ದೆಹಲಿ: ರಿಥಾಲಾ ಮೆಟ್ರೋ ನಿಲ್ದಾಣದ ಬಳಿ ಅಗ್ನಿ ಅವಘಡ; ನೂರಾರು ಗುಡಿಸಲುಗಳು ಸುಟ್ಟು ಭಸ್ಮ; ಓರ್ವ ಸಾವು

ಸ್ಥಳೀಯರು ತಮ್ಮ ವಸ್ತುಗಳನ್ನು ಉಳಿಸಲು ಮತ್ತು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಹರಸಾಹಸ ಪಡುತ್ತಿದ್ದಾಗ ಆ ಪ್ರದೇಶದಿಂದ ದಟ್ಟವಾದ ಹೊಗೆ ಏರುತ್ತಿರುವುದು ಕಂಡುಬಂದಿದೆ.
A woman stands amid charred remains after a fire broke out spreading to around 500 shanties near Rithala metro station, at Rohini area, in New Delhi, early Saturday
ಸುಟ್ಟು ಕರಕಲಾದ ಗುಡಿಸಲುಗಳನ್ನು ನೋಡುತ್ತಿರುವ ನಿವಾಸಿಗಳು
Updated on

ನವದೆಹಲಿ: ದೆಹಲಿಯ ರೋಹಿಣಿಯಲ್ಲಿರುವ ರಿಥಾಲಾ ಮೆಟ್ರೋ ನಿಲ್ದಾಣದ ಬಳಿ ಸುಮಾರು 500 ಗುಡಿಸಲುಗಳಿಗೆ ಬೆಂಕಿ ತಗುಲಿ, ಒಬ್ಬ ವ್ಯಕ್ತಿ ಮೃತಪಟ್ಟು ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳು (DFS) ತಿಳಿಸಿವೆ.

ಅಗ್ನಿಶಾಮಕ ದಳದ ಉನ್ನತ ಅಧಿಕಾರಿಗಳ ಪ್ರಕಾರ, ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ರಿಥಾಲಾ ಮೆಟ್ರೋ ನಿಲ್ದಾಣದ ಬಳಿಯ ರೋಹಿಣಿ ಸೆಕ್ಟರ್ -5 ರ ದೆಹಲಿ ಜಲ ಮಂಡಳಿ ಸಿಬ್ಬಂದಿ ಕ್ವಾರ್ಟರ್ಸ್ ಬಳಿಯ ಜುಗ್ಗಿಸ್‌ನಲ್ಲಿ LPG ಸಿಲಿಂಡರ್‌ಗಳು ಸ್ಫೋಟಗೊಂಡಿವೆ ಎಂದು ಹೇಳಲಾಗಿದ್ದು, ಬೆಂಕಿ ತೀವ್ರಗೊಂಡು ಸುತ್ತಮುತ್ತಲ ನಿವಾಸಿಗಳಲ್ಲಿ ಭೀತಿ ಉಂಟಾಯಿತು.

ಸ್ಥಳೀಯರು ತಮ್ಮ ವಸ್ತುಗಳನ್ನು ಉಳಿಸಲು ಮತ್ತು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಹರಸಾಹಸ ಪಡುತ್ತಿದ್ದಾಗ ಆ ಪ್ರದೇಶದಿಂದ ದಟ್ಟವಾದ ಹೊಗೆ ಏರುತ್ತಿರುವುದು ಕಂಡುಬಂದಿದೆ.

ನಿವಾಸಿಗಳಲ್ಲಿ ಒಬ್ಬರಾದ ಮುನ್ನಾ ಬೆಂಕಿಗೆ ಬಲಿಯಾದರೆ, ರಾಜೇಶ್ (30ವ) ಎಂದು ಗುರುತಿಸಲಾದ ಮತ್ತೊಬ್ಬ ವ್ಯಕ್ತಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಹಲವಾರು ಅಗ್ನಿಶಾಮಕ ದಳಗಳು ಮತ್ತು ಅಗ್ನಿಶಾಮಕ ರೋಬೋಟ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು DFS ತಿಳಿಸಿದೆ.

ಪೊಲೀಸರು ಪ್ರದೇಶವನ್ನು ಸುತ್ತುವರೆದಿದ್ದಾರೆ. ಬೆಂಕಿ ಮತ್ತಷ್ಟು ಹರಡದಂತೆ ತಡೆಯಲು ಹೆಚ್ಚುವರಿ ಅಗ್ನಿಶಾಮಕ ದಳಗಳನ್ನು ಸಿದ್ಧವಾಗಿ ಇರಿಸಲಾಗಿದೆ. ಬೆಳಗಿನ ಜಾವದ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಡಿಎಫ್‌ಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com