

ಜೈಪುರ: ಮೊಬೈಲ್ ಗೇಮ್ ಆಡಿದ್ದಕ್ಕೆ ತಂದೆ ಬೈದಿದ್ದರಿಂದ ಬೇಸತ್ತ 13 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಧೋಲ್ಪುರ ಜಿಲ್ಲೆಯ ಕುರೇಂದ್ರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ತಂದೆ ಗದರಿಸಿದ್ದರಿಂದ ಕೋಪಗೊಂಡ ವಿಷ್ಣು, ತನ್ನ ಕೋಣೆಗೆ ಹೋಗಿದ್ದಾನೆ. ಮನೆಯವರು ಊಟಕ್ಕೆ ಕರೆದಾಗ ಆತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಪರಿಶೀಲಿಸಿದಾಗ 8ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆ ವೇಳೆಗಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಮೊಬೈಲ್ ಗೇಮ್ ಆಡಿದ್ದಕ್ಕಾಗಿ ತನ್ನ ತಂದೆ ಗದರಿಸಿದ್ದಕ್ಕಾಗಿ ಬಾಲಕ ಬೇಸರ ಮಾಡಿಕೊಂಡಿದ್ದನು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement