ಬಂಗಾಳ ಬಿಜೆಪಿ ಮುಖ್ಯಸ್ಥರ ಪತ್ನಿ ವಿರುದ್ಧ ಚುನಾವಣಾ ಆಯೋಗದ ತನಿಖೆ

ಒಂದು ಕಾರ್ಡ್ ನ್ನು ಅವರ ಮೊದಲ ಹೆಸರು ಕೋಯೆಲ್ ಚೌಧರಿ ಅಡಿಯಲ್ಲಿ ನೀಡಲಾಗಿದ್ದರೆ, ಎರಡನೆಯದನ್ನು ಅವರ ಮದುವೆಯ ನಂತರ ಕೋಯೆಲ್ ಮಜುಂದಾರ್ ಹೆಸರಿನಲ್ಲಿ ರಚಿಸಲಾಗಿದೆ.
Election Commission
ಚುನಾವಣಾ ಆಯೋಗ (ಸಂಗ್ರಹ ಚಿತ್ರ)online desk
Updated on

ನವದೆಹಲಿ: ಭಾರತೀಯ ಜನತಾ ಪಕ್ಷದ ಪಶ್ಚಿಮ ಬಂಗಾಳದ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರ ಪತ್ನಿ ಎರಡು ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿರುವ ದೂರಿನ ಕುರಿತು ಚುನಾವಣಾ ಆಯೋಗ (EC) ತನಿಖೆಯನ್ನು ಪ್ರಾರಂಭಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಸಚಿವರ ಪತ್ನಿ ಕೋಯೆಲ್ ಮಜುಂದಾರ್ ಅವರು ವಿಭಿನ್ನ EPIC ಸಂಖ್ಯೆಗಳನ್ನು ಹೊಂದಿರುವ ಎರಡು ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದು ಆರಂಭಿಕ ತನಿಖೆಯಲ್ಲಿ ಕಂಡುಬಂದಿದೆ, ಒಂದು ಬಳೂರ್ಘಾಟ್‌ನಲ್ಲಿ ಮತ್ತು ಇನ್ನೊಂದು ಜಲಪೈಗುರಿಯಲ್ಲಿ ನೋಂದಾಯಿಸಲಾಗಿದೆ.

ಒಂದು ಕಾರ್ಡ್ ನ್ನು ಅವರ ಮೊದಲ ಹೆಸರು ಕೋಯೆಲ್ ಚೌಧರಿ ಅಡಿಯಲ್ಲಿ ನೀಡಲಾಗಿದ್ದರೆ, ಎರಡನೆಯದನ್ನು ಅವರ ಮದುವೆಯ ನಂತರ ಕೋಯೆಲ್ ಮಜುಂದಾರ್ ಹೆಸರಿನಲ್ಲಿ ರಚಿಸಲಾಗಿದೆ.

"ಅವರು ಫಾರ್ಮ್ 18 ನ್ನು ಸಲ್ಲಿಸಿದ್ದರೆ ಇದನ್ನು ತಪ್ಪಿಸಬಹುದಿತ್ತು. ಯಾವುದೇ ಬದಲಾವಣೆಗಳನ್ನು EC ಗೆ ತಿಳಿಸುವುದು ಕಾರ್ಡ್ ಹೊಂದಿರುವವರ ಜವಾಬ್ದಾರಿಯಾಗಿದೆ. ಈ ಪ್ರಕರಣದಲ್ಲಿ, ಆಯೋಗಕ್ಕೆ ಯಾವುದೇ ಮಾಹಿತಿಯನ್ನೂ ತಿಳಿಸಲಾಗಿಲ್ಲ" ಎಂದು ಅಧಿಕಾರಿ ಹೇಳಿದ್ದಾರೆ.

ಅವರು ಫಾರ್ಮ್ 6 ಅನ್ನು ಸಲ್ಲಿಸಿದ ನಂತರ ಬಳೂರ್ಘಾಟ್‌ನಲ್ಲಿ ಹೊಸ ಮತದಾರರ ಕಾರ್ಡ್ ನೀಡಲಾಗಿದೆ ಎಂದು ಅಧಿಕಾರಿ ಮತ್ತಷ್ಟು ವಿವರಿಸಿದ್ದಾರೆ.

"ಎಪಿಐಸಿ ಸಂಖ್ಯೆಗಳು ಮತ್ತು ಉಪನಾಮಗಳು ವಿಭಿನ್ನವಾಗಿರುವುದರಿಂದ, ದೋಷವು ತಕ್ಷಣವೇ ಪತ್ತೆಯಾಗಿಲ್ಲ. ಗುರುತನ್ನು ದೃಢೀಕರಿಸಲು ನಾವು ಈಗ ಛಾಯಾಚಿತ್ರಗಳು ಮತ್ತು ಇತರ ವೈಯಕ್ತಿಕ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ" ಎಂದು ಆಯೋಗದ ಅಧಿಕಾರಿ ಹೇಳಿದ್ದಾರೆ.

Election Commission
ದೇಶಾದ್ಯಂತ ಸರ್ವಪಕ್ಷ ಸಭೆ: 4000 ಕ್ಕೂ ಹೆಚ್ಚು ಇಆರ್‌ಒಗಳು, 36 ಸಿಇಒಗಳು ಮತ್ತು 788 ಡಿಇಒಗಳ ನಿಯೋಜಿಸಿದ ಚುನಾವಣಾ ಆಯೋಗ

ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಅಗರ್ವಾಲ್, ಜಲಪೈಗುರಿ ಮತ್ತು ದಕ್ಷಿಣ ದಿನಾಜ್‌ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಈ ವಿಷಯದ ಬಗ್ಗೆ ಸಾಧ್ಯವಾದಷ್ಟು ಬೇಗ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com