1995 ರಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದು ಪಾಕಿಸ್ತಾನಕ್ಕೆ ಭಾರತದ ಪರಮಾಣು ಶಸ್ತ್ರಾಸ್ತ್ರಗಳ ಡೇಟಾ ರವಾನೆ; ನಕಲಿ ವಿಜ್ಞಾನಿ ಅಖ್ತರ್ ಹುಸೇನಿ ಬಂಧನ!

ಮುಂಬೈ ಪೊಲೀಸರ ಅಪರಾಧ ವಿಭಾಗದ ಮೂಲಗಳ ಪ್ರಕಾರ, ಹುಸೇನಿ ಸಹೋದರರು 1995 ರಲ್ಲಿ ವಿದೇಶಿ ಹಣವನ್ನು ಸ್ವೀಕರಿಸಲು ಪ್ರಾರಂಭಿಸಿದ್ದರು.
Akhtar Hussaini
ಅಖ್ತರ್ ಹುಸೇನಿonline desk
Updated on

ಮುಂಬೈ: ಬಾಬಾ ಪರಮಾಣು ಸಂಶೋಧನಾ ಕೇಂದ್ರದ (BARC) ವಿಜ್ಞಾನಿ ಎಂದು ಹೇಳಿಕೊಂಡು ಸೂಕ್ಷ್ಮ ಪರಮಾಣು ದತ್ತಾಂಶ ವಿನಿಮಯಕ್ಕಾಗಿ ಕೋಟ್ಯಂತರ ವಿದೇಶಿ ಹಣವನ್ನು ಪಡೆದಿದ್ದಕ್ಕಾಗಿ 60 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

BARC ವಿಜ್ಞಾನಿ ಎಂದು ಸುಳ್ಳು ಹೇಳಿಕೊಂಡು ದೇಶಾದ್ಯಂತ ಪ್ರಯಾಣಿಸಿದ್ದಕ್ಕಾಗಿ ಅಖ್ತರ್ ಹುಸೇನಿ ಅವರನ್ನು ಕಳೆದ ತಿಂಗಳು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್‌ನ ಜಮ್ಶೆಡ್‌ಪುರದ ನಿವಾಸಿ ಹುಸೇನಿ ಅವರಿಂದ 10 ಕ್ಕೂ ಹೆಚ್ಚು ನಕ್ಷೆಗಳು ಮತ್ತು ಪರಮಾಣು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಡೇಟಾವನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಹಲವಾರು ನಕಲಿ ಪಾಸ್‌ಪೋರ್ಟ್‌ಗಳು, ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳು ಮತ್ತು ನಕಲಿ BARC ಐಡಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಒಂದು ಐಡಿ ಈ ವ್ಯಕ್ತಿಯನ್ನು ಅಲಿ ರಜಾ ಹುಸೇನ್ ಎಂದು ಗುರುತಿಸಿದರೆ. ಇನ್ನೊಂದು ಐಡಿಯಲ್ಲಿ ಅಲೆಕ್ಸಾಂಡರ್ ಪಾಮರ್ ಎಂದು ಹೆಸರಿಸಲಾಗಿದೆ. ಇನ್ನು ಹುಸೇನಿಯ ಸಹೋದರ ಆದಿಲ್ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.

ಮುಂಬೈ ಪೊಲೀಸರ ಅಪರಾಧ ವಿಭಾಗದ ಮೂಲಗಳ ಪ್ರಕಾರ, ಹುಸೇನಿ ಸಹೋದರರು 1995 ರಲ್ಲಿ ವಿದೇಶಿ ಹಣವನ್ನು ಸ್ವೀಕರಿಸಲು ಪ್ರಾರಂಭಿಸಿದ್ದರು.

ಆರಂಭದಲ್ಲಿ, ಅವರಿಗೆ ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿತ್ತು, ಆದರೆ 2000 ರ ನಂತರ, ಅವರಿಗೆ ಕೋಟಿಗಳನ್ನು ನೀಡಲಾಯಿತು. ಬಿಎಆರ್‌ಸಿ ಮತ್ತು ಇತರ ಪರಮಾಣು ಸ್ಥಾವರಗಳಿಗೆ ಸಂಬಂಧಿಸಿದ ರಹಸ್ಯ ನೀಲನಕ್ಷೆಗಳಿಗೆ ಬದಲಾಗಿ ಈ ಹಣವನ್ನು ಪಾವತಿಸಲಾಗಿದೆ ಎಂದು ಶಂಕಿಸಲಾಗಿದೆ.

