Tamil Nadu crosses entire GDP of Pakistan in 2025
ಪಾಕಿಸ್ತಾನ ಜಿಡಿಪಿ ಹಿಂದಿಕ್ಕಿದ ಭಾರತದ 2ನೇ ರಾಜ್ಯ

ಪಾಕಿಸ್ತಾನಕ್ಕೆ ಮತ್ತೆ ಜಾಗತಿಕ ಮುಖಭಂಗ: Pak GDP ಹಿಂದಿಕ್ಕಿದ Tamil Nadu; 419 ಬಿಲಿಯನ್ ಡಾಲರ್ ಗೆ ಏರಿಕೆ!

2025ರಲ್ಲಿ ತಮಿಳುನಾಡು ರಾಜ್ಯವು ಗಮನಾರ್ಹ ಆರ್ಥಿಕ ಪ್ರಗತಿಯನ್ನು ಸಾಧಿಸಿದ್ದು, ರಾಜ್ಯದ ಜಿಡಿಪಿ 419.74 ಬಿಲಿಯನ್ ಡಾಲರ್ ತಲುಪಿದೆ.
Published on

ನವದೆಹಲಿ: ಈಗಾಗಲೇ ಸೇನಾ ಸಂಘರ್ಷದಲ್ಲಿ ಭಾರತದಿಂದ ತೀವ್ರ ಮುಜುಗರಕ್ಕೀಡಾಗಿರುವ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮುಖಭಂಗವಾಗಿದ್ದು, ಭಾರತ ದೇಶದ ರಾಜ್ಯವೊಂದು ಪಾಕಿಸ್ತಾನದ GDPಯನ್ನೇ ಹಿಂದಿಕ್ಕಿದೆ.

ಅಚ್ಚರಿಯಾದರೂ ಇದು ಸತ್ಯ.. ಐತಿಹಾಸಿಕ ಆರ್ಥಿಕ ಮೈಲಿಗಲ್ಲು ಎಂಬಂತೆ, ತಮಿಳುನಾಡಿನ ಒಟ್ಟು ರಾಜ್ಯ ದೇಶೀಯ ಉತ್ಪನ್ನ (GSDP) 2025 ರಲ್ಲಿ ಪಾಕಿಸ್ತಾನದ ಒಟ್ಟು ದೇಶೀಯ ಉತ್ಪನ್ನ (GDP) ವನ್ನು ಮೀರಿಸಿದೆ. ಇತ್ತೀಚಿನ ಅಂದಾಜಿನ ಪ್ರಕಾರ, ತಮಿಳುನಾಡಿನ GSDP 419.74 ಬಿಲಿಯನ್ ಡಾಲರ್ (ಸುಮಾರು 17.23 ಲಕ್ಷ ಕೋಟಿ) ತಲುಪಿದೆ. ಆದರೆ ಪಾಕಿಸ್ತಾನದ GDP ಸುಮಾರು 374 ಬಿಲಿಯನ್ ಡಾಲರ್ ಆಗಿದೆ ಎಂದು ಅಂಕಿಅಂಶವೊಂದು ತಿಳಿಸಿದೆ.

2025ರಲ್ಲಿ ತಮಿಳುನಾಡು ರಾಜ್ಯವು ಗಮನಾರ್ಹ ಆರ್ಥಿಕ ಪ್ರಗತಿಯನ್ನು ಸಾಧಿಸಿದ್ದು, ರಾಜ್ಯದ ಜಿಡಿಪಿ 419.74 ಬಿಲಿಯನ್ ಡಾಲರ್ ತಲುಪಿದೆ. ಇದು ಪಾಕಿಸ್ತಾನದ ರಾಷ್ಟ್ರೀಯ ಜಿಡಿಪಿಗಿಂತ ಹೆಚ್ಚು. ಪಾಕಿಸ್ತಾನದ ರಾಷ್ಟ್ರೀಯ ಜಿಡಿಪಿ ಸುಮಾರು 374 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

Tamil Nadu crosses entire GDP of Pakistan in 2025
ಪಾಕಿಸ್ತಾನ ವಿರುದ್ಧ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಜಯ: ಬಂಧಿತ BSF ಯೋಧ ಕೊನೆಗೂ ಬಿಡುಗಡೆ! Video

ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಪಾಕಿಸ್ತಾನದ ಆರ್ಥಿಕ ಮುನ್ನೋಟವನ್ನು ಪರಿಷ್ಕರಿಸಿದ್ದು, 2025ರ ಒಟ್ಟು ದೇಶೀಯ ಉತ್ಪನ್ನ (GDP) ಬೆಳವಣಿಗೆಯನ್ನು ಶೇ.3% ಕ್ಕೆ ಇಳಿಸಿದೆ, ಇದು ಕೇವಲ ಮೂರು ತಿಂಗಳ ಹಿಂದೆ ಊಹಿಸಲಾದ 3.2% ಕ್ಕಿಂತ ಕಡಿಮೆಯಾಗಿದೆ. ಅಂತೆಯೇ ಇತ್ತೀಚಿನ ವರದಿಗಳು ಭಾರತದಲ್ಲಿನ ರಾಜ್ಯ ಮಟ್ಟದ ಆರ್ಥಿಕತೆಗಳು ಸಹ ಪಾಕಿಸ್ತಾನ ಸೇರಿದಂತೆ ಹಲವು ದೇಶಗಳ ರಾಷ್ಟ್ರೀಯ ಆರ್ಥಿಕತೆಗಳನ್ನು ಮೀರಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಸೂಚಿಸುತ್ತವೆ.

