
ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣಾ ಕಾವು ರಂಗೇರುತ್ತಿದೆ. ಎಲ್‌ಜೆಪಿ (RV) ಮುಖ್ಯಸ್ಥ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಬಿಹಾರದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ ಎಂದು ಹೇಳಿಕೆ ಕೊಟ್ಟ ನಂತರ ಅವರ ಪಕ್ಷದ ನಾಯಕರು ಪಾಟ್ನಾದಲ್ಲಿ ಚಿರಾಗ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಬಿಂಬಿಸುವ ಪೋಸ್ಟರ್‌ಗಳನ್ನು ಹಾಕಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಪಾಟ್ನಾದ ವಿವಿಧ ಸ್ಥಳಗಳಲ್ಲಿ ರಸ್ತೆಬದಿಗಳಲ್ಲಿ ಪೋಸ್ಟರ್‌ನಲ್ಲಿ ಚಿರಾಗ್ ಮತ್ತು ನಿತೀಶ್ ಅವರ ನಡುವೆ ನಡೆದ ಮಾತುಕತೆ ಕುರಿತ ಪೋಸ್ಟರ್ ಗಳು ರಾರಾಜಿಸುತ್ತಿವೆ. ಬಿಹಾರವನ್ನು ಅಭಿವೃದ್ಧಿಪಡಿಸಿದ್ದೇವೆ, ಈಗ ನಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ" ಎಂದು ಪೋಸ್ಟರ್ ಸಾರುತ್ತವೆ. ನನ್ನ ಮೇಲೆ ನಿತೀಶ್ ಕುಮಾರ್ ಅವರಿಗೆ ಸಂಪೂರ್ಣ ನಂಬಿಕೆಯಿದೆ. ಬಿಹಾರದ ಮುಖ ಮತ್ತು ಪಾತ್ರ ಎರಡೂ ಬದಲಾಗುತ್ತದೆ, ನಾನು ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದೆ ಎಂದು ಚಿರಾಗ್ ಪಾಸ್ವಾನ್ ಹೇಳುತ್ತಾರೆ.
ಬಿಹಾರ ಅವರನ್ನು ಕರೆಯುತ್ತಿದೆ ಎಂದು ಘೋಷಿಸುವ ಮೂಲಕ ಬಿಹಾರದಲ್ಲಿ ರಾಜಕೀಯ ಮಾಡುವ ಉತ್ಸಾಹವನ್ನು ಯುವ ನಾಯಕ ಈಗಾಗಲೇ ವ್ಯಕ್ತಪಡಿಸಿರುವ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಚಿರಾಗ್ ಪಾಸ್ವಾನ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮಿತ್ರಪಕ್ಷವಾಗಿ ಸ್ಪರ್ಧಿಸಿ ತಮ್ಮ ಪಕ್ಷ ಸ್ಪರ್ಧಿಸಿದ ಐದು ಸ್ಥಾನಗಳನ್ನು ಗೆದ್ದಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಮತ್ತು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದ್ದರೂ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅಥವಾ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರು ನಿತೀಶ್ ಕುಮಾರ್ ಬಗ್ಗೆ ಪಕ್ಷದ ಕಿರಿಯ ಸಹೋದ್ಯೋಗಿಗಳ ಹೇಳಿಕೆಗಳನ್ನು ನಿಸ್ಸಂದೇಹವಾಗಿ ಅನುಮೋದಿಸುವುದಿಲ್ಲ ಎಂದು ಬಿಜೆಪಿ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಸೋಮವಾರ, ಚಿರಾಗ್ ಪಾಸ್ವಾನ್ ನಿತೀಶ್ ಕುಮಾರ್ ಅವರನ್ನು ಭೇಟಿಯಾದರು. ಅವರ ಜೊತೆ ಅವರ ಸೋದರ ಮಾವ ಮತ್ತು ಜಮುಯಿ ಸಂಸದ ಅರುಣ್ ಭಾರತಿ ಕೂಡ ಇದ್ದರು.
ಎಲ್‌ಜೆಪಿ (ಆರ್‌ವಿ) ವಿಧಾನಸಭಾ ಚುನಾವಣೆಯಲ್ಲಿ 40 ಕ್ಕೂ ಹೆಚ್ಚು ಸ್ಥಾನಗಳಿಗೆ ಬೇಡಿಕೆ ಇಡುತ್ತಿದೆ, ಹೀಗಿರುವಾಗ ಪೋಸ್ಟರ್ ನ್ನು ಬಿಜೆಪಿ ಮತ್ತು ಜೆಡಿ (ಯು) ಮೇಲೆ ಒತ್ತಡ ಹೇರಲು ಒಂದು ತಂತ್ರವೆಂದು ಪರಿಗಣಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚ್ (ಎಚ್‌ಎಎಂ) ಗೆ ಜೆಡಿ (ಯು) ಪಾಲಿನ 122 ಸ್ಥಾನಗಳಲ್ಲಿ ಏಳು ಸ್ಥಾನಗಳನ್ನು ನೀಡಲಾಯಿತು, ಆದರೆ ಬಿಜೆಪಿ ತನ್ನ ಪಾಲಿನ 121 ಸ್ಥಾನಗಳಲ್ಲಿ ವಿಕಾಸಶೀಲ ಇನ್ಸಾನ್ ಪಕ್ಷ (ವಿಐಪಿ) ಗೆ 11 ಸ್ಥಾನಗಳನ್ನು ನೀಡಿತು.
‘ನಮ್ಮ ಭವಿಷ್ಯ ನಿಮ್ಮ ಕೈಯಲ್ಲಿ’
ಪಾಟ್ನಾದ ವಿವಿಧ ಸ್ಥಳಗಳಲ್ಲಿ ರಸ್ತೆಬದಿಗಳಲ್ಲಿ ನಿರ್ಮಿಸಲಾದ ಪೋಸ್ಟರ್‌ನಲ್ಲಿ ಚಿರಾಗ್ ಪಾಸ್ವಾನ್ ಮತ್ತು ನಿತೀಶ್ ಕುಮಾರ್ ಅವರ ಫೋಟೋ ಗಳಲ್ಲಿ ಬಿಹಾರವನ್ನು ಅಭಿವೃದ್ಧಿಪಡಿಸಿದ್ದೇವೆ, ಈಗ ನಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ” ಎಂದು ಸಾರಿ ಹೇಳುತ್ತದೆ.
Advertisement