'ಇಂತಹ ಬೇವಕೂಫ್ ಜೋಕರ್ ಗಳು ಭಾರತದೊಂದಿಗೆ ಯುದ್ಧ ಮಾಡ್ತಾರಂತೆ.. ಹೇಗಿದೆ ನೋಡಿ'?: Kuwaitನಲ್ಲಿ Asaduddin Owaisi; ಪಾಕಿಸ್ತಾನ ಫುಲ್ ರೋಸ್ಟ್!

2019ರಲ್ಲಿ ಚೀನಾದ ಮಿಲಿಟರಿ ತರಬೇತಿ ಚಿತ್ರವನ್ನು ತೋರಿಸಿ ಅದನ್ನು ಆಪರೇಷನ್ ಸಿಂಧೂರ ವಿರುದ್ಧದ ಪಾಕ್ ಸೇನಾ ಕಾರ್ಯಾಚರಣೆ ಎಂದು ಹೇಳುತ್ತಿರುವ ಈ ಮೂರ್ಖ ಜೋಕರ್‌ಗಳು ಭಾರತದ ವಿರುದ್ಧ ಸ್ಪರ್ಧಿಸಲು ಬಯಸುತ್ತಿದ್ದಾರೆ.
A Owaisi Rips Into Pak Army Chief Over Fake Photo Row
ಕುವೈತ್ ನಲ್ಲಿ ಅಸಾದುದ್ದೀನ್ ಒವೈಸಿ
Updated on
Summary

ಕುವೈತ್‌ನಲ್ಲಿ ಅಸಾದುದ್ದೀನ್ ಓವೈಸಿ, ಪಾಕಿಸ್ತಾನವನ್ನು ಮೂರ್ಖ ಜೋಕರ್‌ಗಳೆಂದು ಕರೆದಿದ್ದಾರೆ. ಚೀನಾದ ಮಿಲಿಟರಿ ಚಿತ್ರವನ್ನು ಭಾರತದ ವಿರುದ್ಧದ ಗೆಲುವು ಎಂದು ಬಿಂಬಿಸಿದ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದು, ಪಾಕಿಸ್ತಾನ-ಭಾರತ ಸಂಘರ್ಷವನ್ನು 'ಪಾಕಿಸ್ತಾನ ಸೃಷ್ಟಿಸಿದ ಸಮಸ್ಯೆ' ಎಂದು ಕರೆದಿದ್ದಾರೆ.

ಕುವೈತ್: 2019ರಲ್ಲಿ Operation Bunyan-un-Marsoos ಹೇಸರಿನಲ್ಲಿ ಚೀನಾ ನಡೆಸಿದ ಮಿಲಿಟರಿ ತರಬೇತಿ ಚಿತ್ರವನ್ನುತೋರಿಸಿ ಅದನ್ನು ಆಪರೇಷನ್ ಸಿಂಧೂರ ವಿರುದ್ಧ ಕಾರ್ಯಾಚರಣೆ ಎಂದು ಬಿಂಬಿಸಿದ್ದ ಪಾಕಿಸ್ತಾನಕ್ಕೆ AIMIM ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಖಡಕ್ ತಿರುಗೇಟು ನೀಡಿದ್ದು, 'ಇಂತಹ ಬೇವಕೂಫ್ ಜೋಕರ್ ಗಳು ಭಾರತದೊಂದಿಗೆ ಯುದ್ಧ ಮಾಡ್ತಾರಂತೆ.. ಹೇಗಿದೆ ನೋಡಿ'? ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಉಗ್ರ ದಾಳಿ ಮತ್ತು ಬಳಿಕ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ಜಾಗತಿಕ ಸಮುದಾಯಕ್ಕೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕುವೈತ್‌ನಲ್ಲಿರುವ ವಲಸಿಗ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಪಾಕಿಸ್ತಾನದ ಸರ್ಕಾರ ಮತ್ತು ಸೇನೆ ವಿರುದ್ಧ ಇನ್ನಿಲ್ಲದಂತೆ ವಾಗ್ದಾಳಿ ನಡೆಸಿದರು.

ಪಾಕಿಸ್ತಾನ ಅಧ್ಯಕ್ಷ ಶಹಬಾಶ್ ಷರೀಫ್ ಮತ್ತು ಪಾಕ್ ಸೇನಾ ಮುಖ್ಯಸ್ಥ ಮುನೀರ್ ರನ್ನು ಮೂರ್ಖ ಜೋಕರ್ (Stupid Jokers)ಗಳು ಎಂದು ಕರೆದ ಒವೈಸಿ ಇಂತಹ ಜೋಕರ್ ಗಳು ಭಾರತದಂತಹ ಬಲಿಷ್ಠ ರಾಷ್ಟ್ರದೊಂದಿಗೆ ಯುದ್ಧ ಮಾಡ್ತಾರಂತೆ.. ಹೇಗಿದೆ ನೋಡಿ ಎಂದು ವ್ಯಂಗ್ಯ ಮಾಡಿದರು.

A Owaisi Rips Into Pak Army Chief Over Fake Photo Row
ಪಾಕ್-ಭಾರತದ ನಡುವೆ ಕದನ ವಿರಾಮ: US ಗೆ ಧನ್ಯವಾದ ಹೇಳಬೇಕೆ?; ಪತ್ರಕರ್ತರ ಪ್ರಶ್ನೆಗೆ ಜೈಶಂಕರ್ ಪ್ರತಿಕ್ರಿಯೆ ಏನಿತ್ತು?

2019ರಲ್ಲಿ ಚೀನಾದ ಮಿಲಿಟರಿ ತರಬೇತಿ ಚಿತ್ರವನ್ನು ತೋರಿಸಿ ಅದನ್ನು ಆಪರೇಷನ್ ಸಿಂಧೂರ ವಿರುದ್ಧದ ಪಾಕ್ ಸೇನಾ ಕಾರ್ಯಾಚರಣೆ ಎಂದು ಹೇಳುತ್ತಿರುವ ಈ ಮೂರ್ಖ ಜೋಕರ್‌ಗಳು ಭಾರತದ ವಿರುದ್ಧ ಸ್ಪರ್ಧಿಸಲು ಬಯಸುತ್ತಿದ್ದಾರೆ. ಭಾರತದ ವಿರುದ್ಧದ ವಿಜಯದ ಪುರಾವೆಯಾಗಿ ಚೀನಾದ ಹಳೆಯ ಮಿಲಿಟರಿ ತರಬೇತಿ ಚಿತ್ರವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಒವೈಸಿ ಪಾಕಿಸ್ತಾನವನ್ನು ಲೇವಡಿ ಮಾಡಿದರು.

ಕಾಪಿ ಮಾಡಲೂ ಕೂಡ ಬುದ್ಧಿವಂತಿಕೆ ಬೇಕು

ನಿನ್ನೆ ಪಾಕಿಸ್ತಾನಿ ಸೇನಾ ಮುಖ್ಯಸ್ಥರು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್‌ಗೆ ಚಿತ್ರವನ್ನು ನೀಡಿದ್ದಾರೆ... ಈ ಮೂರ್ಖ ಜೋಕರ್‌ಗಳು ಭಾರತದೊಂದಿಗೆ ಸ್ಪರ್ಧಿಸಲು ಬಯಸುತ್ತಾರೆ. ಅವರು 2019 ರಲ್ಲಿ ಚೀನಾ ಸೇನೆಯ ಮಿಲಿಟರಿ ವ್ಯಾಯಾಮದ ಚಿತ್ರವನ್ನು ನೀಡಿದ್ದರು ಮತ್ತು ಅದು ಭಾರತದ ವಿರುದ್ಧದ ಗೆಲುವು ಎಂದು ಹೇಳಿಕೊಂಡಿದ್ದರು. ಪಾಕಿಸ್ತಾನ ಮಾಡುವುದು ಇದನ್ನೇ. ನಕಲಿಸಲು ಬುದ್ಧಿವಂತಿಕೆ ಬೇಕು. ಅವರಿಗೆ ಗುಪ್ತಚರ ಮಾಹಿತಿಯೂ ಇಲ್ಲ. ಪಾಕಿಸ್ತಾನ ಏನು ಮಾಡುತ್ತಿದೆಯೋ ಅದನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ಒವೈಸಿ ಹೇಳಿದರು.