ಈ ವರದಿಗಳನ್ನು ನೋಡಿದರೆ, ಪಾಕಿಸ್ತಾನ ಯಾವ ರೀತಿಯ ಹೀನ ಪರಿಸ್ಥಿತಿಯಲ್ಲಿದೆ ಎಂದು ಅರ್ಥವಾಗುತ್ತದೆ. ಭಾರತ ಬಿಡಿ ಭಾರತದ ಒಂದು ರಾಜ್ಯದ ವಿರುದ್ಧವೂ ಅಭಿವೃದ್ಧಿಯಲ್ಲಿ ಸ್ಪರ್ಧಿಸಲು ಸಾಧ್ಯವಾಗದ ಪಾಕಿಸ್ತಾನ, ತನ್ನದೇ ಆದ ಪರಿಸ್ಥಿತಿಯನ್ನು ಮರೆತು ಭಾರತದ ವಿರುದ್ಧ ಧ್ವನಿ ಎತ್ತುವ ಮೂಲಕ ಗಡಿಗಳಲ್ಲಿ ಪ್ರಚೋದನಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಪಾಕಿಸ್ತಾನವನ್ನು ಮೀರಿಸಿದ ತಮಿಳುನಾಡು

ತಮಿಳುನಾಡಿನಲ್ಲಿ ಕೈಗಾರಿಕೆ, ಸೇವಾ ವಲಯ ಮತ್ತು ವಿದೇಶಿ ಹೂಡಿಕೆಯ ಬೆಳವಣಿಗೆಯಿಂದ ಈ ಆರ್ಥಿಕ ಪ್ರಗತಿ ಸಾಧ್ಯವಾಗಿದೆ. ಪ್ರಮುಖ ಕೈಗಾರಿಕೆಗಳಲ್ಲಿ ಆಟೋಮೊಬೈಲ್‌ಗಳು, ಎಲೆಕ್ಟ್ರಾನಿಕ್ಸ್, ಜವಳಿ ಮತ್ತು ಮಾಹಿತಿ ತಂತ್ರಜ್ಞಾನ ಸೇರಿವೆ.

ರಾಜ್ಯ ಸರ್ಕಾರವು ಮೂಲ ಸೌಕರ್ಯವನ್ನು ಸುಧಾರಿಸುವ ಮೂಲಕ ಮತ್ತು ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸಿದೆ. ಉತ್ತಮ ಆಡಳಿತ ಮತ್ತು ಹೂಡಿಕೆ ಆಕರ್ಷಣೆಯಿಂದ ತಮಿಳುನಾಡಿನ ಆರ್ಥಿಕ ಬೆಳವಣಿಗೆ ಸಾಧ್ಯವಾಗಿದೆ. ಇದು ರಾಜ್ಯ ಮಟ್ಟದ ಆರ್ಥಿಕ ಅಭಿವೃದ್ಧಿಗೆ ಒಂದು ಉದಾಹರಣೆಯಾಗಿ ನಿಲ್ಲುತ್ತದೆ.

ಮತ್ತೊಂದೆಡೆ, ಪಾಕಿಸ್ತಾನದ ಆರ್ಥಿಕತೆಯು ರಾಜಕೀಯ ಅಸ್ಥಿರತೆ, ಹಣಕಾಸಿನ ಕೊರತೆ ಮತ್ತು ವಿದೇಶಿ ಹಣಕಾಸು ನೆರವಿನ ಮೇಲಿನ ಅವಲಂಬನೆಯಂತಹ ಸವಾಲುಗಳನ್ನು ಎದುರಿಸುತ್ತಿದೆ. ಇದರಿಂದಾಗಿ, 2025 ರಲ್ಲಿ ಆರ್ಥಿಕ ಬೆಳವಣಿಗೆ ಸೀಮಿತವಾಗಿದೆ. ಪಾಕಿಸ್ತಾನದ ಅನುಭವವು ವಿವಿಧ ಸವಾಲುಗಳ ನಡುವೆ ರಾಷ್ಟ್ರೀಯ ಆರ್ಥಿಕತೆಯನ್ನು ನಿರ್ವಹಿಸುವಲ್ಲಿನ ತೊಂದರೆಗಳನ್ನು ತೋರಿಸುತ್ತದೆ.

ಭಾರತದ 2ನೇ ರಾಜ್ಯ

ಇದೇ ವೇಳೆ ತಮಿಳುನಾಡು ಪಾಕಿಸ್ತಾನ ದೇಶದ GDPಯನ್ನು ಹಿಂದಿಕ್ಕಿದ ಭಾರತದ 2ನೇ ರಾಜ್ಯ ಎಂಬ ಕೀರ್ತಿಗೂ ಭಾಜನವಾಗಿದೆ. ಈ ಹಿಂದೆ ಮಹಾರಾಷ್ಟ್ರ ಪಾಕಿಸ್ತಾನದ ಜಿಡಿಪಿ ಹಿಂದಿಕ್ಕಿದ ಮೊದಲ ಭಾರತದ ರಾಜ್ಯವಾಗಿತ್ತು. ಪ್ರಸ್ತುತ ಮಹಾರಾಷ್ಟ್ರದ ಜಿಡಿಪಿ 45.31 ಲಕ್ಷ ಕೋಟಿಗಳಷ್ಟಿದೆ. ಕರ್ನಾಟಕದ ಜಿಡಿಪಿ 28.09 ಲಕ್ಷ ಕೋಟಿಗಳಷ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com