

ಚೆನ್ನೈ; work-life balance, ಕೌಟುಂಬಿಕ ಜೀವನದ ನಿರ್ವಹಣೆ ಈಗಿನ ಉದ್ಯಮಿಗಳಿಗೆ ಎದುರಾಗುವ ಬಹುದೊಡ್ಡ ಸವಾಲಾಗಿದೆ. ಹಲವರು ವೃತ್ತಿ, ಉದ್ಯಮದಲ್ಲಿ ಯಶಸ್ಸು ಗಳಿಸುವುದಕ್ಕಾಗಿ, ವಿವಾಹವಾಗುವುದು, ಮಕ್ಕಳು ಹೆರುವುದನ್ನು ಮುಂದೂಡುತ್ತಾರೆ, ಇಲ್ಲವೇ ಆ ಕನಸುಗಳನ್ನು ಕೈಬಿಡುತ್ತಾರೆ. ಈ ಬಗ್ಗೆ ಹಲವು ಚರ್ಚೆಗಳಾಗಿದ್ದಿವೆ. ಈಗ ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಈ ವಿಷಯಗಳ ಬಗ್ಗೆ ನೀಡಿರುವ ಸಲಹೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ, ಟೀಕೆಗಳಿಗೆ ಕಾರಣವಾಗುತ್ತಿದೆ.
ಉಪಸಾನಾ ಕೊನಿಡೇಲಾ ನೀಡಿರುವ ಹೇಳಿಕೆಗೆ ಶ್ರೀಧರ್ ವೆಂಬು ಪ್ರತಿಕ್ರಿಯೆ ನೀಡಿದ್ದರಿಂದ ಈ ಚರ್ಚೆ ವ್ಯಾಪಕವಾಗುತ್ತಿದೆ. ಮಹಿಳೆಯರ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದ ಉಪಾಸನಾ ಕೊನಿಡೇಲಾ ಮದುವೆ ಮತ್ತು ತಾಯ್ತನದಲ್ಲಿ ವೈಯಕ್ತಿಕ ಆಯ್ಕೆಗಾಗಿ ಅಂಡಾಣುಗಳನ್ನು ಉಳಿಸುವ ಮಹತ್ವವನ್ನು ಒತ್ತಿ ಹೇಳಿದ್ದರು.
ಉದ್ಯಮಿ ಉಪಾಸನಾ ಕಮಿನೇನಿ ಕೊನಿಡೇಲಾ ಇತ್ತೀಚೆಗೆ ಹೈದರಾಬಾದ್‌ನ ಐಐಟಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯದ ಮಹತ್ವದ ಕುರಿತು ಮಾತನಾಡಿದರು, ಈ ವೇಳೆ ಮಹಿಳೆ ಅಂಡಾಣುಗಳನ್ನು ಉಳಿಸುವುದು "ಮಹಿಳೆಯರಿಗೆ ಅತಿದೊಡ್ಡ ವಿಮೆ" ಎಂದು ಹೇಳಿದ್ದಾರೆ.
ತೆಲುಗು ಸಿನಿಮಾ ತಾರೆ ರಾಮ್ ಚರಣ್ ಅವರನ್ನು ವಿವಾಹವಾದ ಕೊನಿಡೇಲಾ ಅವರ ಭಾಷಣದ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ತಮ್ಮ ಆರ್ಥಿಕ ಸ್ವಾತಂತ್ರ್ಯವು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.
"ಮಹಿಳೆಯರಿಗೆ ಅತಿದೊಡ್ಡ ವಿಮೆ ಎಂದರೆ ಅದು ನಿಮ್ಮ ಅಂಡಾಣುಗಳನ್ನು ಉಳಿಸುವುದಾಗಿದೆ. ಏಕೆಂದರೆ ಈ ರೀತಿ ಮಾಡಿದಾಗ, ನೀವು ಆರ್ಥಿಕವಾಗಿ ಸಬಲರಾದಾಗ, ನೀವು ಯಾವಾಗ ಮದುವೆಯಾಗಬೇಕು, ನಿಮ್ಮ ಸ್ವಂತ ನಿಯಮಗಳ ಮೇಲೆ ಮಕ್ಕಳನ್ನು ಪಡೆಯುವ ಆಯ್ಕೆ ನಿಮ್ಮ ಕೈಲಿ ಇರುತ್ತದೆ" ಎಂದು ಅವರು ಹೇಳಿದ್ದಾರೆ.
"ಇಂದು, ನಾನು ನನ್ನ ಸ್ವಂತ ಕಾಲಿನ ಮೇಲೆ ನಿಲ್ಲುತ್ತೇನೆ. ನಾನು ನನಗಾಗಿ ಜೀವನ ಸಾಗಿಸುತ್ತೇನೆ. ನಾನು ಹೆಮ್ಮೆಯಿಂದ ಆರ್ಥಿಕವಾಗಿ ಸ್ವತಂತ್ರನಾಗಿದ್ದೇನೆ. ಈ ಭದ್ರತೆ ನನ್ನ ಜೀವನದಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ನನ್ನನ್ನು ಬಲಶಾಲಿ ಮತ್ತು ಆತ್ಮವಿಶ್ವಾಸದಿಂದ ಇರುವಂತೆ ಮಾಡಿತು". ಉಪಸನಾ ಈಗ ಎರಡನೇ ಮಗುವಿನ ತಾಯಿಯಾಗುತ್ತಿದ್ದು, ಈ ಹಿಂದೆ ತಮ್ಮದೇ ಅಂಡಾಣುವನ್ನು ಸಂಗ್ರಹಿಸಿ ಸಂರಕ್ಷಿಸಿದ್ದರ ಬಗ್ಗೆ ಮಾತನಾಡಿದ್ದರು.