ಸೇನಾ ಸಂಘರ್ಷ 'ಪಾಕಿಸ್ತಾನ ಸೃಷ್ಟಿಸಿದ ಸಮಸ್ಯೆ'

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ನೈಜ ಮುಖವನ್ನು ಬಹಿರಂಗಪಡಿಸಲು ವಿದೇಶ ಪ್ರವಾಸದಲ್ಲಿರುವ ಸರ್ವಪಕ್ಷ ನಿಯೋಗದ ಭಾಗವಾಗಿರುವ AIMIM ನಾಯಕ ಓವೈಸಿ. ಇದಕ್ಕೂ ಮೊದಲು ಬಹ್ರೇನ್‌ನಲ್ಲಿ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು. ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷವನ್ನು 'ಪಾಕಿಸ್ತಾನ ಸೃಷ್ಟಿಸಿದ ಸಮಸ್ಯೆ' ಎಂದು ಒವೈಸಿ ಕರೆದರು.

'ಕಳೆದ ಹಲವಾರು ವರ್ಷಗಳಿಂದ ಭಾರತ ಎದುರಿಸುತ್ತಿರುವ ಬೆದರಿಕೆಯನ್ನು ಜಗತ್ತಿಗೆ ತಿಳಿಸಲು ನಮ್ಮ ಸರ್ಕಾರ ನಮ್ಮನ್ನು ಇಲ್ಲಿಗೆ ಕಳುಹಿಸಿದೆ. ದುರದೃಷ್ಟವಶಾತ್, ನಾವು ಅನೇಕ ಮುಗ್ಧ ಜನರ ಜೀವಗಳನ್ನು ಕಳೆದುಕೊಂಡಿದ್ದೇವೆ. ಈ ಸಮಸ್ಯೆ ಪಾಕಿಸ್ತಾನದಿಂದ ಹುಟ್ಟಿಕೊಂಡಿದೆ ಮತ್ತು ಯಾವಾಗಲೂ ಸಂಭವಿಸುತ್ತದೆ. ಪಾಕಿಸ್ತಾನ ಈ ಭಯೋತ್ಪಾದಕ ಗುಂಪುಗಳನ್ನು ಉತ್ತೇಜಿಸುವುದು, ಸಹಾಯ ಮಾಡುವುದು ಮತ್ತು ಪ್ರಾಯೋಜಿಸುವುದನ್ನು ನಿಲ್ಲಿಸದ ಹೊರತು, ಈ ಸಮಸ್ಯೆ ದೂರವಾಗುವುದಿಲ್ಲ. ಅವರು ಮುಂದಿನ ಬಾರಿ ಧೈರ್ಯ ಮಾಡಿದರೆ, ನಾವು ಇದೇ ರೀತಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆ...' ಎಂದು ಹೇಳಿದರು.

ಭಾರತೀಯರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ

ಪ್ರತಿಯೊಬ್ಬ ಭಾರತೀಯನ ಜೀವವನ್ನು ರಕ್ಷಿಸಲು ನಮ್ಮ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಮುಂದಿನ ಬಾರಿ ಪಾಕಿಸ್ತಾನ ಇದನ್ನು ಮಾಡಲು ಧೈರ್ಯ ಮಾಡಿದರೆ, ಈ ಪ್ರತೀಕಾರವು ಅವರ ನಿರೀಕ್ಷೆಗಳನ್ನು ಮೀರುತ್ತದೆ. ಭಾರತ ಪದೇ ಪದೇ ಗರಿಷ್ಠ ಸಂಯಮವನ್ನು ತೋರಿಸಿದೆ. ನಮ್ಮ ಸಂಯಮ ಮತ್ತು ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ ಎಂದು ಓವೈಸಿ ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com