ಆಂಧ್ರ ಪ್ರದೇಶ ಅಬಕಾರಿ ಹಗರಣ: ಮೈಸೂರಿನಲ್ಲಿ ಆರೋಪಿ ಬಾಲಾಜಿ ಗೋವಿಂದಪ್ಪ ಬಂಧನ

ಪ್ರಕರಣದ ಹಲವಾರು ಆರೋಪಿಗಳಲ್ಲಿ ಗೋವಿಂದಪ್ಪ ಕೂಡ ಒಬ್ಬರು. ಅವರು ಭಾರತಿ ಸಿಮೆಂಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.
ಬಾಲಾಜಿ ಗೋವಿಂದಪ್ಪ
ಬಾಲಾಜಿ ಗೋವಿಂದಪ್ಪ
Updated on

ಅಮರಾವತಿ: ಆಂಧ್ರ ಪ್ರದೇಶದಲ್ಲಿ ಹಿಂದಿನ ವೈಎಸ್‌ಆರ್‌ಸಿಪಿ ಆಡಳಿತದ ಅವಧಿಯಲ್ಲಿ ನಡೆದಿದೆ ಎನ್ನಲಾದ 3,200 ಕೋಟಿ ರೂ. ಅಬಕಾರಿ ಹಗರಣದ ಆರೋಪಗಳ ತನಿಖೆಗಾಗಿ ರಚಿಸಲಾದ ಆಂಧ್ರ ಪ್ರದೇಶ ಪೊಲೀಸ್ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣದ ಆರೋಪಿ ಬಾಲಾಜಿ ಗೋವಿಂದಪ್ಪ ಅವರನ್ನು ಮಂಗಳವಾರ ಮೈಸೂರಿನಲ್ಲಿ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣದ ಹಲವಾರು ಆರೋಪಿಗಳಲ್ಲಿ ಗೋವಿಂದಪ್ಪ ಕೂಡ ಒಬ್ಬರು. ಅವರು ಭಾರತಿ ಸಿಮೆಂಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.

'ಗೋವಿಂದಪ್ಪ ಅವರನ್ನು ಇಂದು ಮೈಸೂರಿನಲ್ಲಿ ಬಂಧಿಸಲಾಗಿದೆ' ಎಂದು ಅಧಿಕಾರಿ ಪಿಟಿಐಗೆ ದೃಢಪಡಿಸಿದ್ದಾರೆ.

ಒಂದು ಮೂಲದ ಪ್ರಕಾರ, ಎಸ್‌ಐಟಿ ಅಧಿಕಾರಿಗಳು ಮೂರು ದಿನಗಳ ಹಿಂದೆ ಹೈದರಾಬಾದ್‌ನಲ್ಲಿರುವ ಗೋವಿಂದಪ್ಪ ಅವರ ನಿವಾಸವನ್ನು ಶೋಧಿಸಿದ್ದರು. ನಂತರ ಇಂದು ಅವರನ್ನು ಬಂಧಿಸಲಾಯಿತು.

ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರ ಆರ್ಥಿಕ ಅಪರಾಧಗಳ ಸಿಐಡಿ ಸೆಪ್ಟೆಂಬರ್ 2024ರಂದು ಎಫ್‌ಐಆರ್‌ ದಾಖಲಿಸಿದ ಬೆನ್ನಲ್ಲೇ, ಇತ್ತೀಚೆಗೆ ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.

ಅಬಕಾರಿ ಹಗರಣದ ಪ್ರಮುಖ ಆರೋಪಿ ಕಾಸಿರೆಡ್ಡಿ ರಾಜ ಶೇಖರ್ ರೆಡ್ಡಿಯ ಇತ್ತೀಚಿನ ರಿಮಾಂಡ್ ವರದಿಯಲ್ಲಿ, ಎಸ್‌ಐಟಿ 2019 ಮತ್ತು 2024 ರ ನಡುವೆ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾದ ಹಲವಾರು ಜನರನ್ನು ಹೆಸರಿಸಿದೆ. ವಾಸುದೇವ ರೆಡ್ಡಿ, ಸತ್ಯ ಪ್ರಸಾದ್, ರಾಜಂಪೇಟೆ ಸಂಸದ ಪಿವಿ ಮಿಧುನ್ ರೆಡ್ಡಿ, ವೈಎಸ್‌ಆರ್‌ಸಿಪಿ ಮಾಜಿ ಸಂಸದ ವಿ ವಿಜಯಸಾಯಿ ರೆಡ್ಡಿ, ಸಜ್ಜಲ ಶ್ರೀಧರ್ ರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಧನುಂಜಯ ರೆಡ್ಡಿ, ಕೃಷ್ಣಮೋಹನ್ ರೆಡ್ಡಿ ಮತ್ತು ಗೋವಿಂದಪ್ಪ ಅವರ ಹೆಸರುಗಳು ಪಟ್ಟಿಯಲ್ಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com