
ನವದೆಹಲಿ: ಇತ್ತೀಚಿನ ಭಾರತೀಯ ಸೇನೆ ಜೊತೆಗಿನ ಸಂಘರ್ಷದಲ್ಲಿ ಗಾಯಗೊಂಡಿದ್ದ ಪಾಕಿಸ್ತಾನದ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತಪಟ್ಟ ಸೈನಿಕರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ಶತ್ರುರಾಷ್ಟ್ರದ ಮಿಲಿಟರಿ ಬುಧವಾರ ತಿಳಿಸಿದೆ.
ಪಾಕ್ ಸೇನೆಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಪ್ರಕಾರ, ಭಾರತೀಯ ದಾಳಿಯ ಸಮಯದಲ್ಲಿ ಗಾಯಗೊಂಡಿದ್ದ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಭಾರತದೊಂದಿಗಿನ ಘರ್ಷಣೆಯಲ್ಲಿ ಸಾವನ್ನಪ್ಪಿದ ಸೇನಾ ಸಿಬ್ಬಂದಿಗಳ ಸಂಖ್ಯೆ 13 ಕ್ಕೆ ಏರಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಮೃತ ಯೋಧರನ್ನು ಪಾಕಿಸ್ತಾನ ಸೇನೆಯ ಹವಾಲ್ದಾರ್ ಮುಹಮ್ಮದ್ ನವೀದ್ ಮತ್ತು ಪಾಕಿಸ್ತಾನದ ವಾಯುಪಡೆಯ ಹಿರಿಯ ತಂತ್ರಜ್ಞ ಮುಹಮ್ಮದ್ ಅಯಾಜ್ ಎಂದು ಅದು ಗುರುತಿಸಲಾಗಿದೆ.
"ಅವರ ತ್ಯಾಗವು ರಾಷ್ಟ್ರದ ನೆನಪಿಯಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಮುಂಬರುವ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ" ಎಂದು ಮಿಲಿಟರಿ ಹೇಳಿದೆ. ಮಂಗಳವಾರ ಭಾರತದೊಂದಿಗೆ ಸೇನಾ ಕಾರ್ಯಾಚರಣೆಯಲ್ಲಿ 11 ಸೈನಿಕರು ಸಾವನ್ನಪ್ಪಿದ್ದು, 78 ಜನರು ಗಾಯಗೊಂಡಿದ್ದಾರೆ ಎಂದು ಸೇನೆ ತಿಳಿಸಿತ್ತು.
Advertisement