

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ 2025ರ 2ನೇ ಹಂತದ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ವರೆಗೂ ಶೇ.31.38ರಷ್ಟು ಮತದಾನವಾಗಿದೆ.
ಬಿಹಾರ ವಿಧಾನಸಭೆಯ 122 ಕ್ಷೇತ್ರಗಳಿಗೆ ನವೆಂಬರ್ 11 (ಮಂಗಳವಾರ) 2ನೇ ಹಾಗೂ ಅಂತಿಮ ಹಂತದ ಚುನಾವಣೆ ನಡೆಯುತ್ತಿದೆ.
ಬಿಹಾರದಲ್ಲಿ 2025 ರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದ್ದು, ರಾಜ್ಯದ 20 ಜಿಲ್ಲೆಗಳ 122 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.
20 ಜಿಲ್ಲೆಗಳ ಪೈಕಿ, ಗಯಾ ಜಿಲ್ಲೆಯಲ್ಲಿ ಶೇ. 15.97 ರಷ್ಟು ಅತಿ ಹೆಚ್ಚು ಮತದಾನವಾಗಿದ್ದು, ಕಿಶನ್‌ಗಂಜ್‌ನಲ್ಲಿ ಶೇ. 15.81 ರಷ್ಟು ಮತ್ತು ಜಮುಯಿಯಲ್ಲಿ ಶೇ. 15.77 ರಷ್ಟು ಮತದಾನವಾಗಿದೆ. ಮಧುಬನಿಯಲ್ಲಿ ಶೇ. 13.25 ರಷ್ಟು ಮತದಾನ ದಾಖಲಾಗಿದೆ.
ಬೆಳಿಗ್ಗೆ 11 ಗಂಟೆಯ ಹೊತ್ತಿಗೆ, ಅರಾರಿಯಾದಲ್ಲಿ ಶೇ.15.34, ಅರ್ವಾಲ್‌ನಲ್ಲಿ ಶೇ.14.95, ಔರಂಗಾಬಾದ್‌ನಲ್ಲಿ ಶೇ.15.43, ಬಂಕಾದಲ್ಲಿ ಶೇ.15.14, ಭಾಗಲ್ಪುರದಲ್ಲಿ ಶೇ.13.43, ಜಹಾನಾಬಾದ್‌ನಲ್ಲಿ ಶೇ.13.81, ಕೈಮೂರ್ (ಭಾಬುವಾ) ಶೇ.15.08, ಕತಿಹಾರ್‌ನಲ್ಲಿ ಶೇ.13.77, ನವಾಡಾದಲ್ಲಿ ಶೇ.13.46, ಪಶ್ಚಿಮ ಚಂಪಾರಣ್‌ನಲ್ಲಿ ಶೇ.15.04, ಪೂರ್ಣಿಯಾದಲ್ಲಿ ಶೇ.15.54, ಪೂರ್ವಿ ಚಂಪಾರಣ್‌ನಲ್ಲಿ ಶೇ.14.11, ರೋಹ್ತಾಸ್‌ನಲ್ಲಿ ಶೇ.14.16, ಶಿಯೋಹರ್‌ನಲ್ಲಿ ಶೇ.13.94, ಸೀತಾಮರ್ಹಿಯಲ್ಲಿ ಶೇ.13.49 ಮತ್ತು ಸುಪೌಲ್‌ನಲ್ಲಿ ಶೇ.14.85 ರಷ್ಟು ಮತದಾನ ದಾಖಲಾಗಿದೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಡುವೆ ತೀವ್ರ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದು, ಎರಡನೇ ಹಂತದಲ್ಲಿ ಒಟ್ಟು 3.7 ಕೋಟಿ ಜನ ಮತಚಲಾಯಿಸಲಿದ್ದಾರೆ. 1,302 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇದ್ದಾರೆ. 122 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 45,399 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.
Advertisement