದ ಆಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com