Bihar polls: ಮಹಿಳೆಯರು, ಮುಸ್ಲಿಮರಿಂದ ದಾಖಲೆಯ ಮತದಾನ; ಇದರ ಲಾಭ ಯಾರಿಗೆ? ವರದಿ ಹೇಳುವುದೇನು?

ಭಾರತೀಯ ಚುನಾವಣಾ ಆಯೋಗ (ECI) ಬಿಡುಗಡೆ ಮಾಡಿರುವ ಪರಿಷ್ಕೃತ ದತ್ತಾಂಶದ ಪ್ರಕಾರ, ಸದ್ಯದ ಚುನಾವಣೆಯಲ್ಲಿ ಶೇ 69.1 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
Voters wait in a queue to cast votes at a polling station during the first phase of the Bihar Assembly elections, at Danapur in Patna
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಪಾಟ್ನಾದ ದಾನಾಪುರದಲ್ಲಿರುವ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿದ್ದ ಮತದಾರರು.
Updated on

ಪಾಟ್ನಾ: 2025ರ ಬಿಹಾರ ವಿಧಾನಸಭಾ ಚುನಾವಣೆಗೆ ಎರಡು ಹಂತಗಳಲ್ಲಿ ನಡೆದ ಮತದಾನದಲ್ಲಿ ದಾಖಲೆಯ ಒಟ್ಟಾರೆ ಶೇ 66.91 ರಷ್ಟು ಮತ ಚಲಾವಣೆಯಾಗಿದ್ದು, ಇತಿಹಾಸದ ಪುಟಗಳಲ್ಲಿ ಸೇರಿದೆ. ದಾಖಲೆಯ ಮತದಾನವು ಬಿಜೆಪಿ-ಜೆಡಿಯು ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಅಥವಾ ವಿರೋಧ ಪಕ್ಷಗಳ ಇಂಡಿಯಾ ಬಣಕ್ಕೆ ಲಾಭವಾಗುತ್ತದೆಯೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.

ಭಾರತೀಯ ಚುನಾವಣಾ ಆಯೋಗ (ECI) ಬಿಡುಗಡೆ ಮಾಡಿರುವ ಪರಿಷ್ಕೃತ ದತ್ತಾಂಶದ ಪ್ರಕಾರ, ಸದ್ಯದ ಚುನಾವಣೆಯಲ್ಲಿ ಶೇ 69.1 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮತದಾನವು 2020ರ ವಿಧಾನಸಭಾ ಚುನಾವಣೆಗಿಂತ ಸುಮಾರು ಶೇ 12 ರಷ್ಟು ಹೆಚ್ಚಾಗಿದೆ.

ಶೇ 71.6ರಷ್ಟು ಮಹಿಳಾ ಮತದಾರರು ಮತದಾನ ಮಾಡಿದ್ದಾರೆಂದು ಅಂದಾಜಿಸಲಾಗಿದೆ. 2020ರಲ್ಲಿ ಶೇ 59.7ರಷ್ಟು ಮತ ಚಲಾಯಿಸಿದ್ದರು. ಈ ಬಾರಿ ಶೇ 12 ರಷ್ಟು ಏರಿಕೆಯಾಗಿದೆ. ಮತ್ತೊಂದೆಡೆ, ಈ ಬಾರಿ ಶೇ 62.8ರಷ್ಟು ಪುರುಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಳೆದ ಬಾರಿ ಶೇ 54.45 ರಷ್ಟು ಮಂದಿ ಮತದಾನ ಮಾಡಿದ್ದರು.

ಮಹಿಳಾ ಮತದಾರರ ಸಂಖ್ಯೆ ಹೆಚ್ಚಲು ಕಾರಣ

ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ 2005ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮಹಿಳೆಯರಿಗಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಜಾತಿ-ತಟಸ್ಥ ಮಹಿಳೆಯರ ಕ್ಷೇತ್ರವನ್ನು ಸೃಷ್ಟಿಸಿದ್ದಾರೆ.

ಇವುಗಳಲ್ಲಿ ಪಂಚಾಯತ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ, ವಿದ್ಯಾರ್ಥಿನಿಯರಿಗೆ ಬೈಸಿಕಲ್ ಮತ್ತು ಸಮವಸ್ತ್ರ ಯೋಜನೆ, ಸರ್ಕಾರಿ ಉದ್ಯೋಗಗಳಲ್ಲಿ ಶೇ 35ರಷ್ಟು ಮೀಸಲಾತಿ ಮತ್ತು ಇತ್ತೀಚೆಗೆ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯಡಿಯಲ್ಲಿ 10,000 ರೂ.ಗಳು ಸೇರಿವೆ.

Voters wait in a queue to cast votes at a polling station during the first phase of the Bihar Assembly elections, at Danapur in Patna
ಬಿಹಾರ ಚುನಾವಣೆಯಲ್ಲಿ NDA ಗೆಲುವು: ಎಕ್ಸಿಟ್ ಪೋಲ್ ಭವಿಷ್ಯವಾಣಿ ಸುಳ್ಳು- ಆರ್‌ಜೆಡಿ ನಾಯಕ ತೇಜಸ್ವಿ ಯಾದವ್

2015ರಲ್ಲಿ ನಿತೀಶ್ ಕುಮಾರ್ NDA ಯೊಂದಿಗೆ ಸ್ಪರ್ಧಿಸದೆ RJD ಜೊತೆ ಕೈಜೋಡಿಸಿದ ಸಂದರ್ಭವನ್ನು ಹೊರತುಪಡಿಸಿ, 2005ರಿಂದ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಎನ್‌ಡಿಎ ಸತತ ಗೆಲುವು ಸಾಧಿಸಿರುವುದಕ್ಕೆ ನಿತೀಶ್ ಅವರ ಹಲವಾರು ಮಹಿಳಾ ಪರ ಕ್ರಮಗಳು ಕಾರಣ.

ಇದಕ್ಕೆ ಬದಲಾಗಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ತಮ್ಮ ಪಕ್ಷ ಮತ್ತು ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ, ಜೀವಿಕಾ ಕಮ್ಯುನಿಟಿ ಮೊಬಿಲೈಸರ್ (ಸಿಎಂ) ಕಾರ್ಮಿಕರನ್ನು 30,000 ರೂ. ಮಾಸಿಕ ವೇತನದೊಂದಿಗೆ ಕಾಯಂ ಸರ್ಕಾರಿ ನೌಕರರನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.

'ಹೀಗಾಗಿ, ಹೆಚ್ಚಿನ ಮತದಾನವು ಎನ್‌ಡಿಎಗೆ ಅನುಕೂಲಕರವಾಗಿರಬಹುದು. ಆದರೆ, ತೇಜಸ್ವಿಯವರ ಭರವಸೆಯು ಮಹಿಳೆಯರಲ್ಲಿಯೂ ಜನಪ್ರಿಯತೆಯನ್ನು ಗಳಿಸಿದೆ ಎಂಬುದು ನಿರಾಕರಿಸಲಾಗದ ಸಂಗತಿಯಾಗಿದೆ' ಎಂದು ರಾಜಕೀಯ ವಿಶ್ಲೇಷಕರೊಬ್ಬರು ಹೇಳಿದ್ದಾರೆ.

ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿಯೂ ಮತದಾನದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಮುಸ್ಲಿಂ ಪ್ರಾಬಲ್ಯವಿರುವ ಸೀಮಾಂಚಲ್ ಮತ್ತು ಕೋಸಿ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಕಿಶನ್‌ಗಂಜ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ 78.16 ರಷ್ಟು ಮತದಾನವಾಗಿದೆ.

