ಭಯೋತ್ಪಾದನೆ ವಿರುದ್ಧ ಜಾಗತಿಕ ಬೆಂಬಲಕ್ಕೆ ಕಸರತ್ತು: ಭಾರತದಿಂದ ವಿದೇಶಕ್ಕೆ ಸರ್ವ ಪಕ್ಷ ನಿಯೋಗ!

ಆಪರೇಷನ್ ಸಿಂಧೂರ್ ಹಿಂದೆ ಭಾರತದ ತಾರ್ಕಿಕತೆ ಪ್ರಸ್ತುತಪಡಿಸುವುದು ಮತ್ತು ಗಡಿಯಾಚೆಯಿಂದ ಪಾಕ್ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಅಂತಾರಾಷ್ಟ್ರೀಯ ಬೆಂಬಲವನ್ನು ಕ್ರೋಢೀಕರಿಸುವುದು ಇದರ ಉದ್ದೇಶವಾಗಿದೆ.
 all-party meeting
ಸರ್ವ ಪಕ್ಷ ಸಭೆ
Updated on

ನವದೆಹಲಿ: ಭಯೋತ್ಪಾದನೆಯ ವಿರುದ್ಧ ಪ್ರಮುಖ ರಾಜತಾಂತ್ರಿಕ ಅಭಿಯಾನವನ್ನು ಎನ್ ಡಿ ಎ ಸರ್ಕಾರ ಪ್ರಾರಂಭಿಸುತ್ತಿದೆ. ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳ ಬಗ್ಗೆ ಭಾರತದ ನಿಲುವನ್ನು ಪ್ರಸ್ತುತಪಡಿಸಲು ವಿದೇಶಕ್ಕೆ ಬಹುಪಕ್ಷೀಯ ನಿಯೋಗಗಳನ್ನು ಕಳುಹಿಸುತ್ತಿದೆ.

ಈ ಉಪ ಕ್ರಮದಡಿ ಎನ್‌ಡಿಎ ಮತ್ತು ಪ್ರಮುಖ ವಿರೋಧ ಪಕ್ಷಗಳ ಸಂಸದರು ಯುಎಸ್, ಯುಕೆ ಮತ್ತು ಇಸ್ಲಾಮಿಕ್ ರಾಷ್ಟ್ರಗಳು ಸೇರಿದಂತೆ ಐದರಿಂದ ಆರು ದೇಶಗಳಿಗೆ ಭೇಟಿ ನೀಡಲಿದ್ದು, ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅಂತಾರಾಷ್ಟ್ರೀಯ ಬೆಂಬಲವನ್ನು ಪಡೆಯಲಿದ್ದಾರೆ. ಆಪರೇಷನ್ ಸಿಂಧೂರ್ ಹಿಂದೆ ಭಾರತದ ತಾರ್ಕಿಕತೆ ಪ್ರಸ್ತುತಪಡಿಸುವುದು ಮತ್ತು ಗಡಿಯಾಚೆಯಿಂದ ಪಾಕ್ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಅಂತಾರಾಷ್ಟ್ರೀಯ ಬೆಂಬಲವನ್ನು ಕ್ರೋಢೀಕರಿಸುವುದು ಇದರ ಉದ್ದೇಶವಾಗಿದೆ.

ಎನ್‌ಡಿಎ ಮಿತ್ರಪಕ್ಷಗಳು ಮತ್ತು ಪ್ರಮುಖ ವಿರೋಧ ಪಕ್ಷದ ನಾಯಕರು ಸೇರಿದಂತೆ ಸಂಸದರ ಬಹುಪಕ್ಷೀಯ ನಿಯೋಗವನ್ನು ರಚಿಸಲಾಗುತ್ತಿದೆ. ಭಾರತದ ವಿರುದ್ಧದ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಕಿಸ್ತಾನ ಭಾಗಿ ವಿವರಿಸುವ ದಾಖಲೆಗಳು ಮತ್ತು ಪುರಾವೆಗಳನ್ನು ಈ ಸಂಸದರಿಗೆ ಸಂಪೂರ್ಣವಾಗಿ ಒದಗಿಸಲಾಗುವುದು.

ಇದು ಜಾಗತಿಕ ವೇದಿಕೆಯಲ್ಲಿ ಭಾರತ ಸರ್ಕಾರದ ಅಭೂತಪೂರ್ವ ರಾಜತಾಂತ್ರಿಕತೆಯನ್ನು ಗುರುತಿಸುತ್ತದೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಎನ್ ಡಿಎ ಮೈತ್ರಿ ಪಕ್ಷಗಳಾದ ಜೆಡಿಯು, ಟಿಡಿಪಿ ಮತ್ತಿತರರೊಂದಿಗೆ ವಿರೋಧ ಪಕ್ಷದ ಶಶಿ ತರೂರ್ ಅವರನ್ನೊಳಗೊಂಡ ನಿಯೋಗ ಯುಕೆ, ಇಂಗ್ಲೆಂಡ್, ಅಸಾದುದ್ದೀನ್ ಓವೈಸಿ ಅವರನ್ನೊಳಗೊಂಡ ನಿಯೋಗ ಸೌದಿ ಅರಬೀಯಾ ಮತ್ತು ಕತಾರ್ ಗೆ ತೆರಳುವ ಸಾಧ್ಯತೆಯಿದೆ.

ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ಮತ್ತಿತರ ಸುಶಿಕ್ಷಿತ ವಿರೋಧ ಪಕ್ಷಗಳ ಸಂಸದರನ್ನು ನಿಯೋಗಕ್ಕೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 all-party meeting
ಶಶಿ ತರೂರ್ ನೇತೃತ್ವದ ಸ್ಥಾಯಿ ಸಮಿತಿಗೆ ಮೇ 19ರಂದು ವಿಕ್ರಮ್ ಮಿಸ್ರಿ ಮಾಹಿತಿ

ಆಪರೇಷನ್ ಸಿಂಧೂರ್ ನಂತರ ಭಾರತದ ನಿಲುವನ್ನು ಜಾಗತಿಕ ಮಟ್ಟದಲ್ಲಿ ಪ್ರತಿಬಿಂಬಿಸಲು ಎನ್ ಡಿಎ ಮತ್ತು ವಿಪಕ್ಷ ಸಂಸದರನ್ನೊಳಗೊಂಡ ನಿಯೋಗ ಯುಕೆ, ಯುಎಸ್, ಯುಎಇ, ಕತಾರ್ ಮತ್ತಿತರ ರಾಷ್ಟ್ರಗಳಿಗೆ 10 ದಿನಗಳ ಭೇಟಿ ನೀಡಲಿದೆ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com