ತನಿಖೆಯ ಸಮಯದಲ್ಲಿ, ಪೊಲೀಸರು ಅಖ್ತರ್ ಹುಸೇನಿ ಹೆಸರಿನಲ್ಲಿ ಖಾಸಗಿ ಬ್ಯಾಂಕ್ ಖಾತೆಯನ್ನು ಸಹ ಪತ್ತೆಹಚ್ಚಿದರು, ಅದು ಅನುಮಾನಾಸ್ಪದ ವಹಿವಾಟುಗಳನ್ನು ಕಂಡಿತ್ತು. ನಿಖರವಾದ ಮೊತ್ತ ಮತ್ತು ಹಣಕಾಸಿನ ಮೂಲವನ್ನು ಪತ್ತೆ ಮಾಡಲು ಪೊಲೀಸರು ಬ್ಯಾಂಕಿನಿಂದ ಸಂಪೂರ್ಣ ವಹಿವಾಟು ವಿವರಗಳನ್ನು ಕೋರಿದ್ದಾರೆ.

ಇಬ್ಬರು ಸಹೋದರರು ಬಳಸಿದ ಹಲವಾರು ಇತರ ಬ್ಯಾಂಕ್ ಖಾತೆಗಳನ್ನು ಸಹ ಈಗ ಬಂದ್ ಮಾಡಲಾಗಿದೆ. ಸಂಪೂರ್ಣ ಹಣದ ಜಾಡು ಸ್ಥಾಪಿಸಲು ಪೊಲೀಸರು ಹಳೆಯ ಖಾತೆಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಇಬ್ಬರು ಸಹೋದರರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗೆ ಸಂಪರ್ಕ ಹೊಂದಿರಬಹುದು ಎಂದು ಶಂಕಿಸಲಾಗಿದೆ.

ಅಖ್ತರ್ ತನ್ನ ಗುರುತನ್ನು ಬದಲಾಯಿಸುತ್ತಿದ್ದ ಮತ್ತು ವೇಷ ಧರಿಸಿ ವಾಸಿಸುತ್ತಿದ್ದ. 2004 ರಲ್ಲಿ, "ರಹಸ್ಯ ದಾಖಲೆಗಳನ್ನು ಹೊಂದಿರುವ ವಿಜ್ಞಾನಿ" ಎಂದು ಹೇಳಿಕೊಂಡ ನಂತರ ಅವರನ್ನು ದುಬೈನಿಂದ ಗಡೀಪಾರು ಮಾಡಲಾಯಿತು.

ಅವರು 1996 ರಲ್ಲಿ ಜಾರ್ಖಂಡ್‌ನಲ್ಲಿರುವ ಪೂರ್ವಜರ ಮನೆಯನ್ನು ಮಾರಾಟ ಮಾಡಿದರು ಆದರೆ ಅವರ ಹಳೆಯ ಸಂಪರ್ಕಗಳ ಸಹಾಯದಿಂದ ನಕಲಿ ದಾಖಲೆಗಳನ್ನು ಪಡೆಯುವುದನ್ನು ಮುಂದುವರೆಸಿದರು ಎಂದು ಮೂಲಗಳು ತಿಳಿಸಿವೆ.

Akhtar Hussaini
Watch | ರಷ್ಯಾ, ಚೀನಾ ರಹಸ್ಯ ಪರಮಾಣು ಪರೀಕ್ಷೆ! ಪಾಕಿಸ್ತಾನ ನ್ಯುಕ್ಲಿಯರ್ ಟೆಸ್ಟ್ ಮಾಡಿಲ್ವಾ? ಟ್ರಂಪ್ ಹೇಳಿದ್ದು ಹೀಗೆ..

ನಂತರ ಆದಿಲ್ ಅವನನ್ನು ಜಾರ್ಖಂಡ್ ನಿವಾಸಿ ಮುನಾಝಿಲ್ ಖಾನ್‌ಗೆ ಪರಿಚಯಿಸಿದ್ದನು, ಅವನು ಹುಸೇನಿ ಮೊಹಮ್ಮದ್ ಆದಿಲ್ ಮತ್ತು ನಸಿಮುದ್ದೀನ್ ಸೈಯದ್ ಆದಿಲ್ ಹುಸೇನಿ ಹೆಸರಿನಲ್ಲಿ ಎರಡು ನಕಲಿ ಪಾಸ್‌ಪೋರ್ಟ್‌ಗಳನ್ನು ಮಾಡಿಸಿಕೊಂಡನು.

ಪಾಸ್‌ಪೋರ್ಟ್‌ಗಳಲ್ಲಿ ಉಲ್ಲೇಖಿಸಲಾದ ವಿಳಾಸವು ಸುಮಾರು 30 ವರ್ಷಗಳ ಹಿಂದೆ ಮಾರಾಟವಾದ ಜಮ್ಶೆಡ್‌ಪುರದಲ್ಲಿರುವ ಅವರ ಮನೆಗೆ ಸೇರಿತ್ತು. ಇಬ್ಬರು ಸಹೋದರರು ವಿದೇಶ ಪ್ರವಾಸ ಮಾಡಲು ಈ ನಕಲಿ ದಾಖಲೆಗಳು ಮತ್ತು ನಕಲಿ ಗುರುತುಗಳನ್ನು ಬಳಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com