

ರಾಜ್ ಕೋಟ್: ಸಾಕುನಾಯಿಯೊಂದು ಮಹಿಳೆಯೊಬ್ಬರಿಗೆ ಕಚ್ಚಿದ್ದು ಈ ವೇಳೆ ಇದನ್ನು ಪ್ರಶ್ನಿಸಿದ ಸಂತ್ರಸ್ಥೆಗೆ ನಾಯಿಯ ಮಾಲೀಕರೂ ಕೂಡ ಥಳಿಸಿರುವ ಘಟನೆ ವರದಿಯಾಗಿದೆ.
ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ ಕೊಥಾರಿಯಾ ಪ್ರದೇಶದ ರೋಲೆಕ್ಸ್ ರಸ್ತೆಯಲ್ಲಿರುವ ಸುರ್ಭಿ ಪಾಸಿಬಲ್ ಅಪಾರ್ಟ್ ಮೆಂಟ್ ನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಸಾಕು ನಾಯಿ ಮಹಿಳೆಯ ಮೇಲೆ ದಾಳಿ ಮಾಡಿದೆ. ಈ ವೇಳೆ ಆಕೆ ನಾಯಿಯನ್ನು ಹಿಡಿದುಕೊಳ್ಳುವಂತೆ ಅದರ ಮಾಲೀಕರಿಗೆ ಹೇಳಿದ್ದಾರೆ.
ಆದರೆ ಸಂತ್ರಸ್ಥೆಗೆ ಸಹಾಯ ಮಾಡುವ ಬದಲು ಆಕ್ರೋಶಗೊಂಡ ಮಾಲಕಿ ನೋಡ ನೋಡುತ್ತಲೇ ಸಂತ್ರಸ್ಥೆ ಮೇಲೆ ಕಪಾಳ ಮೋಕ್ಷ ಮಾಡಿ ನಿಂದಿಸಿದ್ದಾರೆ. , ಆದರೆ ನಾಯಿಯ ಮಾಲೀಕರು ಬಲಿಪಶುವಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇವಿಷ್ಟೂ ಘಟನೆ ಕಟ್ಟಡದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸ್ಥಳೀಯ ವರದಿಗಳ ಪ್ರಕಾರ, ನಾಯಿ ಪಾಯಲ್ ಗೋಸ್ವಾಮಿ ಎಂಬ ಮಹಿಳೆಗೆ ಸೇರಿದ್ದು ಎಂದು ತಿಳಿದುಬಂದಿದೆ.
ಅಪಾರ್ಟ್ ಮೆಂಟ್ ನಿವಾಸಿ ಕಿರಣ್ ವಘೇಲಾ ಎನ್ನುವವರು ಲಿಫ್ಟ್‌ಗಾಗಿ ಕಾಯುತ್ತಿದ್ದಾಗ ಪಾಯಲ್ ಗೋಸ್ವಾಮಿ ಅವರ ಸಾಕು ನಾಯಿ ನೋಡ ನೋಡುತ್ತಲೇ ಅವರ ಕಾಲಿಗೆ ಬಾಯಿ ಹಾಕಿದೆ. ಈ ವೇಳೆ ನಾಯಿಯಿಂದ ಪಾರಾದ ಅವರು ಅದರ ಹಿಂದೆ ಬರುತ್ತಿದ್ದ ಅದರ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ನಾಯಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುವಂತೆ ಜಾಗರೂಕರಾಗಿರಿ ಎಂದು ಕೇಳಿದ್ದಾರೆ.
ಈ ವೇಳೆ ವಘೇಲಾಗೆ ಸಹಾಯ ಮಾಡುವ ಬದಲು, ನಾಯಿಯ ಮಾಲೀಕರು ಕೋಪಗೊಂಡು ಆಕೆಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಕ್ಸಮರ ನಡೆದಿದೆ. ನಾಯಿ ಮಾಲೀಕರ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
Advertisement