ಕೊನಿಡೇಲಾ ಅವರ ಅಭಿಪ್ರಾಯಗಳು ಪೋಸ್ಟ್ X ನಲ್ಲಿ ಚರ್ಚೆಗೆ ಕಾರಣವಾಗಿದೆ. ಉಪಾಸನಾ ಕೊನಿಡೇಲಾ ಅವರ ಐಐಟಿ ಹೈದರಾಬಾದ್ ವೀಡಿಯೊಗೆ ಜೊಹೊ ಬಿಲಿಯನೇರ್ ಶ್ರೀಧರ್ ವೆಂಬು ಪ್ರತಿಕ್ರಿಯಿಸಿದ್ದಾರೆ
ಉಪಸನಾ ಅವರ ಅಭಿಪ್ರಾಯಕ್ಕೆ ಭಿನ್ನ ನಿಲುವು ಹೊಂದಿರುವವರ ಪೈಕಿ ಜೊಹೊ ಸಂಸ್ಥಾಪಕ ಮತ್ತು ಮಾಜಿ ಸಿಇಒ ಶ್ರೀಧರ್ ವೆಂಬು ಕೂಡ ಸೇರಿದ್ದಾರೆ. ಯುವ ಉದ್ಯಮಿಗಳು "ಸಮಾಜಕ್ಕೆ ಮತ್ತು ಅವರ ಸ್ವಂತ ಪೂರ್ವಜರಿಗೆ ಜನಸಂಖ್ಯೆಗೆ ಸಂಬಂಧಿಸಿದ ಕರ್ತವ್ಯ (ಋಣ)" ಹೊಂದಿದ್ದಾರೆಂದು ನಂಬುತ್ತಾರೆ. ಉದ್ಯಮಿಗಳು ಮದುವೆಯಾಗಿ ತಮ್ಮ 20ರ ವಯಸ್ಸಿನಲ್ಲಿ ಮದುವೆಯಾಗಿ ಮಕ್ಕಳನ್ನು ಹೊಂದಬೇಕು ಎಂದು ವೆಂಬು ಅಭಿಪ್ರಾಯಪಟ್ಟಿದ್ದಾರೆ.
"ನಾನು ಭೇಟಿಯಾಗುವ ಪುರುಷರು ಮತ್ತು ಮಹಿಳಾ ಯುವ ಉದ್ಯಮಿಗಳಿಗೆ ನನ್ನ ಸಲಹೆ ಏನೆಂದರೆ, ಇಬ್ಬರೂ 20ರ ವಯಸ್ಸಿನಲ್ಲಿ ಮದುವೆಯಾಗಿ, ಮಕ್ಕಳನ್ನು ಪಡೆಯಿರಿ ಮತ್ತು ಅದನ್ನು ಮುಂದೂಡುತ್ತಲೇ ಇರಬೇಡಿ. ಅವರು ಸಮಾಜಕ್ಕೆ ಮತ್ತು ಅವರ ಸ್ವಂತ ಪೂರ್ವಜರೆಡೆಗೆ ತಮ್ಮ ಜನಸಂಖ್ಯಾ ಕರ್ತವ್ಯವನ್ನು ನಿಭಾಯಿಸಬೇಕಿದೆ ಎಂದು ನಾನು ಅವರಿಗೆ ಹೇಳುತ್ತೇನೆ. ಈ ಕಲ್ಪನೆಗಳು ವಿಲಕ್ಷಣ ಅಥವಾ ಹಳೆಯ ಶೈಲಿಯಂತೆ ತೋರುತ್ತದೆಯಾದರೂ, ಈ ವಿಚಾರಗಳು ಮತ್ತೆ ಪ್ರತಿಧ್ವನಿಸುತ್ತವೆ ಎಂದು ನನಗೆ ಖಚಿತವಾಗಿದೆ" ಎಂದು ವೆಂಬು X ನಲ್ಲಿ ಹೇಳಿದ್ದು ಉಪಾಸನಾ ಕೊನಿಡೇಲಾ ಅವರು ಐಐಟಿ ಹೈದರಾಬಾದ್ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದ ವೈರಲ್ ವೀಡಿಯೊವನ್ನು ಮರು ಪೋಸ್ಟ್ ಮಾಡಿದ್ದಾರೆ.
ಕಳೆದ ತಿಂಗಳು, ಉಪಾಸನಾ ಮತ್ತು ರಾಮ್ ಚರಣ್ ದಂಪತಿ ತಮ್ಮ ಎರಡನೇ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದ್ದಾರೆ. ದಂಪತಿ ಬೇಬಿ ಶವರ್ ಸಮಾರಂಭದ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸೂಪರ್‌ಸ್ಟಾರ್ ಚಿರಂಜೀವಿ ಮತ್ತು ಪತ್ನಿ ಸುರೇಖಾ ಅವರೊಂದಿಗೆ ಪೋಸ್ಟ್ ಮಾಡಿದ್ದರು. ಈ ದಂಪತಿಗಳು 2023 ರಲ್ಲಿ ತಮ್ಮ ಮೊದಲ ಮಗು ಮಗಳು ಕ್ಲಿನ್ ಕಾರಾಳನ್ನು ಸ್ವಾಗತಿಸಿದ್ದರು.
Advertisement