

ಕಣ್ಣೂರು: ಕೇರಳದ ಕಣ್ಣೂರಿನ ಪಾಲಥೈನಲ್ಲಿ ಶಾಲಾ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕನಿಗೆ POCSO ಕಾಯ್ದೆಯಡಿ ಶಿಕ್ಷೆ ವಿಧಿಸಲಾಗಿದೆ. ನಾಲ್ಕನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ಮುಖಂಡ ಕೆ. ಪದ್ಮರಾಜನ್ ಗೆ ಜೀವನ ಪರ್ಯಾಂತ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯವು ಭಾರಿ ದಂಡವನ್ನೂ ವಿಧಿಸಿದೆ.
ಅಪರಾಧಿ ಪೋಕ್ಸೋ ಕಾಯ್ದೆಯಡಿ 40 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಲಿದ್ದಾರೆ. ಈ ಶಿಕ್ಷೆಯನ್ನು ತಲಶ್ಶೇರಿ ಫಾಸ್ಟ್-ಟ್ರ್ಯಾಕ್ ಪೋಕ್ಸೋ ನ್ಯಾಯಾಲಯವು ನೀಡಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ನಾಯಕ ಪದ್ಮರಾಜನ್ ತಪ್ಪಿತಸ್ಥ ಎಂದು ನ್ಯಾಯಾಲಯ ಶುಕ್ರವಾರ ಘೋಷಿಸಿತ್ತು. ಪೋಕ್ಸೋ ಕಾಯ್ದೆಯಡಿ ಅವರಿಗೆ ಗರಿಷ್ಠ ಇಪ್ಪತ್ತು ವರ್ಷಗಳ ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಿತ್ತು. ತನಿಖಾ ತಂಡವನ್ನು ಐದು ಬಾರಿ ಬದಲಾಯಿಸಲಾಗಿರುವುದರಿಂದ ಮತ್ತು ಮಧ್ಯಂತರ ಆರೋಪಪಟ್ಟಿಯಲ್ಲಿ ಪೋಕ್ಸೋ ವಿಭಾಗಗಳನ್ನು ಸೇರಿಸದ ಕಾರಣ ಪ್ರಕರಣವು ರಾಜಕೀಯ ವಿವಾದವನ್ನು ಹುಟ್ಟುಹಾಕಿತ್ತು.
ಪದ್ಮರಾಜನ್ ವಿರುದ್ಧ ಸೆಕ್ಷನ್ 376AB (ಅತ್ಯಾಚಾರ) ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಆರೋಪ ಹೊರಿಸಲಾಗಿದೆ. ಪದ್ಮರಾಜನ್ 9 ವರ್ಷದ ಬಾಲಕಿಯ ಮೇಲೆ ಶಾಲೆಯ ಒಳಗೆ ಮತ್ತು ಹೊರಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ತಪ್ಪಿತಸ್ಥನೆಂದು ಸಾಬೀತಾಯಿತು. 2020ರ ಜನವರಿ ಮತ್ತು ಫೆಬ್ರವರಿಯಲ್ಲಿ ಮೂರು ಬಾರಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದನು. ಈ ಬಗ್ಗೆ ಪಾನೂರು ಪೊಲೀಸರು ತಲಶ್ಶೇರಿಯ ಉಪ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ದಾಖಲಿಸಿದರು.
ಆರಂಭಿಕ ತನಿಖೆಯಲ್ಲಿ ದೂರು ಸುಳ್ಳು ಎಂದು ಕಂಡುಬಂದಿದ್ದು, ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ಇನ್ನು 2020ರ ಏಪ್ರಿಲ್ 15ರಂದು, ಪದ್ಮರಾಜನ್ ಅವರನ್ನು ಅವರ ಸಂಬಂಧಿಕರ ಮನೆಯಲ್ಲಿ ಬಂಧಿಸಲಾಗಿದ್ದು ನಂತರ ತನಿಖೆಯನ್ನು ಅಪರಾಧ ಶಾಖೆಗೆ ವರ್ಗಾಯಿಸಲಾಯಿತು. ಅಪರಾಧ ಶಾಖೆಯು ತನ್ನ ಆರೋಪ ಪಟ್ಟಿಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಿಲ್ಲ. ಐದು ಪ್ರತ್ಯೇಕ ತನಿಖಾ ತಂಡಗಳು ತನಿಖೆ ನಡೆಸಿ, ಮೇ 2021ರಲ್ಲಿ ಅಂತಿಮ ಆರೋಪ ಪಟ್ಟಿಯನ್ನು ಸಲ್ಲಿಸಿದವು.
Advertisement