

ನವದೆಹಲಿ: ಅರುಣಾಚಲ ಪ್ರದೇಶವನ್ನು ಚೈನಾಗೆ ಬಿಟ್ಟುಕೊಡಲಾಗುವುದು ಎಂದು ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆ ನೀಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಸರ್ಕಾರ,ಇದು ನಕಲಿ ವೀಡಿಯೊ ಎಂದು ತಿಳಿಸಿದೆ.
ಅರುಣಾಚಲ ಪ್ರದೇಶವನ್ನು ಚೈನಾಗೆ ಬಿಟ್ಟುಕೊಡಲಾಗುವುದು. ಅದರ ಬದಲಿಗೆ ಬೀಜಿಂಗ್ ಪಾಕಿಸ್ತಾನಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸಲಿ ಎಂದು ದ್ವಿವೇದಿ ಹೇಳಿಕೆ ನೀಡಿದ್ದಾರೆಂಬ ನಕಲಿ ವೀಡಿಯೊ ಹರಿದಾಡುತ್ತಿದೆ.
ಡಿಜಿಟಲ್ ತಂತ್ರಜ್ಞಾನ ಬಳಸಿ ದ್ವಿವೇದಿ ಅವರ ಮೂಲ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಪಿಐಬಿಯ ಸತ್ಯ ಪರಿಶೋಧನಾ ಘಟಕ (PIBFact check) ಇದನ್ನು ಪತ್ತೆಹಚ್ಚಿ ಈ ಬಗ್ಗೆ ಎಚ್ಚರಿಕೆ ನೀಡಿದೆ. ಭಾರತೀಯ ಸಶಸ್ತ್ರ ಪಡೆಗಳ ಕುರಿತು ತಪ್ಪು ಮಾಹಿತಿ ನೀಡುವ ಮತ್ತು ವಿಶ್ವಾಸವನ್ನು ಕುಂದಿಸುವ ಕೃತಕ ಬುದ್ಧಿಮತ್ತೆ ಆಧಾರಿತ ಇಂತಹ ನಕಲಿ ವೀಡಿಯೊಗಳನ್ನು ಪಾಕಿಸ್ತಾನ ಪ್ರಚಾರ ಮಾಡುತ್ತಿದೆ ಎಂದು ಘಟಕ ತಿಳಿಸಿದೆ.
Advertisement