
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ಮೇ 21 ರಂದು ನುಗ್ಗಲು ಯತ್ನಿಸಿ ಬಂಧನಕ್ಕೊಳಗಾಗಿರುವ 36 ವರ್ಷದ ಇಶಾ ಛಾಬ್ರಿಯಾ ನೀಡಿರುವ ಹೇಳಿಕೆ ಇದೀಗ ತೀವ್ರ ಸಂಚಲನ ಮೂಡಿಸಿದೆ.
ಸಲ್ಮಾನ್ ಖಾನ್ ನನಗೆ ಚೆನ್ನಾಗಿ ಗೊತ್ತು. ಅವರೇ ನನ್ನನ್ನು ಮನೆಗೆ ಕರೆದಿದ್ರು ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ತನ್ನನ್ನು ಮಾಡೆಲ್ ಎಂದು ಹೇಳಿಕೊಳ್ಳುವ ಛಾಬ್ರಿಯಾ ಮೇ 21 ರಂದು ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ನುಗ್ಗಿದ್ದರು.
ಪೊಲೀಸ್ ವಿಚಾರಣೆ ವೇಳೆ ಆಕೆ, ಸುಮಾರು ಆರು ತಿಂಗಳು ಗಳಿಂದ ಸಲ್ಮಾನ್ ಖಾನ್ ನನಗೆ ಚೆನ್ನಾಗಿ ಗೊತ್ತು. ಅವರೇ ನನ್ನನ್ನು ಕರೆದಿದ್ರು. ಅವರ ಮನೆಗೆ ಮನೆ ಬಳಿ ತೆರಳಿ, ಅಪಾರ್ಟ್ ಮೆಂಟ್ ಬಾಗಿಲು ಬಡಿದಾಗ, ಅವರ ಕುಟುಂಬ ಸದಸ್ಯರೊಬ್ಬರು ಉತ್ತರಿಸಿದ್ದಾಗಿ ಆಕೆ ಆರೋಪಿಸಿದ್ದಾರೆ.
ಸಲ್ಮಾನ್ ಖಾನ್ ಅವರೇ ನನ್ನನ್ನು ಮನೆಗೆ ಕರೆದಿದ್ರು ಎಂದು ಆಕೆ ಪದೇ ಪದೇ ಹೇಳಿದ್ದಾರೆ. ಆದಾಗ್ಯೂ, ಸಲ್ಮಾನ್ ಖಾನ್ ಆ ರೀತಿಯಲ್ಲಿ ಯಾರಿಗೂ ಕರೆದಿರಲಿಲ್ಲ ಎಂಬುದು ತಿಳಿದ ನಂತರ ಮನೆಯಲ್ಲಿದ್ದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಕೆಯ ಬಂಧನದ ನಂತರ ಪೊಲೀಸ್ ವಿಚಾರಣೆ ವೇಳೆ ತನ್ನನ್ನು ಸಲ್ಮಾನ್ ಖಾನ್ ಖಾನ್ ಅವರೇ ಆಹ್ವಾನಿಸಿದ್ದರು ಎಂದು ಯುವತಿ ಹೇಳಿದ್ದಾರೆ. ಆದರೆ, ಸಲ್ಮಾನ್ ಖಾನ್ ಕುಟುಂಬ ಇದನ್ನು ಬಲವಾಗಿ ನಿರಾಕರಿಸಿದೆ.
ಮೇ 20 ರಂದು ಜೀತೇಂದ್ರ ಕುಮಾರ್ ಸಿಂಗ್ ಎಂಬಾತ ಸಲ್ಮಾನ್ ಖಾನ್ ನಿವಾಸಕ್ಕೆ ನುಗ್ಗಲು ಯತ್ನಿಸಿದ್ದರು. ಈ ಘಟನೆ ಸಂಬಂಧ ಎರಡು ಪ್ರತ್ಯೇಕ ಕೇಸ್ ಗಳನ್ನು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement