

ಅಹಮದಾಬಾದ್: ಊಟ ಮತ್ತು ಹಣದ ವಿಚಾರವಾಗಿ ಗಲಾಟೆ ನಡೆದು ಮದುವೆ ದಿನವೇ ವರ ಕಬ್ಬಿಣದ ರಾಡ್ ನಿಂದ ಹೊಡೆದು ವಧುವನ್ನು ಹತ್ಯೆ ಮಾಡಿರುವ ಘಟನೆ ಗುಜರಾತ್‌ನ ಭಾವ್ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಆಕೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದ ಆರೋಪಿ, ಕೊಲೆಯಾದ ತಕ್ಷಣ ಪರಾರಿಯಾಗಿದ್ದಾನೆ.
ತಾಳಿಕಟ್ಟುವ ಸ್ವಲ್ಪ ಮುಂಚೆ ನಡೆದ ಈ ಕೊಲೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಭುದಾಸ್ ಸರೋವರ ಪ್ರದೇಶದ ಟೆಕ್ರಿ ಚೌಕ್ ಬಳಿ ಈ ಘಟನೆ ನಡೆದಿದ್ದು, 22 ವರ್ಷದ ಸೋನಿ ರಾಥೋಡ್‌ಳನ್ನು ಆಕೆಯ ಬಾವಿ ಪತಿ ಸಾಜನ್ ಬರಯ್ಯ ಕೊಲೆ ಮಾಡಿದ್ದಾನೆ. ಹಂತಕ ಆಕೆಯೊಡನೆ ತಿಂಗಳುಗಟ್ಟಲೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.
ಊಟ ಮತ್ತು ಹಣದ ವಿಚಾರವಾಗಿ ಬೆಳಗಿನ ಜಾವ ಜಗಳವಾಗಿದೆ. ಇದು ಹಿಂಸಾಚಾರಕ್ಕೆ ತಿರುಗಿದ್ದು, ಸಾಜನ್ ಕಬ್ಬಿಣದ ರಾಡ್ ನಿಂದ ಸೋನಿಯ ತಲೆ ಮತ್ತು ದೇಹದ ಮೇಲೆ ಪದೇ ಪದೇ ಹೊಡೆದಿದ್ದಾನೆ. ಅಲ್ಲದೇ ಆಕೆಯ ತಲೆಯನ್ನು ಗೋಡೆಗೆ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇಂದು ಬೆಳಗ್ಗೆ ವಧುವಿನ ಮನೆಗೆ ವರ ಆಗಮಿಸಿದಾಗ ಅವರಿಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ತಾಳ್ಮೆ ಕಳೆದುಕೊಂಡ ಸಾಜನ್, ಕಬ್ಬಿಣದ ರಾಡ್ ನಿಂದ ವಧುವಿನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಆಕೆಯನ್ನು ಗೋಡೆಗೆ ನೂಕಿದಾಗ ತಲೆಗೆ ಗಾಯವಾಗಿದೆ. ಹಲ್ಲೆ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಡಿವೈಎಸ್ ಪಿ ತಿಳಿಸಿದ್ದಾರೆ.
ನಿನ್ನೆಯಷ್ಟೇ ಸೋನಿಯ ಕುಟುಂಬದ ಸದಸ್ಯರೊಬ್ಬಅಂತ್ಯಕ್ರಿಯೆ ನಡೆದಿತ್ತು ಎನ್ನಲಾಗಿದೆ. ಪರಾರಿಯಾಗಿರುವ ಹಂತಕನಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
Advertisement