ಕಿಶನ್‌ಗಂಜ್ ಸದರ್ ಕ್ಷೇತ್ರದಲ್ಲಿ ಶೇ 79.93 ರಷ್ಟು ಮತದಾನ ದಾಖಲಾಗಿದ್ದು, 2020ಕ್ಕೆ ಹೋಲಿಸಿದರೆ ಶೇ 19.07 ರಷ್ಟು ಹೆಚ್ಚಳವಾಗಿದೆ. ಅದೇ ರೀತಿ, ಕತಿಹಾರ್ (ಶೇ 77.93) ಶೇ 13.26 ರಷ್ಟು ಮತ್ತು ಕೊಚಧಮನ್‌ನಲ್ಲಿ (ಶೇ 76.84) ಶೇ 12.20ರಷ್ಟು ಮತದಾನ ದಾಖಲಾಗಿದೆ.

Voters wait in a queue to cast votes at a polling station during the first phase of the Bihar Assembly elections, at Danapur in Patna
ಬಿಹಾರಕ್ಕೆ ಬೇಕಿರುವುದು ಫಲಿತಾಂಶ, ಗೌರವ, ಅಭಿವೃದ್ಧಿಯೇ ಹೊರತು ಪೊಳ್ಳು ಭಾಷಣವಲ್ಲ: ತೇಜಸ್ವಿ ಯಾದವ್

ಕೋಸಿ ಪ್ರದೇಶದಲ್ಲಿನ ಕಸ್ಬಾದಲ್ಲಿ ಅತಿ ಹೆಚ್ಚು ಶೇ 81.74 ರಷ್ಟು ಮತದಾನವಾಗಿದ್ದು, ಪೂರ್ಣಿಯಾದಲ್ಲಿ ಶೇ 79.95 ರಷ್ಟು ಮತದಾನವಾಗಿದೆ. ಆದಾಗ್ಯೂ, ಬಿಹಾರದ 32 ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳ ಪೈಕಿ ಪೂರ್ಣಿಯಾದಲ್ಲಿ ಅತಿ ಹೆಚ್ಚು ಮತದಾನ (ಶೇ 21.14) ದಾಖಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಜಮಿಯತ್ ಉಲೇಮಾ-ಎ-ಹಿಂದ್ ಬಿಹಾರ ಕಾರ್ಯದರ್ಶಿ ಡಾ. ಅನ್ವರುಲ್ ಹುದಾ, ವಕ್ಫ್ ತಿದ್ದುಪಡಿ ಮಸೂದೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಉರ್ದು ಶಿಕ್ಷಕರ ನೇಮಕಾತಿ ಮಾಡದಿರುವುದು ಸೇರಿದಂತೆ ಮುಸ್ಲಿಮರಿಗೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ನಿತೀಶ್ ಕುಮಾರ್ ಅವರ ನಿಲುವಿನ ನಂತರ ಮುಸ್ಲಿಮರು ಅವರ ಬಗ್ಗೆ ಮತ್ತಷ್ಟು ನಿರಾಶೆಗೊಂಡಿದ್ದಾರೆ ಎಂದು ಹೇಳಿದರು.

ಮುಸ್ಲಿಮರು ಗುಂಪು ಗುಂಪಾಗಿ ತಮ್ಮ ಮನೆಗಳಿಂದ ಹೊರಬಂದು ಸದ್ಯದ ವ್ಯವಸ್ಥೆಯ ವಿರುದ್ಧ ಮತ ಚಲಾಯಿಸಿದರು ಎಂದು ಅವರು ಹೇಳಿದರು.

ಮತ್ತೊಂದೆಡೆ, ಸ್ಮಶಾನಗಳ ಸುತ್ತ ಗಡಿ ಗೋಡೆಗಳ ನಿರ್ಮಾಣ ಸೇರಿದಂತೆ ತಮ್ಮ ಅಭಿವೃದ್ಧಿಗೆ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದರಿಂದ ಮುಸ್ಲಿಮರ ಒಂದು ಭಾಗವು ಇನ್ನೂ ಅವರ ಮೇಲೆ ನಂಬಿಕೆಯನ್ನು ಹೊಂದಿದೆ ಎಂದು ಮತ್ತೊಬ್ಬ ಮುಸ್ಲಿಂ ನಾಯಕರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com