
ಲಖನೌ: ಉತ್ತರ ಪ್ರದೇಶದ ಐದು ನಗರಗಳಲ್ಲಿ ಶುಕ್ರವಾರ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಬುಂದೇಲ್‌ಖಂಡ್ ಪ್ರದೇಶದ ಬಂದಾದಲ್ಲಿ ದೇಶದ ಅತಿ ಹೆಚ್ಚು ಅಂದರೆ ಗರಿಷ್ಠ ತಾಪಮಾನ 46.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬಂದಾ ನಂತರ, ರಾಜಸ್ಥಾನದ ಗಂಗಾನಗರ 45.9 ಡಿಗ್ರಿ ಸೆಲ್ಸಿಯಸ್‌ನೊಂದಿಗೆ ಎರಡನೇ ಅತಿ ಹೆಚ್ಚು ತಾಪಮಾನವಾಗಿದೆ. ಮಧ್ಯಪ್ರದೇಶದ ಖಜುರಾಹೊ 45.8 ಡಿಗ್ರಿ ಸೆಲ್ಸಿಯಸ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ.
ಉತ್ತರ ಪ್ರದೇಶದಲ್ಲಿ, ಬಂದಾ ನಂತರ, ಪ್ರಯಾಗ್‌ರಾಜ್(45.4), ಕಾನ್ಪುರ (45.2), ಝಾನ್ಸಿ(45.1) ಮತ್ತು ವಾರಣಾಸಿ (45) ನಿವಾಸಿಗಳು ತೀವ್ರ ಶಾಖದ ಅಲೆಯಿಂದ ಬಳಲಿದ್ದಾರೆ.
ಆದಾಗ್ಯೂ, ಶನಿವಾರ ಅಲ್ಲಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಯಾದ ನಂತರ ರಾಜ್ಯದಲ್ಲಿ ಹಗಲಿನ ತಾಪಮಾನದಲ್ಲಿ ಇಳಿಕೆ ದಾಖಲಾಗಿದೆ.
ಏತನ್ಮಧ್ಯೆ, ರಾಜ್ಯದಲ್ಲಿ ತಾಪಮಾನ ತೀವ್ರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪರಿಹಾರ ಮತ್ತು ಆರೋಗ್ಯ ಇಲಾಖೆಗಳಿಗೆ ಎಚ್ಚರಿಕೆ ನೀಡಿ, ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಿದ್ದಾರೆ.
Advertisement