
ನವದೆಹಲಿ: ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನದ ಮೇಲೆ ಪ್ರಕೃತಿಯೂ ಮುನಿಸಿಕೊಂಡಿದ್ದು, ಸೋಮವಾರ ವಿವಿಧೆಡೆ ಸೋಮವಾರ 4.6 ತೀವ್ರತೆಯ ಭೂಕಂಪ ಆಗಿದೆ. ಪಂಜಾಬ್ ಪ್ರಾಂತ್ಯದ ಪಿರ್ ಜೊಂಗಲ್ ಬಳಿ ಮಧ್ಯಾಹ್ನ 1-26ರ ಸುಮಾರಿನಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ನಿರ್ದೇಶಕ ಒ.ಪಿ ಮಿಶ್ರಾ ತಿಳಿಸಿದ್ದಾರೆ.
ಮೂರು ದಿನಗಳ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಮೂರನೇ ಬಾರಿಗೆ ಭೂಕಂಪವಾಗಿದೆ. ಮೇ 10 ರಂದು ಬೆಳಗ್ಗೆ ಹಿಂದೆ ಮುಂದೆಯಂತೆ 4.7 ರಷ್ಟು ತೀವ್ರತೆಯ ಭೂಕಂಪದ 4.0 ರಷ್ಟು ಭೂಕಂಪವಾಗಿತ್ತು. ಭಾರತದೊಂದಿಗೆ ಸೇನಾ ಕಾರ್ಯಾಚರಣೆಯಲ್ಲಿ ತೊಡಗಿದ ಪಾಕಿಸ್ತಾನದಲ್ಲಿನ ಕೆಲವು ಅಸ್ವಾಭಾವಿಕ ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯಲ್ಲಿ ಪೋಸ್ಟ್ ಮಾಡಲಾಗುತ್ತಿದೆ.
ಪರಮಾಣು ಪರೀಕ್ಷೆ ನಡೆಸುವ ಮಹತ್ವದ ಸ್ಥಾವರಗಳ ಮೇಲೆ ಭಾರತ ದಾಳಿ ನಡೆಸಿದೆ. ತದನಂತರ ಪಾಕಿಸ್ತಾನ ಪರಮಾಣು ಪರೀಕ್ಷೆ ನಡೆಸುತ್ತಿರುವುದರಿಂದ ಆಗಾಗ್ಗೆ ಭೂಕಂಪ ಆಗುತ್ತಿದೆ ಎಂದು ಕೆಲವರು ಬರೆದುಕೊಂಡಿದ್ದರು.
ಇದು ನೈಸರ್ಗಿಕ ಭೂಕಂಪವಲ್ಲ ಆದರೆ ಬಹುಶಃ ಪಾಕಿಸ್ತಾನಿ ನ್ಯೂಕ್ಲಿಯರ್ ಪ್ರದೇಶದಲ್ಲಿ ಆದ ಘಟನೆಯೇ? ನ್ಯೂಕ್ಲಿಯರ್ ಸೈಟ್ ಘಟನೆಯೇ? #OperationSindoor,' ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಎಕ್ಸ್ ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಇಂತಹ ಹೇಳಿಕೆಗಳನ್ನು ಅಲ್ಲಗಳೆದಿರುವ NCS ನಿರ್ದೇಶಕ ಒ ಪಿ ಮಿಶ್ರಾ, ಆಗಾಗ್ಗೆ ಭೂಕಂಪ ಉಂಟಾಗುವ ಪ್ರದೇಶಗಳಲ್ಲಿ ಭೂಕಂಪ ಆಗಿದೆ. ನೈಸರ್ಗಿಕ ಭೂಕಂಪವು ಎರಡು ಹಂತಗಳನ್ನು ಹೊಂದಿರುತ್ತದೆ. ಆದರೆ ಪರಮಾಣು ಸ್ಫೋಟ ವಿಶಿಷ್ಟವಾದ ತೃತೀಯ ಹಂತವನ್ನು ಹೊಂದಿರುತ್ತದೆ. ಇದು ಪರಮಾಣು ಸ್ಫೋಟದ ನಂತರ ಮೇಲ್ಮೈ ಪ್ರತಿಧ್ವನಿಸುವಿಕೆಯಿಂದ ಉಂಟಾಗುತ್ತದೆ. ಸಿಸ್ಮೋಗ್ರಾಫ್ ಇದನ್ನು ಸ್ಪಷ್ಟವಾಗಿ ಗುರುತಿಸುತ್ತದೆ ಎಂದು ತಿಳಿಸಿದ್ದಾರೆ.
ಹಿರಿಯ ಭೂಕಂಪಶಾಸ್ತ್ರಜ್ಞ ಎ ಕೆ ಶುಕ್ಲಾ ಅವರು ಪರಮಾಣು ಸ್ಫೋಟಗಳು ಸಿಸ್ಮೋಗ್ರಾಪ್ ಗಳಲ್ಲಿ ವಿಭಿನ್ನವಾಗಿ ದಾಖಲಾಗುತ್ತವೆ. ಹಿಂದಿನ ಭೂಕಂಪಗಳು ವಿವಿಧ ಸ್ಥಳಗಳಿಂದ ವರದಿಯಾಗಿದ್ದು, ಅಲ್ಲಿ ಪರಮಾಣು ಸ್ಥಾವರ ಹೊಂದಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಪಾಕಿಸ್ತಾನವು ಭಾರತ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ನಡುವಿನ ಸಕ್ರಿಯ ಗಡಿಯಲ್ಲಿದೆ ಮತ್ತು ಬಲೂಚಿಸ್ತಾನ್, ಖೈಬರ್ ಪಖ್ತುಂಕ್ವಾ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್‌ನಂತಹ ಪ್ರಾಂತ್ಯಗಳು ಆಗಾಗ್ಗೆ ಭೂಕಂಪಗಳಿಗೆ ಗುರಿಯಾಗುತ್ತವೆ.
Advertisement